ಕಾನೂನು

ಗೌಪ್ಯತೆ ನೀತಿ

1. ನಾವು ಸಂಗ್ರಹಿಸುವ ಮಾಹಿತಿಯ ಪ್ರಕಾರಗಳು

ನಿಮ್ಮ ಬಗ್ಗೆ ಈ ಕೆಳಗಿನ ಮಾಹಿತಿಯನ್ನು ನಾವು ಸಂಗ್ರಹಿಸಬಹುದು ಮತ್ತು ಬಳಸಬಹುದು:

 • ನೀವು ನಮಗೆ ನೀಡಿದ ಮಾಹಿತಿ. ನೀವು ಈ ವೇದಿಕೆಯನ್ನು ಬಳಸಲು ನೋಂದಾಯಿಸಿಕೊಳ್ಳುವಾಗ ನಿಮ್ಮ ಹೆಸರು, ವಯಸ್ಸು, ಲಿಂಗ, ವಿಳಾಸ, ಇಮೇಲ್ ವಿಳಾಸ, ಸೋಶಿಯಲ್ ಮೀಡಿಯಾ ಲಾಗಿನ್ ವಿವರಗಳು, ದೂರವಾಣಿ ಸಂಖ್ಯೆ ಮತ್ತು ಹಣಕಾಸು ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ನಿಮ್ಮ ಛಾಯಾಚಿತ್ರ ಭಾಷೆಯ ಆಯ್ಕೆ ಮಾಹಿತಿಯನ್ನು ನೀಡಬೇಕಾಗಬಹುದು. ಹೆಚ್ಚುವರಿಯಾಗಿ, ಇವುಗಳೊಂದಿಗೆ ನಿಮ್ಮ ಗ್ರಾಹಕ ಪ್ರೊಫೈಲ್, ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ನೀವು ಮಾಡಿದ ಕಮೆಂಟ್ ಗಳು (ಬಳಕೆದಾರರಿಗೆ-ರಚಿಸಿದ ವಿಷಯಕ್ಕೆ ರಚಿಸಲಾದ ಯಾವುದೇ ವರ್ಚುವಲ್ ವಿಷಯಗಳನ್ನು ಒಳಗೊಂಡಂತೆ), ಅಕೌಂಟ್ ಮತ್ತು ಬಿಲ್ಲಿಂಗ್ ಮಾಹಿತಿಗಳು ಸೇರಿದಂತೆ ನಿಮ್ಮ ಆಪಲ್, ಗೂಗಲ್ ಅಥವಾ ವಿಂಡೋಸ್ ಖಾತೆ, ಪೇಪಾಲ್ ಅಥವಾ ಇತರ ಮೂರನೇ ವ್ಯಕ್ತಿಯ ಪಾವತಿಯು ಚಾನಲ್ ಖಾತೆಯ ಮಾಹಿತಿಯು ಪಾವತಿ ಅಥವಾ ನಗದು ಹಿಂತೆಗೆದುಕೊಳ್ಳುವ ಉದ್ದೇಶಕ್ಕಾಗಿ ಅಗತ್ಯವಿದೆ. ಇಷ್ಟೆ ಅಲ್ಲದೆ ಈ ಪ್ಲಾಟ್ ಫಾರ್ಮ್ ಬಳಸಲು ನೋಂದಾಯಿಸಿಕೊಂಡಾಗ ನೀವು ನೀಡಿದ ಬಳಕೆದಾರರ ಮಾಹಿತಿ, ಛಾಯಾಚಿತ್ರಗಳು ಮತ್ತು ವೀಡಿಯೊ ಕಟೆಂಟನ್ನು ಸಹ ಇದು ಒಳಗೊಂಡಿರುತ್ತದೆ. ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಅಥವಾ ಗೂಗಲ್ ನಂತಹ ಕೆಲವು ಸಾಮಾಜಿಕ ಜಾಲತಾಣ ಸೈಟ್ ಗಳ ನಿಮ್ಮ ಬಳಕೆದಾರ ಮಾಹಿತಿಯನ್ನು ನೀಡಿ ಸಹ ನೋಂದಾಯಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ನಮ್ಮ ಪ್ಲಾಟ್ ಫಾರ್ಮ್ ಬಳಕೆಗೆ ನೀವು ನೀಡಿದ ಕೆಲವು ಬಳಕೆದಾರ ಮಾಹಿತಿ ನಿಮ್ಮ ದೇಶದ ಕಾನೂನಿನ ಪರಿಧಿಯಲ್ಲಿ ಸೂಕ್ಷ್ಮ ಅಥವಾ ವಿಮರ್ಶಾತ್ಮಕವಾಗಿ ಪರಿಗಣಿಸುವಂತಹವುಗಳಾಗಿರಬಹುದು. ಅಂತಹ ಮಾಹಿತಿಯು ಸಂಬಂಧಿತ ಕಾನೂನಿಗೆ ಅನುಗುಣವಾಗಿ ವಿಶೇಷ ರಕ್ಷಣೆಗೆ ಮತ್ತು ಗೌಪ್ಯತೆಗೆ ಒಳಪಟ್ಟಿರುತ್ತದೆ.
 • ಸಾಮಾಜಿಕ ಜಾಲತಾಣದಲ್ಲಿ ನೀವು ಹಂಚಿಕೊಳ್ಳಲು ಆಯ್ಕೆ ಮಾಡಿದ ಮಾಹಿತಿ. ಸಾಮಾಜಿಕ ಜಾಲತಾಣ ಅಥವಾ ಸಾರ್ವಜನಿಕ ವೇದಿಕೆ ಖಾತೆಗಳಾದ (ಉದಾ. ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಮತ್ತು ಗೂಗಲ್) ಲಿಂಕ್ ಮಾಡಲು ನೀವು ಆಯ್ಕೆ ಮಾಡಿದರೆ, ನಿಮ್ಮ ಸಾಮಾಜಿಕ ಜಾಲತಾಣ ಅಥವಾ ಸಾರ್ವಜನಿಕ ಫೋರಂ ಖಾತೆಗಳಿಂದ ಮಾಹಿತಿಯನ್ನು ಪಡೆಯಲು ನೀವು ನಮಗೆ ಅವಕಾಶ ನೀಡಿದಂತೆ ಮತ್ತು ಇವು ನಮಗೆ ನಿಮ್ಮ ಸಂಪರ್ಕದಲ್ಲಿರುವ ಹೆಸರಿನ ಪಟ್ಟಿಯನ್ನು ಒದಗಿಸುತ್ತವೆ. ಈ ಡೇಟಾವು ನೀವು ಈ ಪ್ಲಾಟ್ ಫಾರ್ಮ್ ನ್ನು ಇತರ ಸಾರ್ವಜನಿಕ ವೇದಿಕೆಗಳು ಮತ್ತು / ಅಥವಾ ಸಾಮಾಜಿಕ ನೆಟ್ ವರ್ಕ್ ಗಳಲ್ಲಿ ಹೇಗೆ ಬಳಸುತ್ತಿದ್ದೀರಾ ಎಂಬ ಮಾಹಿತಿಯನ್ನು ಒಳಗೊಂಡಿರುತ್ತದೆ. ಸಾಮಾಜಿಕ ಜಾಲತಾಣ ಒದಗಿಸುವವರು ತಮ್ಮ ಡೇಟಾವನ್ನು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ನಾವು ಪ್ರಕ್ರಿಯೆಗೊಳಿಸುತ್ತೇವೆ ಎಂಬ ಹೆಚ್ಚಿನ ಮಾಹಿತಿಗಾಗಿ, ಈ ಸಾಮಾಜಿಕ ನೆಟ್ವರ್ಕ್ ಪೂರೈಕೆದಾರರ ಸಂಬಂಧಿತ ಗೌಪ್ಯತೆ ನೀತಿಗಳನ್ನು ನೋಡಿ.
 • ನಿಮ್ಮಿಂದ ನಾವು ಸಂಗ್ರಹಿಸುವ ತಾಂತ್ರಿಕ ಮಾಹಿತಿ. ನೀವು ನಮ್ಮ ಪ್ಲಾಟ್ ಫಾರ್ಮ್ ಬಳಸುವಾಗ ನಿಮ್ಮಿಂದ ಕೆಲವು ಮಾಹಿತಿಯನ್ನು ಸ್ವಯಂಚಾಲಿತವಾಗಿ ನಾವು ಸಂಗ್ರಹಿಸುತ್ತೇವೆ. ನಿಮ್ಮ ಐ.ಪಿ ವಿಳಾಸ, ನೀವಿರುವ ಸ್ಥಳ-ಸಂಬಂಧಿತ ಡೇಟಾ (ಕೆಳಗೆ ವಿವರಿಸಿದಂತೆ) ಅಥವಾ ಇತರ ವಿಶಿಷ್ಟ ಸಾಧನ ಗುರುತಿಸುವಿಕೆಗಳು, ನಿಮ್ಮ ಬ್ರೌಸಿಂಗ್ ಇತಿಹಾಸ (ನೀವು ಈ ಪ್ಲಾಟ್ ಫಾರ್ಮ್ ನಲ್ಲಿ ನೋಡಿದ ವಿಷಯವನ್ನು ಒಳಗೊಂಡಂತೆ), ಕುಕೀಸ್ (ಈ ಕೆಳಗೆ ಹೇಳಲಾದಂತೆ), ನಿಮ್ಮ ಮೊಬೈಲ್ ಡಿವೈಸ್, ಸಮಯ ವಲಯ ಸೆಟ್ಟಿಂಗ್, ನೀವು ಬಳಸುವ ಡಿವೈಸ್ ನ ಮಾದರಿ ಸೇರಿದಂತೆ ಮೊಬೈಲ್ ಅಥವಾ ಸಾಧನ ಮಾಹಿತಿ, ನಿಮ್ಮ ಸ್ಕ್ರೀನಿನ ರೆಸಲ್ಯೂಶನ್, ಆಪರೇಟಿಂಗ್ ಸಿಸ್ಟಮ್ ಕುರಿತಂತೆ ಹಾಗೂ ನಿಮ್ಮ ಪ್ಲಾಟ್ ಫಾರ್ಮ್ ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ಲಾಟ್ ಫಾರ್ಮ್ ಸಂಗ್ರಹಿಸುತ್ತದೆ.
 • ನಿಮ್ಮಿಂದ ನಾವು ಸಂಗ್ರಹಿಸುವ ಬಳಕೆದಾರರ ಮಾಹಿತಿ: ನೀವು ನಮ್ಮ ಸೇವೆ ಬಳಸಿಕೊಳ್ಳುವ ಕುರಿತ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಉದಾ. ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ಬಳಕೆದಾರರಿಗೆ ನೀಡಲಾದ ವಿಷಯಗಳು ಮತ್ತು ನಮ್ಮ ಕಂಟೆಂಟ್ ಬಳಸಿಕೊಂಡು ನೀವು ಪ್ರಸಾರ ಮಾಡಲು ಆಯ್ದುಕೊಂಡ ಯಾವುದೇ ವಿಷಯ ಮತ್ತು ವೀಡಿಯೊ ಕುರಿತು ನಿಮ್ಮ ಕಮೆಂಟ್ ಗಳು. ಹೆಚ್ಚುವರಿಯಾಗಿ, ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ನಿಮ್ಮ ಡಿವೈಸ್ ಬಳಸಿ ಮಾಡಿದ ಚಟುವಟಿಕೆಯನ್ನು ನಿಮ್ಮ ಇಮೇಲ್ ಅಥವಾ ಸಾಮಾಜಿಕ ಮಾಧ್ಯಮ ಲಾಗ್-ಇನ್ ವಿವರಗಳನ್ನು ಬಳಸಿಕೊಂಡು ನಿಮ್ಮ ಸಂಪರ್ಕ ಅಥವಾ ಚಂದಾದಾರ ಮಾಹಿತಿಗೆ ಲಿಂಕ್ ಮಾಡುತ್ತೇವೆ. ನಿಮ್ಮ ತೊಡಗಿಕೊಳ್ಳುವಿಕೆಯನ್ನು (ಲೈಕ್ ಗಳು, ಕಮೆಂಟ್ ಗಳು, ಪುನರಾವರ್ತಿತ ವೀಕ್ಷಣೆಗಳು) ಮತ್ತು ಸಂಬಂಧಿತ ಬಳಕೆದಾರ ವಿವರ ಸಂಗ್ರಹಿಸುತ್ತೇವೆ. ನೀವು ನಮ್ಮ ಪ್ಲಾಟ್ ಫಾರ್ಮ್ ಅನ್ನು ಬಳಸುತ್ತಿದ್ದು, ಅಲ್ಲಿ ಯಾವುದೇ ಕಮೆಂಟ್ ಮಾಡದೆ ಅಥವಾ ಅಪ್ಲೋಡ್ ಮಾಡದಿದ್ದಲ್ಲಿ ಮತ್ತು ಅದರ ಮೇಲೆ ಬ್ರೌಸಿಂಗ್ ಮಾತ್ರ ಮಾಡುತ್ತಿದ್ದರೆ ವೀಕ್ಷಣೆಯ ಮಾಹಿತಿ ಅಥವಾ ಸಾಮಾನ್ಯ ನಡವಳಿಕೆಯ ನಮೂನೆಗಳನ್ನು ಸಂಗ್ರಹಿಸುತ್ತೇವೆ. ಅಂತಿಮವಾಗಿ, ನಾವು opt-ins ಸಂವಹನವನ್ನು ಆದ್ಯತೆಯಾಗಿ ಸಂಗ್ರಹಿಸುತ್ತೇವೆ.
 • ನೀವಿರುವ ಸ್ಥಳದ ಡೇಟಾ. ನಿಮ್ಮ ಮೊಬೈಲ್ ನಲ್ಲಿ ಪ್ಲಾಟ್ ಫಾರ್ಮ್ ಬಳಸಿದಾಗ ನಿಮ್ಮ ಒಪ್ಪಿಗೆಯೊಂದಿಗೆ ನಿಮ್ಮ ಸ್ಥಳದ ಮಾಹಿತಿಯನ್ನು ನಾವು ಸಂಗ್ರಹಿಸಬಹುದು. ಹಾಗೆಯೇ ನಾವು ಜಾಗತಿಕ ಸ್ಥಾನೀಕರಣ ವ್ಯವಸ್ಥೆ (GPS) ಡೇಟಾ ಮತ್ತು ಮೊಬೈಲ್ ಸಾಧನದ ಸ್ಥಳ ಮಾಹಿತಿಯನ್ನು ಸಂಗ್ರಹಿಸಬಹುದು.
 • ಮೂರನೇ ವ್ಯಕ್ತಿಯಿಂದ ಮಾಹಿತಿ. ನಾವು ನಿರ್ವಹಿಸುವ ಇತರ ವೆಬ್ಸೈಟ್ ಗಳು ಅಥವಾ ನಾವು ಒದಗಿಸುವ ಇತರ ಸೇವೆಗಳನ್ನು ನೀವು ಬಳಸಿದರೆ ಮೂರನೇ ವ್ಯಕ್ತಿಗಳಿಂದ ನಾವು ನಿಮ್ಮ ಮಾಹಿತಿಯನ್ನು ಪಡೆಯುತ್ತೇವೆ. ಹಾಗೆಯೆ ನಾವು ಮೂರನೇ ವ್ಯಕ್ತಿಗಳಿಂದ (ಜಾಹೀರಾತು ಜಾಲಗಳು ಮತ್ತು ವಿಶ್ಲೇಷಣಾತ್ಮಕ ಪೂರೈಕೆದಾರರು) ಮತ್ತು ವ್ಯಾಪಾರ ಕೋಶಗಳು ಹಾಗೂ ವಾಣಿಜ್ಯಿಕವಾಗಿ ಅಥವಾ ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳು ಸೇರಿದಂತೆ ಇತರ ಮೂಲಗಳಿಂದ ನಾವು ನಿಮ್ಮ ಮಾಹಿತಿಯನ್ನು ಸ್ವೀಕರಿಸುತ್ತೇವೆ.
 • ನಿಮ್ಮ ಫೋನ್ ಮತ್ತು ಫೇಸ್ಬುಕ್ ಸಂಪರ್ಕಗಳು. (I) ನಿಮ್ಮ ಫೋನ್ ಸಂಪರ್ಕಗಳು (ii) ಫೇಸ್ಬುಕ್ ಸಂಪರ್ಕಗಳ ಮೂಲಕ ಈ ಪ್ಲಾಟ್ ಫಾರ್ಮ್ ನ ಇತರ ಬಳಕೆದಾರರನ್ನು ನೀವು ಹುಡುಕಬಹುದು. ನಿಮ್ಮ ಫೋನ್ ಸಂಪರ್ಕಗಳ ಮೂಲಕ ಇತರ ಬಳಕೆದಾರರನ್ನು ಹುಡುಕುವ ಆಯ್ಕೆಯನ್ನು ನೀವು ಬಳಸಿದರೆ, ನಾವು ನಿಮ್ಮ ಫೋನಿನಲ್ಲಿನ ಸಂಪರ್ಕಗಳ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಅವರ ಹೆಸರು, ಫೋನ್ ನಂಬರ್, ವಿಳಾಸ ಮತ್ತು ಇತರ ಯಾವುದೇ ಮಾಹಿತಿಯನ್ನು ನೀವು ಫೋನ್ ನಲ್ಲಿ ಸಂಗ್ರಹಿಸಿದ್ದಲ್ಲಿ ನಾವದನ್ನುಈಗಿರುವ ಬಳಕೆದಾರರೊಂದಿಗೆ ಅವರು ಮ್ಯಾಚ್ ಮಾಡಿಕೊಂಡು ಪ್ಲಾಟ್ ಪಾರ್ಮ್ ಬಳುಸುತ್ತಿದ್ದಾರಾ ಎಂದು ತಿಳಿಯುವ ಸಲುವಾಗಿ ಮಾಹಿತಿ ಪಡೆದುಕೊಳ್ಳುತ್ತೇವೆ. ನಿಮ್ಮ ಫೇಸ್ಬುಕ್ ಸಂಪರ್ಕಗಳ ಮೂಲಕ ಇತರ ಬಳಕೆದಾರರನ್ನು ಹುಡುಕಲು ನೀವು ಬಯಸಿದರೆ, ನಾವು ನಿಮ್ಮ ಸಾರ್ವಜನಿಕ ಫೇಸ್ಬುಕ್ ಮಾಹಿತಿ ಮತ್ತು ನಿಮ್ಮ ಫೇಸ್ಬುಕ್ ಸಂಪರ್ಕಗಳ ಹೆಸರುಗಳು ಮತ್ತು ಪ್ರೊಫೈಲ್ ಮಾಹಿತಿಯನ್ನು ಸಂಗ್ರಹಿಸುತ್ತೇವೆ.
 • ಸಂದೇಶಗಳು. ನಮ್ಮ ಸೇವೆಯನ್ನು ಬಳಸಿಕೊಂಡು ಸಂದೇಶಗಳನ್ನು ರಚಿಸುವ, ಕಳುಹಿಸುವ ಅಥವಾ ಸ್ವೀಕರಿಸುವ ಸಂದರ್ಭಗಳಲ್ಲಿ ನೀವು ಒದಗಿಸುವ ಮಾಹಿತಿಯನ್ನು (ಸ್ಕ್ಯಾನಿಂಗ್ ಮತ್ತು ವಿಶ್ಲೇಷಣೆ ಒಳಗೊಂಡಿರುವ), ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೂಡ ಒಳಗೊಂಡಂತೆ ನಾವು ಸಂಗ್ರಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ (ಅಂದರೆ ಸಂದೇಶವನ್ನು ಕಳುಹಿಸಿದಾಗ, ಸ್ವೀಕರಿಸಿದ ಮತ್ತು ಸ್ವೀಕರಿಸಿದ ವಿಷಯಗಳ ಬಗ್ಗೆ ಮಾಹಿತಿ / ಅಥವಾ ಸಂವಹನ ಭಾಗವಹಿಸುವವರು). ನಮ್ಮ ಸೇವೆಯ ಇತರ ಬಳಕೆದಾರರಿಗೆ ಕಳುಹಿಸಿದ ಸಂದೇಶಗಳು ಬೇರೆ ಬಳಕೆದಾರರಿಗೂ ತಲುಪಬಹುದು ಮತ್ತು ಆ ಬಳಕೆದಾರರು ಸಂದೇಶಗಳನ್ನು ಬಳಸಿಕೊಳ್ಳುವ ಅಥವಾ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ನಾವು ಜವಾಬ್ದಾರರಾಗಿರುವುದಿಲ್ಲ. ಈ ಕುರಿತು ಎಚ್ಚರಿಕೆಯಿಂದಿರಿ.
 • ಮೆಟಾಡೇಟಾ. ನೀವು ಪ್ಲಾಟ್ ಫಾರ್ಮ್ ನಲ್ಲಿ ವೀಡಿಯೊ ಅಪ್ಲೋಡ್ ಮಾಡಿದಾಗ ("ಬಳಕೆದಾರ ಕಂಟೆಂಟ್"), ನೀವು ಬಳಕೆದಾರ ವಿಷಯದೊಂದಿಗೆ ಸಂಪರ್ಕ ಹೊಂದಿದ ಕೆಲವು ಮೆಟಾಡೇಟಾವನ್ನು ಸ್ವಯಂಚಾಲಿತವಾಗಿ ಅಪ್ಲೋಡ್ ಮಾಡುತ್ತಿರಾ. ಮೂಲಭೂತವಾಗಿ, ಮೆಟಾಡೇಟಾ ಇತರ ಡೇಟಾವನ್ನು ವಿವರಿಸುತ್ತದೆ ಮತ್ತು ವೀಕ್ಷಕರಿಗೆ ಯಾವಾಗಲೂ ಕಾಣದ ನಿಮ್ಮ ಬಳಕೆದಾರ ಸ್ಪಷ್ಟ ಮಾಹಿತಿಯನ್ನು ನೀವು ವಿಡಿಯೋ ಅಪ್ ಲೋಡ್ ಮಾಡಿದಾಗ ವೀಕ್ಷಕರಿಗೆ ಕಾಣುವಂತೆ ಮಾಡುತ್ತದೆ. ನಿಮ್ಮ ವೀಡಿಯೊಗೆ ಸಂಬಂಧಿಸಿದಂತೆ, ಯಾವಾಗ ಮತ್ತು ಯಾರಿಂದ ಬಳಕೆದಾರ ಕಟೆಂಟ್ ನ್ನು ಸಂಗ್ರಹಿಸಲಾಗಿದೆ ಮತ್ತು ಆ ವಿಷಯವನ್ನು ಹೇಗೆ ಫಾರ್ಮ್ಯಾಟ್ ಮಾಡಲಾಗಿದೆ ಎಂಬುದನ್ನು ಮೆಟಾಡೇಟಾ ವಿವರಿಸಬಹುದು. ನೀವು ಮಾಡಿದ ವಿಡಿಯೋವನ್ನು ಇತರ ಬಳಕೆದಾರರು ಪತ್ತೆ ಹಚ್ಚಲು ಅನುಕೂಲವಾಗುವಂತೆ ಮಾಡಲು ನಿಮ್ಮ ಬಳಕೆದಾರ ಖಾತೆಯ ಹೆಸರಿನ ಮಾಹಿತಿಯನ್ನು ಮೆಟಾ ಡೇಟಾ ಒಳಗೊಳ್ಳುತ್ತದೆ. ಮೆಟಾಡೇಟಾವು ನೀವು ವೀಡಿಯೊದೊಂದಿಗೆ ಒದಗಿಸಲು ಆಯ್ಕೆ ಮಾಡಿದ ಹೆಚ್ಚಿನ ಡೇಟಾವನ್ನು ಒಳಗೊಂಡಿರುತ್ತದೆ. ಉದಾ. ವೀಡಿಯೊ ಅಥವಾ ಕಮೆಂಟ್ ಗಳಿಗೆ ಕೀವರ್ಡ್ ಗಳಾಗಿ ಗುರುತಿಸಲು ಬಳಸಲಾದ ಯಾವುದೇ ಹ್ಯಾಶ್ ಟ್ಯಾಗ್ ಗಳು.
 • ವ್ಯವಹಾರ ಡೇಟಾ. ಅಪ್ಲಿಕೇಶನ್ ಗಳ ಮೂಲಕ ನಾಣ್ಯ ಪ್ಯಾಕ್ ಗಳನ್ನು ಖರೀದಿಸುವ ಆಯ್ಕೆಗೆ ನೀವು ಮುಂದಾಗಬಹುದು. ಈ ನಾಣ್ಯಗಳನ್ನು ನೀವು ವರ್ಚ್ಯುಲ್ ಗಿಫ್ಟ್ ಖರೀದಿಸಲು ಮತ್ತು ಬೇರೆಯವರ ಚಾನಲ್ ಳಲ್ಲಿ ನೇರ ಪ್ರಸಾರದ ಸಮಯದಲ್ಲಿ ಆ ಬಳಕೆದಾರರಿಗೆ ಬೆಂಬಲ ನೀಡಲು ನೀವು ಬಳಸಬಹುದು. ನಾಣ್ಯಗಳನ್ನು ಖರೀದಿಸಲು ನೀವು ಆಯ್ಕೆಮಾಡಿಕೊಂಡಾಗ ಖರೀದಿಯನ್ನು ಪೂರ್ಣಗೊಳಿಸಲು ನಿಮ್ಮ ಮೊಬೈಲ್ ಸಾಧನದ ಅಪ್ಲಿಕೇಶನ್ ಸ್ಟೋರ್ ಗೆ ಇದನ್ನು ವರ್ಗಾಯಿಸಲಾಗುವುದು. ಈ ಖರೀದಿಗೆ ಸಂಬಂಧಿಸಿದಂತೆ, ನಿಮ್ಮಿಂದ ನಾವು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇದಲ್ಲದೆ, ನೀವು ಯಾವುದೇ ಉಡುಗೊರೆ ಪಾಯಿಂಟ್ ಗಳನ್ನು ಖರೀದಿಸಿದರೆ ನಿಮ್ಮ ಆಪಲ್ ಐಟ್ಯೂನ್ಸ್ ಅಥವಾ ಗೂಗಲ್ ಪ್ಲೇ ಖಾತೆಯನ್ನು ಬಳಸಿಕೊಂಡು ಗಿಫ್ಟ್ ಪಾಯಿಂಟ್ ಪಾಲಿಸಿಗೆ ಅನುಸಾರವಾಗಿ ನಾವು ಪಾವತಿಯ ದೃಢೀಕರಣ ಪ್ರಕ್ರಿಯೆಗೊಳಿಸುತ್ತೇವೆ ಮತ್ತು ನಿಮ್ಮ ಖಾತೆಗೆ ಕ್ರೆಡಿಟ್ ಮಾಡುವ ಮೂಲಕ ಮಾಹಿತಿ ಪಡೆಯುತ್ತೇವೆ.

2. ಕುಕೀಸ್

ಪ್ಲಾಟ್ ಫಾರ್ಮ್ ಬಳಕೆಯ ನಿಮ್ಮ ಅನುಭವವನ್ನು ಹೆಚ್ಚಿಸಲು, ನಮ್ಮ ಸೇವೆಗಳನ್ನು ಸುಧಾರಿಸಲು, ಮತ್ತು ಉದ್ದೇಶಿತ ಜಾಹೀರಾತುಗಳನ್ನು ನಿಮಗೆ ತಲುಪಿಸಲು ನಾವು ಕುಕೀಸ್ ಮತ್ತು ಇತರ ರೀತಿಯ ತಂತ್ರಜ್ಞಾನಗಳನ್ನು (ಉದಾ. ವೆಬ್ ಬೀಕನ್ ಗಳು, ಫ್ಲ್ಯಾಷ್ ಕುಕೀಸ್ ಗಳು, ಇತ್ಯಾದಿ) ("ಕುಕೀಸ್") ಬಳಸುತ್ತೇವೆ. ಕುಕೀಗಳು ಚಿಕ್ಕ ಫೈಲ್ ಗಳಾಗಿದ್ದು, ನಿಮ್ಮ ಸಾಧನದಲ್ಲಿ ಇವುಗಳಿದ್ದರೆ ನಿಮಗೆ ಹೆಚ್ಚಿನ ಬಳಕೆದಾರ ಅವಕಾಶ ನೀಡಲು ಮತ್ತು ಕಾರ್ಯವನ್ನು ಒದಗಿಸಲು ಅವಕಾಶ ನೀಡುತ್ತವೆ. ನೀವು ನಮ್ಮ ಪ್ಲಾಟ್ ಫಾರ್ಮ್ ಬಳಕೆ ಮಾಡಿದಾಗ, ಹಾಗೆಯೇ Bytance ಒದಗಿಸಿದ ಇತರೆ ಪ್ಲಾಟ್ ಫಾರ್ಮ್ ಗಳು ಮತ್ತು Bytedance ಪ್ರಾಡಕ್ಟ್ ಬಳಸಿದಾಗ ನಾವು ನಿಮ್ಮ ಡಿವೈಸ್ ನಲ್ಲಿ ಕುಕೀಸ್ ಸ್ಥಾಪಿತವಾಗುವಂತೆ ಮಾಡುತ್ತೇವೆ.

ನಾವು ಕೆಳಗಿನ ಕುಕೀಸ್ ಗಳನ್ನು ಬಳಸುತ್ತೇವೆ:

 • ತೀರಾ ಅವಶ್ಯಕವಾದ ಕುಕೀಸ್. ಇವು ಪ್ಲಾಟ್ ಫಾರ್ಮ್ ಕಾರ್ಯಾಚರಣೆಗೆ ಅಗತ್ಯವಿರುವ ಕುಕೀಸ್ ಗಳನ್ನೊಳಗೊಂಡಿವೆ. ಅವುಗಳೆಂದರೆ, ಉದಾಹರಣೆಗೆ, ಪ್ಲಾಟ್ ಫಾರ್ಮ್ ನ ಸುರಕ್ಷಿತ ವಲಯಗಳಿಗೆ ಪ್ರವೇಶಿಸಲು ನಿಮಗೆ ಸಹಾಯ ಮಾಡುವ ಕುಕೀಸ್ ಗಳು.
 • ಕಾರ್ಯವಿಧಾನ ಕುಕೀಸ್. ನೀವು ಪ್ಲಾಟ್ ಫಾರ್ಮ್ ಹಿಂತಿರುಗಿದಾಗ ಈ ಕುಕೀಸ್ ಗಳನ್ನು ನಿಮ್ಮನ್ನು ಗುರುತಿಸಲು ಬಳಸಲಾಗುತ್ತದೆ. ಇದು ನಿಮಗಾಗಿ ಕಂಟೆಂಟನ್ನು ವೈಯಕ್ತೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ, ನಿಮ್ಮ ಹೆಸರಿನಿಂದ ನಿಮ್ಮನ್ನು ಸ್ವಾಗತಿಸಲು ಮತ್ತು ನಿಮ್ಮ ಆದ್ಯತೆಗಳನ್ನು ನೆನಪು ಮಾಡಲು (ಉದಾಹರಣೆಗೆ, ನಿಮ್ಮ ಭಾಷೆ ಅಥವಾ ಪ್ರದೇಶದ ಆಯ್ಕೆ) ಸಹಾಯವಾಗುತ್ತದೆ. ಈ ಕುಕೀಸ್ 90 ದಿನ ಅವಧಿಯವರೆಗೆ ಲಾಗ್ ಇನ್ ಕಾರ್ಯ ವೈಖರಿಯನ್ನು ಮಾತ್ರ ಬೆಂಬಲಿಸುತ್ತವೆ
 • ಸಾಮಾಜಿಕ ಜಾಲತಾಣ ಕುಕೀಸ್. ಈ ಕುಕೀಸ್ ಗಳು ಬಳಕೆದಾರರು ತಮ್ಮ ಸೇವೆಗಳನ್ನು ಇತರ ಸೇವೆಗಳನ್ನು (ಉದಾಹರಣೆಗೆ, ಫೇಸ್ಬುಕ್, ಮತ್ತು ಗೂಗಲ್) ಬಳಸುವುದರ ಮೂಲಕ ಈ ಪ್ಲಾಟ್ ಫಾರ್ಮ್ ನಲ್ಲಿ ಖಾತೆಯನ್ನು ತೆರೆಯಲು ಅನುವು ಮಾಡಿಕೊಡುತ್ತವೆ.
 • ಚಟುವಟಿಕೆ ಕುಕೀಸ್. ಈ ಕುಕೀಸ್ ನಿಮ್ಮ ಪ್ಲಾಟ್ ಫಾರ್ಮ್ ಭೇಟಿಗಳು, ನೀವು ಭೇಟಿ ನೀಡಿದ ಪುಟಗಳು ಮತ್ತು ನೀವು ಹಿಂಬಾಲಿಸಿದ ಲಿಂಕ್ ಳು, ಇತರ ವೆಬ್ಸೈಟ್ ಗಳು ಹಾಗೂ ಅಪ್ಲಿಕೇಶನ್ ನಲ್ಲಿನ ನಿಮ್ಮ ಸಂವಹನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಈ ಮಾಹಿತಿಯನ್ನು ನಾವು ಪ್ಲಾಟ್ ಫಾರ್ಮ್ ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಳಸುತ್ತೇವೆ.
 • ಮಾರ್ಕೆಟಿಂಗ್ ಕುಕೀಸ್. ಈ ಕುಕೀಸನ್ನು ಪ್ಲಾಟ್ ಫಾರ್ಮ್ ನಲ್ಲಿ ಜಾಹೀರಾತುಗಳನ್ನು ನೀಡಲು ಬಳಸಲಾಗುತ್ತದೆ ಮತ್ತು ಜಾಹೀರಾತುಗಳು ನಿಮ್ಮ ಆಸಕ್ತಿಗಳಿಗೆ ಹೆಚ್ಚು ಸಂಬಂಧಿತವಾಗಿರುತ್ತವೆ. ಅಷ್ಟೆ ಅಲ್ಲದೆ ಜಾಹೀರಾತು ಕ್ಯಾಂಪೇನ್ ನ ದಕ್ಷತೆಯನ್ನು ಪತ್ತೆಹಚ್ಚುವಲ್ಲಿ ಸಹ ಇದು ನೆರವಾಗುತ್ತದೆ. ಈ ಉದ್ದೇಶಕ್ಕಾಗಿ ನಾವು ಮೂರನೇ ವ್ಯಕ್ತಿಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಮ್ಮ ಸೇವಾ ಪೂರೈಕೆದಾರರು ತಮ್ಮ ಉದ್ದೇಶಿತ ಜಾಹೀರಾತುಗಳನ್ನು ಬೇರೆ ವೆಬ್ಸೈಟ್ ಮತ್ತು ಅಪ್ಲಿಕೇಶನ್ ಗಳಲ್ಲಿ ನಿಮಗೆ ತಲುಪಿಸಲು ನಮ್ಮ ಪ್ಲಾಟ್ ಫಾರ್ಮ್ ನಲ್ಲಿನ ನಿಮ್ಮ ಸಂವಹನದ ಮಾಹಿತಿಯನ್ನು ಬಳಸಬಹುದು.
 • ವಿಶ್ಲೇಷಣಾತ್ಮಕ ಕುಕೀಸ್. ವಿಶ್ಲೇಷಣಾತ್ಮಕ ಕುಕೀಸ್ ನೀವು ಕ್ಲಿಕ್ ಮಾಡುವ ವೆಬ್ ಪುಟಗಳನ್ನು ಮತ್ತು ನೀವು ಪ್ಲಾಟ್ ಫಾರ್ಮನ್ನು ಹೇಗೆ ಬಳಸುತ್ತೀರಿ ಎಂಬುದನ್ನು ಅಂದಾಜು ಮಾಡಲು ನಮ್ಮ ಸೇವೆಗಳಿಗೆ ನಾವು ಬಳಸುವ ಸಂಖ್ಯಾಶಾಸ್ತ್ರೀಯ ಬಳಕೆದಾರರ ಮಾಪನ ವ್ಯವಸ್ಥೆಗಳಾಗಿವೆ (ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೋಡಿ).

ನೀವು ಕುಕೀಸ್ ಬಳಸಿಕೊಂಡು ಯಾವುದೇ ಅನುಕೂಲ ಪಡೆಯಲು ಬಯಸದಿದ್ದರೆ, ನಿಮ್ಮ ಬ್ರೌಸರ್ ನಲ್ಲಿ ಸೆಟ್ಟಿಂಗ್ ಬದಲಾಯಿಸುವ ಮೂಲಕ ನೀವು ಕುಕಿಸ್ ಗಳನ್ನು ನಿಷ್ಕ್ರಿಯಗೊಳಿಸಬಹುದು. ನೀವೆನಾದರು ಹಾಗೆ ಮಾಡಿದರೆ, ಇದು ನಿಮ್ಮ ಪ್ಲಾಟ್ ಫಾರ್ಮ್ ನಲ್ಲಿ ನಾವು ನಿಮಗೆ ವೈಯಕ್ತಿಕಗೊಳಿಸಿದ ಕಂಟೆಂಟನ್ನು ನೀಡಲು ಸಾಧ್ಯವಾಗದೆ ನಿಮ್ಮ ಮನರಂಜನೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಕುಕೀಸ್ ನಿಂದ ಹೊರಗುಳಿಯದೆ ಇದ್ದಲ್ಲಿ, ಕುಕೀಸ್ ಬಳಕೆಗೆ ನಿಮ್ಮ ಒಪ್ಪಿಗೆಯಿದೆ ಎಂದು ಪರಿಗಣಿಸುತ್ತೇವೆ.

"ಟ್ರ್ಯಾಕ್-ಮಾಡಬೇಡಿ" ಮೂರನೆ ವ್ಯಕ್ತಿಗಳಿಂದ ಅಥವಾ ಆನ್ಲೈನ್ ಸೇವೆಯಿಂದ ತಮ್ಮ ಚಟುವಟಿಕೆಯನ್ನು ಟ್ರಾಕ್ ಮಾಡದಂತೆ ನೋಡಿಕೊಳ್ಳಲು ಸಿಗ್ನಲ್ ಆದ್ಯತೆಯನ್ನು ಬಳಕೆದಾರರು ತಮಗೆ ಬೇಕಾದಂತೆ ಪ್ರಾಶಸ್ತ್ಯಗೊಳಿಸಬಹುದು. ಪ್ಲಾಟ್ ಫಾರ್ಮ್ ನಿಮ್ಮ ವೆಬ್ ಬ್ರೌಸರ್ ನಲ್ಲಿ " ಟ್ರ್ಯಾಕ್ ಮಾಡಬೇಡ- " ಸಿಗ್ನಲ್ ಗಳಿಗೆ ಪ್ರತಿಕ್ರಿಯಿಸುವುದಿಲ್ಲ.

ವಿಶ್ಲೇಷಣಾತ್ಮಕ ಮಾಹಿತಿ

ನಮ್ಮ ಪ್ಲಾಟ್ ಫಾರ್ಮ್ ನಲ್ಲಿ, ನಾವು ಟ್ರಾಫಿಕ್ ಮತ್ತು ಬಳಕೆ ಪ್ರವೃತ್ತಿಯ ಸೇವೆಗಳನ್ನು ಅಳೆಯಲು ಮೂರನೇ ವ್ಯಕ್ತಿಯ ವಿಶ್ಲೇಷಣಾ ಪರಿಕರಗಳನ್ನು ಬಳಸುತ್ತೇವೆ. ಸೇವೆಗಳಲ್ಲಿನ ಬಳಕೆದಾರರ ಚಟುವಟಿಕೆಗಳ ಸುತ್ತಲಿನ ವಿಭಿನ್ನ ಡೇಟಾ ಹರಿವನ್ನು ಟ್ರಾಫಿಕ್ ಸೂಚಿಸುತ್ತದೆ. ಉದಾಹರಣೆಗೆ, ಈ ಉಪಕರಣಗಳು ನಿಮ್ಮ ಸಾಧನ ಅಥವಾ ನಮ್ಮ ಸೇವೆಗಳಿಂದ ಕಳುಹಿಸಿದ ಮಾಹಿತಿಯನ್ನು ಸಂಗ್ರಹಿಸುತ್ತವೆ. ನೀವು ಭೇಟಿ ನೀಡಿದ ಪುಟಗಳು, ಆಡ್-ಆನ್ ಗಳು ಮತ್ತು ಸೇವೆಯ ಸುಧಾರಣೆಗೆ ಸಹಾಯ ಮಾಡುವ ಇತರ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ನಿಮ್ಮ ಚಟುವಟಿಕೆಯನ್ನು ವರದಿ ಮತ್ತು ಮೌಲ್ಯ ಮಾಪನ ಮಾಡಲು ಹಾಗೆಯೆ ಈ ಚಟುವಟಿಕೆಗಳಿಗೆ ಅನುಗುಣವಾಗಿ ಪ್ಲಾಟ್ ಫಾರ್ಮ್ ಬಳಕೆದಾರನಿಗೆ ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ.

ನಮ್ಮ ಮೂರನೆ ವ್ಯಕ್ತಿ ವಿಶ್ಲೇಷಣಾ ಸಾಧನವಾಗಿ ಗೂಗಲ್ ನ ಗೂಗಲ್ ಅನಾಲಿಟಿಕ್ಸ್ Google, Inc (1600 Amphitheatre Parkway Mountain View, CA 94043, USA)ಬಳಸುತ್ತೇವೆ. ಗೂಗಲ್ ಅನಾಲಿಟಿಕ್ಸ್ ಕುಕೀಸ್ ಗಳನ್ನು ಕುಕೀಸ್ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹಿಸಲಾದ ಆಲ್ಫಾ ನ್ಯೂಮೆರಿಕ್ ಅಕ್ಷರಗಳನ್ನೊಳಗೊಂಡ ಸಣ್ಣ ಪಠ್ಯ ಫೈಲ್ ಗಳನ್ನು ಉಪಯೋಗಿಸಿಕೊಳ್ಳುತ್ತೇವೆ. ನಮ್ಮ ಸೇವೆಯ ಬಳಕೆಯ ಕುರಿತು ಅಂಕಿ ಅಂಶಗಳನ್ನು ಒಟ್ಟುಗೂಡಿಸಲು ಅಥವಾ ಮೇಲೆ ವಿವರಿಸಿದಂತೆ ಇತರ ಸಂಬಂಧಿತ ಸೇವೆಗಳನ್ನು ಒದಗಿಸಲು ನೀವು ಮೊಟಕುಗೊಳಿಸಿದ ಐ.ಪಿ ವಿಳಾಸವನ್ನು ಒಳಗೊಂಡಂತೆ ಗೂಗಲ್ ಮಾಹಿತಿಯನ್ನು ಸಂಗ್ರಹಿಸುತ್ತದೆ. ಗೂಗಲ್ ವಿಶ್ಲೇಷಣೆ ನಿಮ್ಮ ಬಗ್ಗೆ ಸಂಗ್ರಹದಿಂದ ಹೊರಗುಳಿಯುವ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ ಎಂಬುದರ ಕುರಿತು ಹೆಚ್ಚಿನಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. ಇತರ ಮಾಹಿತಿಯನ್ನು ನೀವು Google Analytics Terms of Service & Privacy ಇಲ್ಲಿ ಪಡೆಯಬಹುದು

ನಾವು ಫೇಸ್ಬುಕ್ ಇಂಕ್ ನಲ್ಲಿ "ಫೇಸ್ಬುಕ್ ಪಿಕ್ಸೆಲ್", 1 ಹ್ಯಾಕರ್ ವೇ, ಮೆನ್ಲೋ ಪಾರ್ಕ್, CA 94025, USA ("Facebook"). ಅನ್ನು ಬಳಸುತ್ತೇವೆ. ಈ ಸಾಧನವನ್ನು ಜಾಹೀರಾತು ಉದ್ದೇಶಗಳಿಗಾಗಿ ಬಳಸಲಾಗಿದ್ದು, ನೀವು ನಮ್ಮ ಜಾಹೀರಾತನ್ನು ಫೇಸ್ಬುಕ್ನಲ್ಲಿ ನೋಡುತ್ತಿದ್ದೀರಾ ಎಂದು ತಿಳಿದುಕೊಳ್ಳಲು ಬಳಸಲಾಗುತ್ತದೆ. ನಿಮ್ಮ ಬಗ್ಗೆ ವಿವರಿಸಿದ ಮಾಹಿತಿಯನ್ನು ಫೇಸ್ಬುಕ್ ಸಂಗ್ರಹಿಸಲು ನೀವು ಬಯಸದಿದ್ದಲ್ಲಿ, ಫೇಸ್ಬುಕ್ ಕುಕೀಸ್ ಮತ್ತು ಫೇಸ್ಬುಕ್ ಪಿಕ್ಸೆಲ್ ಗಳ ಬಳಕೆಯನ್ನು ನೀವು ಇಲ್ಲಿ ನಿರ್ಬಂಧಿಸಬಹುದು

3. ನಿಮ್ಮ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ

ನಾವು ನಿಮ್ಮ ಬಗ್ಗೆ ಸಂಗ್ರಹಿಸುವ ಮಾಹಿತಿಯನ್ನು ಕೆಳಗಿನ ವಿಧಾನದಲ್ಲಿ ಬಳಸುತ್ತೇವೆ:

 • ಪ್ಲಾಟ್ ಫಾರ್ಮ್ ನ (ಅಂದರೆ ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು) ಆಂತರಿಕ ಕಾರ್ಯಾಚರಣೆಗಳಾದ ಟ್ರಬಲ್ ಶೂಟಿಂಗ್ , ಡೇಟಾ ವಿಶ್ಲೇಷಣೆ, ಪರೀಕ್ಷೆ, ಸಂಶೋಧನೆ, ಸಂಖ್ಯಾಶಾಸ್ತ್ರೀಯ ಮತ್ತು ಸಮೀಕ್ಷೆಯ ಉದ್ದೇಶಗಳಿಗಾಗಿ (ಅಂದರೆ ವೇದಿಕೆಯ ಸ್ಥಿರತೆಯ ಮತ್ತು ಭದ್ರತೆಗೆ ಖಾತರಿ ನೀಡಲು) ಮತ್ತು ನಿಮ್ಮ ಪ್ರತಿಕ್ರಿಯೆಯ ವಿನಂತಿ ನಿರ್ವಹಣೆ ಮಾಡಲು;
 • ಪ್ಲಾಟ್ ಫಾರ್ಮ್ ನ ಸಂವಾದದಲ್ಲಿ ಭಾಗವಹಿಸಲು ಇರುವ ಆಯ್ಕೆಯನ್ನು ನೀವು ಬಳಸಿದಾಗ;
 • ನೀವು ಸ್ವೀಕರಿಸುವ ಕಂಟೆಂಟ್ ಗಳನ್ನು ವೈಯಕ್ತೀಕರಿಸಲು ಮತ್ತು ನಿಮಗೆ ಆಸಕ್ತಿ ಇರುವಂತಹ ಸ್ಥಳ-ಸಂಬಂಧಿತ ಮಾಹಿತಿಯನ್ನು ನಿಮಗೆ ತಕ್ಕಂತೆ ಒದಗಿಸಲು;
 • ನಮ್ಮ ಪ್ಲಾಟ್ ಫಾರ್ಮ್ ಅನ್ನು ಸುಧಾರಿಸುವುದು ಮತ್ತು ಉತ್ಪನ್ನ ಅಭಿವೃದ್ಧಿ ನಡೆಸಲು;
 • ನಿಮಗೆ ಮತ್ತು ಇತರರಿಗೆ ನಾವು ನೀಡುವ ಜಾಹೀರಾತಿನ ಪ್ರಭಾವವನ್ನು ಅಳೆಯಲು ಮತ್ತು ಅರ್ಥೈಸಿಕೊಳ್ಳಲು;
 • ನೀವು ಆಯ್ಕೆ ಮಾಡಿದ ದೇಶದ ಸೆಟ್ಟಿಂಗ್ ನ ಆಧಾರದ ಮೇಲೆ ನಿಮಗೆ ಸೇವೆಗಳನ್ನು ಒದಗಿಸಲು, ದೇಶದ ಆಯ್ಕೆಗೆ ಸಂಬಂಧಿಸಿದಂತೆ ಜಾಹೀರಾತು ಮತ್ತು ಇತರ ಕಂಟೆಟ್ ಗಳಿರುತ್ತವೆ;
 • ನಿಮಗೆ ಅಥವಾ ಇತರರಿಗೆ ಆಸಕ್ತಿ ಹೊಂದಿರುವ ಸರಕುಗಳು ಅಥವಾ ಸೇವೆಗಳ ಕುರಿತು ಪ್ಲಾಟ್ ಫಾರ್ಮ್ ನಲ್ಲಿ ಸಲಹೆ ಮತ್ತು ಶಿಫಾರಸುಗಳನ್ನು ನೀಡಲು;
 • ಪ್ಲಾಟ್ ಫಾರ್ಮ್ ನ "ಇತರ ಸ್ನೇಹಿತರನ್ನು ಹುಡುಕಿ" ಆಯ್ಕೆಯ ಮೂಲಕ ಇತರ ಬಳಕೆದಾರರನ್ನು ಹುಡುಕಲು ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಲು ಹಾಗೆಯೆ ಇತರ ಬಳಕೆದಾರರನ್ನು ಸೇವೆಯ ಬಳಕೆದಾರನಾಗಿ ತೊಡಗಿಸಿಕೊಂಡು ಸೇವೆಗಳ ಸಾಮಾಜಿಕ ಕ್ರಿಯೆಯನ್ನು ಬೆಂಬಲಿಸಲು;
 • ನೀವು ಆಯ್ಕೆ ಮಾಡುವ ಯಾರಿಗಾದರೂ ನಿಮ್ಮ ಪ್ರೊಫೈಲ್ ಮಾಹಿತಿಯನ್ನು ಒದಗಿಸಲು; ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಭಾಗವಹಿಸು ಜೊತೆ ಮತ್ತು ಇತರ ಬಳಕೆದಾರರೊಂದಿಗೆ ಸಂವಹನ ನಡೆಸಲು;
 • ಗೌಪ್ಯತೆ ಸೆಟ್ಟಿಂಗ್ ಗಳಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಿದ ನಿಮ್ಮ ಪ್ರೊಫೈಲ್ ನ ಮಾಹಿತಿಯನ್ನು ಇತರ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು;
 • ನೀವು ಇಷ್ಟಪಟ್ಟ ಅಥವಾ ಸಂವಹನ ಮಾಡಿದ ವಿಷಯವನ್ನು (ಕಮೆಂಟ್ ಮಾಡುವ ಮೂಲಕ ಮತ್ತು / ಅಥವಾ ವಿಷಯವನ್ನು ವೀಕ್ಷಿಸುವುದರ ಮೂಲಕ), ನಿಮ್ಮ ಸ್ಥಳದ ವ್ಯಕ್ತಿಗಳೊಂದಿಗೆ ಹಾಗೂ ನೀವು ಅನುಸರಿಸುತ್ತಿರುವ ಬಳಕೆದಾರರ ಸಾಮ್ಯತೆ ಇದ್ದರೆ ಆ ವಿಷಯವನ್ನು ನಿಮಗೆ ತೋರಿಸಲು;
 • ನಿಮ್ಮ ಅಭಿರುಚಿಗೆ ಸಂಬಂಧಿಸಿದ ಜಾಹೀರಾತುಗಳನ್ನು ತೋರಿಸಲು ;
 • ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರ ಮಾಡಲು ನೀವು ನಮಗೆ ನೀಡಿದ ಮಾಹಿತಿಗಳಾದ, ಬಳಕೆದಾರ ಮಾಹಿತಿ ಮತ್ತು ವೀಡಿಯೊ ಕಂಟೆಂಟನ್ನು ನಮ್ಮ ಜಾಹೀರಾತು ಮತ್ತು ಪ್ರಚಾರದ ಭಾಗವಾಗಿ ಪ್ಲಾಟ್ ಫಾರ್ಮ್ ಸೇವೆ ನೀಡಲು ಮತ್ತು ಉತ್ತೇಜಿಸಲು ಬಳಸುವುದು;
 • ನಮ್ಮ ಮೆಸೆಂಜರ್ ಸೇವೆಯನ್ನು ಕಾರ್ಯಗತಗೊಳಿಸಲು (ಇದನ್ನು ನೀವು ಬಳಸಲು ಆಯ್ಕೆ ಮಾಡಿದರೆ ಮಾತ್ರ ಇದು ಪ್ರಕ್ರಿಯೆಗೊಳ್ಳುತ್ತದೆ)ಇದಕ್ಕೆ ಸಂಬಂಧಿಸಿದ ಯಾವುದೇ ಸಂಗ್ರಹ ಮಾಹಿತಿಯನ್ನು ಅಳಿಸಲು ನೀವು ಪ್ಲಾಟ್ ಫಾರ್ಮ್ ಸೆಟ್ಟಿಂಗ್ ಆಯ್ಕೆ ಮಾಡಬಹುದು;
 • ನಿಮಗಾಗಿ ಜಾಹೀರಾತುಗಳನ್ನು, ಕೊಡುಗೆಗಳನ್ನು ಮತ್ತು ಇತರ ಪ್ರಾಯೋಜಿತ ವಿಷಯವನ್ನು ಆಯ್ಕೆ ಮಾಡಲು ಮತ್ತು ವೈಯಕ್ತೀಕರಿಸಲು ;
 • ಪ್ಲಾಟ್ ಫಾರ್ಮ್ ನಲ್ಲಿ ನಿಂದನೆ, ವಂಚನೆ ಮತ್ತು ಕಾನೂನುಬಾಹಿರ ಚಟುವಟಿಕೆಯನ್ನು ಪತ್ತೆಹಚ್ಚಲು ನಮಗೆ ಸಹಾಯವಾಗಲು;
 • ನಮ್ಮ ಸೇವೆಗಳನ್ನು ಬಳಸಲು ನೀವು ವಯಸ್ಕರು ಎಂದು ಖಚಿತಪಡಿಸಿಕೊಳ್ಳಲು (ಕಾನೂನಿನ ಪ್ರಕಾರ);
 • ನಮ್ಮ ಸೇವೆಗಳ ಬದಲಾವಣೆ ಬಗ್ಗೆ ನಿಮಗೆ ತಿಳಿಸಲು;
 • ನಿಮ್ಮೊಂದಿಗೆ ಸಂವಹನ ನಡೆಸಲು;
 • ಬಳಕೆದಾರ ಅನುಕೂಲವನ್ನು ನಿಮಗೆ ಒದಗಿಸಲು;
 • ನಮ್ಮ ನಿಯಮಗಳು, ಷರತ್ತುಗಳು ಮತ್ತು ನೀತಿಗಳನ್ನು ಜಾರಿಗೊಳಿಸಲು;
 • ನಿಮ್ಮಿಂದ ಪಾವತಿಗಳನ್ನು ಸ್ವೀಕರಿಸಲು ಮತ್ತು / ಅಥವಾ ಪೂರಕ ನಿಯಮಗಳಲ್ಲಿ ನಿಗದಿಪಡಿಸಲಾದ ಡೈಮಂಡ್ ಮತ್ತು ಫ್ಲೇಮ್ ನಿಬಂಧನೆಗಳಿಗನುಗುಣವಾಗಿ - ಸೇವಾ ನಿಯಮಗಳ ಅಡಿಯಲ್ಲಿ ವರ್ಚುವಲ್ ಪಾಲಿಸಿ ಅಥವಾ ಪ್ರತ್ಯೇಕ ಪ್ರೀಮಿಯಂ ಕಂಟೆಂಟ್ ಕ್ರಿಯೇಟರ್ ಒಪ್ಪಂದದಡಿಯಲ್ಲಿ ನಿಮಗೆ ಅನ್ವಯವಾದದಲ್ಲಿ ಪಾವತಿಸುವಂತೆ ಮಾಡಲು;

4. ನಾವು ನಿಮ್ಮ ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತೇವೆ

ನಿಮ್ಮ ಪ್ರೊಫೈಲ್ ಮಾಹಿತಿ, ನಿಮ್ಮ ಸಮಯ ವಲಯ ಮತ್ತು ಭಾಷೆ, ನಿಮ್ಮ ಖಾತೆಯನ್ನು ರಚಿಸಿದ ದಿನ, ನಿಮ್ಮ ವೀಡಿಯೊಗಳು ಮತ್ತು ಪ್ಲಾಟ್ ಫಾರ್ಮ್ ನಲ್ಲಿ ನಿಮ್ಮ ಕೆಲವು ನಿರ್ದಿಷ್ಟ ಚಟುವಟಿಕೆಗಳ ದಿನಾಂಕ, ಸಮಯ ಮತ್ತು ಅಪ್ಲಿಕೇಶನ್ ಹಾಗೆಯೆ ನೀವು ಬಳಸುತ್ತಿರುವ ಪ್ಲಾಟ್ ಫಾರ್ಮ್ ನ ಆವೃತ್ತಿ, ಪ್ಲಾಟ್ ಫಾರ್ಮ್ ಮೇಲಿನ ನಿಮ್ಮ ಹೆಚ್ಚಿನ ಚಟುವಟಿಕೆ ಸಾರ್ವಜನಿಕವಾಗಿರುತ್ತದೆ. ನಿಮ್ಮ ಚಟುವಟಿಕೆಯಲ್ಲಿ ಅಥವಾ ನಿಮ್ಮ ಪ್ರೊಫೈಲ್ ನಲ್ಲಿ ಮತ್ತು ಚಟುವಟಿಕೆಯಲ್ಲು ನಿಮ್ಮ ಸ್ಥಳವನ್ನು ಪ್ರಕಟಿಸಲು ಇರುವ ಆಯ್ಕೆಯನ್ನು ನೀವು ಬಳಸಿಕೊಳ್ಳಬಹುದು.

ನಾವು ನಿಮ್ಮ ಮಾಹಿತಿಯನ್ನು ಈ ಕೆಳಗಿನ ಆಯ್ದ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತೇವೆ:

 • ನಮ್ಮ ವ್ಯಾಪಾರ ಪಾಲುದಾರರೊಂದಿಗೆ ಹಂಚಿಕೊಳ್ಳುತ್ತೇವೆ. ಇದರಿಂದ ನಾವು ನಿಮಗೆ ವೇದಿಕೆ ಮೂಲಕ ವಿಶೇಷ ಕೊಡುಗೆಗಳನ್ನು ನೀಡಬಹುದು;
 • ಜಾಹೀರಾತುದಾರರು ಮತ್ತು ಜಾಹೀರಾತು ಜಾಲಗಳು ನಿಮಗೆ ಮತ್ತು ಇತರರಿಗೆ ಜಾಹೀರಾತುಗಳನ್ನು ಆದ್ಯತೆಗನುಗುಣವಾಗಿ ಮತ್ತು ಸೇವೆ ನೀಡುವ ಅಗತ್ಯಕ್ಕಾಗಿ;
 • ವಿಪತ್ತಿನ ಪುನಶ್ಚೇತನ ಸೇವೆಗಳಿಗೆ ಕ್ಲೌಡ್ ಶೇಖರಣಾ ಪೂರೈಕೆದಾರರಿಗೆ ನೀವು ಒದಗಿಸುವ ಮಾಹಿತಿ ಹಾಗೆಯೇ ನಾವು ನಿಮ್ಮ ಮೂಲಕ ಪ್ರವೇಶಿಸಿದ ಯಾವುದೇ ಒಪ್ಪಂದದ ಕಾರ್ಯಕ್ಷಮತೆಗಾಗಿ;
 • ಪ್ಲಾಟ್ ಫಾರ್ಮ್ ಉತ್ತಮಗೊಳಿಸುವಿಕೆ ಮತ್ತು ಸುಧಾರಣೆಗೆ ಸಹಾಯ ಮಾಡುವ ವಿಶ್ಲೇಷಣೆಕಾರರು ಮತ್ತು ಸರ್ಚ್ ಎಂಜಿನ್ ಪೂರೈಕೆದಾರರೊಂದಿಗೆ; ಮತ್ತು
 • ಐಟಿ ಸೇವೆ ಒದಗಿಸುವವರೊಂದಿಗೆ;
 • ನಮ್ಮ ಡೇಟಾ ಸೆಂಟರ್ ಮತ್ತು ನಮ್ಮ ಹೋಸ್ಟ್ ಪೂರೈಕೆದಾರರ ಸರ್ವರ್ ಗಳೊಂದಿಗೆ;
 • ನಿಮ್ಮ ಬಳಕೆದಾರ ಹೆಸರು, ಸಾರ್ವಜನಿಕ ಪ್ರೇಕ್ಷಕರೊಂದಿಗೆ ನೀವು ಹಂಚಿಕೊಳ್ಳುವ ಯಾವುದೇ ಮಾಹಿತಿ, ಇತರ ಬಳಕೆದಾರರು ಹಂಚಿಕೊಳ್ಳುವ ಯಾವುದೇ ಮಾಹಿತಿ, ನಿಮ್ಮ ಸಾರ್ವಜನಿಕ ಪ್ರೊಫೈಲ್ ಮಾಹಿತಿ , ಇತ್ಯಾದಿ ಸಾರ್ವಜನಿಕರಿಗೆ ಕಾಣುವಂತೆ ನೀವು ಸೆಟ್ಟಿಂಗ್ಸ್ ಇಟ್ಟಿದ್ದರೆ ಈ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಿರುತ್ತದೆ.

ಪ್ಲಾಟ್ ಫಾರ್ಮ್ ಸುಧಾರಣೆ ಮತ್ತು ಆಪ್ಟಿಮೈಸೇಷನ್ ಗೆ ಸಹಾಯ ಮಾಡಲು, ಅಕ್ರಮ ಬಳಕೆಗಳನ್ನು ತಡೆಯಲು ಮತ್ತು ಬಳಕೆದಾರ ಸಂಖ್ಯೆಯನ್ನು ಹೆಚ್ಚಿಸಲು , ಅಭಿವೃದ್ಧಿ, ಎಂಜಿನಿಯರಿಂಗ್ ಮತ್ತು ಮಾಹಿತಿಯ ವಿಶ್ಲೇಷಣೆ ಹಾಗೂ ನಮ್ಮ ಆಂತರಿಕ ವ್ಯವಹಾರ ಉದ್ದೇಶಗಳಿಗಾಗಿ ನಾವು ನಿಮ್ಮ ಮಾಹಿತಿಯನ್ನು ಯಾವುದೇ ಸದಸ್ಯ, ಉಪಸಂಸ್ಥೆ, ಪೋಷಕ ಸಂಸ್ಥೆ ಅಥವಾ ಅಂಗ ಸಂಸ್ಥೆಯೊಂದಿಗೆ ಮೇಲಿನ ಉದ್ದೇಶಗಳಿಗಾಗಿ ಹಂಚಿಕೊಳ್ಳುತ್ತೇವೆ, (ನಿಮ್ಮ ಮಾಹಿತಿಯನ್ನು ನಾವು ಹೀಗೆ ಬಳಸುತ್ತೇವೆ).

ಕಾನೂನನ್ನು ಜಾರಿಗೆ ತರಲು ಕಾನೂನು ಜಾರಿ ಸಂಸ್ಥೆಗಳೊಂದಿಗೆ , ಸಾರ್ವಜನಿಕ ಅಧಿಕಾರಿಗಳು ಮತ್ತು ಇತರ ಸಂಸ್ಥೆಗಳಿಗೆ ಕಾನೂನಿನ ಅಡಿಯಲ್ಲಿ ಈ ಮಾಹಿತಿ ಅಗತ್ಯವಿದ್ದಲ್ಲಿ ಮತ್ತು ಸಮಂಜಸವಾಗಿದ್ದಲ್ಲಿ ನಿಮ್ಮ ಮಾಹಿತಿಯನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತೇವೆ:

 • ಕಾನೂನು ಬಾಧ್ಯತೆ, ಪ್ರಕ್ರಿಯೆ ಅಥವಾ ವಿನಂತಿಯನ್ನು ಅನುಸರಿಸಲು;
 • ಯಾವುದೇ ಸೇವಾ ಉಲ್ಲಂಘನೆಯ ತನಿಖೆ ಸೇರಿದಂತೆ ನಮ್ಮ ಸೇವಾ ನಿಯಮಗಳು ಮತ್ತು ಇತರ ಒಪ್ಪಂದಗಳು, ನೀತಿಗಳು ಮತ್ತು ಗುಣಮಟ್ಟವನ್ನು ಜಾರಿಗೊಳಿಸಲು;
 • ವಿಳಾಸ ಸುರಕ್ಷತೆ, ವಂಚನೆ ಅಥವಾ ತಾಂತ್ರಿಕ ಸಮಸ್ಯೆಗಳ ಪತ್ತೆ ಮತ್ತು ತಡೆಗಟ್ಟುವಿಕೆಗೆ ಹಾಗೂ
 • ನಮ್ಮ ಬಳಕೆದಾರರ ಮತ್ತು ಮೂರನೇ ವ್ಯಕ್ತಿ ಹಾಗೂ ಸಾರ್ವಜನಿಕರಿಗೆ ಹಕ್ಕು, ಆಸ್ತಿ ಮತ್ತು ಸುರಕ್ಷತೆಗೆ, ಅಗತ್ಯವಿರುವ ಕಾನೂನು ಅಥವಾ ಅನುಮತಿಗೆ (ಮೋಸದ ರಕ್ಷಣೆ ಮತ್ತು ಕ್ರೆಡಿಟ್ ಕಡಿತ ಅಪಾಯದ ತಕ್ಷಣೆಗೆ ಇತರ ಕಂಪನಿಗಳು ಮತ್ತು ಸಂಸ್ಥೆಗಳೊಂದಿಗೆ ಮಾಹಿತಿ ವಿನಿಮಯವನ್ನು ಒಳಗೊಂಡಂತೆ)

ನಾವು ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಗಳ ಜೊತೆ ಹಂಚಿಕೊಳ್ಳುತ್ತೇವೆ:

 • ಯಾವುದೇ ವ್ಯವಹಾರ ಅಥವಾ ಆಸ್ತಿಗಳನ್ನು ಮಾರಾಟ ಮಾಡುವ ಅಥವಾ ಖರೀದಿಸುವ ಸಂದರ್ಭದಲ್ಲಿ, ಅಂತಹ ವ್ಯವಹಾರ ಅಥವಾ ಆಸ್ತಿಗಳ ನಿರೀಕ್ಷಿತ ಮಾರಾಟಗಾರ ಅಥವಾ ಖರೀದಿದಾರರ ಜೊತೆ ನಾವು ನಿಮ್ಮ ಡೇಟಾವನ್ನು ಹಂಚಿಕೊಳ್ಳುತ್ತೇವೆ; ಅಥವಾ
 • ಇತರ ಕಂಪೆನಿಗಳೊಂದಿಗೆ ನಾವು ಮಾರಾಟ, ಖರೀದಿ, ವಿಲೀನ, ಸ್ವಾಧೀನ ಪಡಿಸಿಕೊಳ್ಳುವಿಕೆಯಲ್ಲಿ ತೊಡಗಿಕೊಂಡಾಗ ಅಥವಾ ವ್ಯವಹಾರ ಹಾಗೂ ಎಲ್ಲ ಸ್ವತ್ತುಗಳನ್ನು ಮಾರಾಟ ಮಾಡುವಾಗ ಇಲ್ಲದಿದ್ದಲ್ಲಿ ದಿವಾಳಿಯಾದಾಗ. ಅಂತಹ ಸಂದರ್ಭದಲ್ಲಿ, ಬಳಕೆದಾರ ಮಾಹಿತಿಯು ವರ್ಗಾವಣೆಗೊಳ್ಳುವ ಆಸ್ತಿಯಾಗಿರುತ್ತದೆ.

5. ನಿಮ್ಮ ಹಕ್ಕುಗಳು

ಪ್ರವೇಶ ಮತ್ತು ನವೀಕರಣ

ನೀವು ಪ್ಲಾಟ್ ಫಾರ್ಮ್ ನಲ್ಲಿ ಖಾತೆ ನೋಂದಾಯಿಸಿಕೊಂಡಿದ್ದರೆ, ನಿಮ್ಮ ಆನ್ಲೈನ್ ​​ಖಾತೆಗೆ ಲಾಗ್ ಇನ್ ಆಗುವ ಮೂಲಕ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿರುವ ಆಯ್ಕೆಗಳನ್ನು ಮತ್ತು ಅವಕಾಶವನ್ನು ಬಳಸಿಕೊಳ್ಳಲು ನೀವು ನಮಗೆ ಈಗಾಗಲೇ ಒದಗಿಸಿರುವ ಕೆಲವು ವೈಯಕ್ತಿಕ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸುತ್ತಿರಬೇಕಾಗುತ್ತದೆ. ಮತ್ತು ನಿಮ್ಮ ಗುರುತನ್ನು ಪರಿಶೀಲಿಸಿಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ನಿಮ್ಮ ಖಾತೆ ಸಂಶಯಾಸ್ಪದ ಚಟುವಟಿಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ.

ವ್ಯವಸ್ಥಾಪಕ ಆದ್ಯತೆಗಳು

http://www.networkadvertising.org/managing/opt_out.asp and www.aboutads.info/choices. ಮೇಲೆ ಕ್ಲಿಕ್ ಮಾಡುವ ಮೂಲಕ ನಾವು ಕೆಲಸ ಮಾಡುವ ಕೆಲವು ಮೂರನೇ ವ್ಯಕ್ತಿ ನಮ್ಮ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಹಾಕುವ ಜಾಹೀರಾತುಗಳನ್ನು ನೀವು ಆದ್ಯತೆಯ ಮೇರೆಗೆ ನಿರ್ವಹಿಸಬಹುದು.

ಸಂವಹನ ಆಯ್ಕೆ-ನಿರ್ಬಂಧ

ನಮ್ಮಿಂದ ಸ್ವೀಕರಿಸಿದ ಮಾರ್ಕೆಟಿಂಗ್ ಅಥವಾ ಜಾಹೀರಾತು ಇಮೇಲ್ ಗಳು ನಿಮಗೆ ಇಷ್ಟವಾಗದಿದ್ದಲ್ಲಿ, ನೀವು ಸೆಟ್ಟಿಂಗ್ ನಲ್ಲಿನ “unsubscribe” ಲಿಂಕ್ ಅಥವಾ ಗುರುತಿಸಲಾಗಿರುವ ಯಾಂತ್ರಿಕತೆಯನ್ನು ಬಳಸಿಕೊಳ್ಳುವುದರ ಮೂಲಕ ನೀವು ಇದನ್ನು ನಿರ್ಬಂಧಿಸಬಹುದು.

ನಿಮ್ಮ ಜಿಪಿಎಸ್ ಅಥವಾ ಮೊಬೈಲ್ ಸಾಧನದ ಸ್ಥಳ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ನೀವು ಬಯಸದಿದ್ದರೆ, ನಿಮ್ಮ ಮೊಬೈಲ್ ಡಿವೈಸ್ ನಲ್ಲಿ ಸ್ಥಳ ಮಾಹಿತಿ ಕಾರ್ಯಾಚರಣೆಯನ್ನು ಆಫ್ ಮಾಡಬಹುದು.

6. ನಿಮ್ಮ ಮಾಹಿತಿಯ ಸುರಕ್ಷತೆ

ಈ ನೀತಿಯ ಅನುಸಾರವಾಗಿ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಇಡಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಹೀಗಿದ್ದಾಗ್ಯೂ, ಅಂತರ್ಜಾಲದ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಲ್ಲ. ಆದಾಗ್ಯೂ, ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು ನಾವು ಶ್ರಮಿಸುತ್ತೇವೆ. ಉದಾಹರಣೆಗೆ, ಗೂಢಲಿಪೀಕರಣ. ಪ್ಲಾಟ್ ಫಾರ್ಮ್ ನಲ್ಲಿ ನಿಮ್ಮ ಮಾಹಿತಿಗೆ ಸುರಕ್ಷತೆ ನೀಡುತ್ತೇವೆ ಎಂದು ನಾವು ಖಾತರಿಯಾಗಿ ಹೇಳುವುದಿಲ್ಲ. ಯಾವುದೇ ಸಂವಹನದ ಸುರಕ್ಷತೆಯು ನಿಮ್ಮದೆ ಜವಾಬ್ದಾರಿ.

ನಿಮ್ಮ ಮತ್ತು ಇತರ ಬಳಕೆದಾರರ ಹಕ್ಕುಗಳು ಮತ್ತು ಸ್ವಾತಂತ್ರ್ಯ ರಕ್ಷಣೆ ಹಾಗೂ ತೀವ್ರ ಅಪಾಯಕ್ಕೆ ಸೂಕ್ತವಾದ ಸುರಕ್ಷತೆಯ ಮಟ್ಟವನ್ನು ಕಾಪಾಡಿಕೊಳ್ಳಲು ನಾವು ಸೂಕ್ತವಾದ ತಾಂತ್ರಿಕ ಮತ್ತು ಸಾಂಸ್ಥಿಕ ಕ್ರಮಗಳನ್ನು ಹೊಂದಿದ್ದೇವೆ. ಈ ತಾಂತ್ರಿಕ ಮತ್ತು ಸಾಂಸ್ಥಿಕ ಕ್ರಮಗಳನ್ನು ನಾವು ನಿರ್ವಹಿಸುತ್ತೇವೆ ಮತ್ತು ನಮ್ಮ ವ್ಯವಸ್ಥೆಗಳ ಒಟ್ಟಾರೆ ಭದ್ರತೆಯನ್ನು ಸುಧಾರಿಸಲು ಕಾಲಕಾಲಕ್ಕೆ ಇವುಗಳನ್ನು ತಿದ್ದುಪಡಿ ಮಾಡುತ್ತೇವೆ.

ನಾವು ಕಾಲಕಾಲಕ್ಕೆ, ನಮ್ಮ ಪಾಲುದಾರರ ನೆಟ್ ವರ್ಕ್ ಗಳು, ಜಾಹೀರಾತುದಾರರು ಮತ್ತು ಅಂಗಸಂಸ್ಥೆಗಳ ವೆಬ್ಸೈಟ್ ಗಳ ಲಿಂಕ್ ಗಳನ್ನು ಅಳವಡಿಸುತ್ತಿರುತ್ತೇವೆ. ಈ ಯಾವುದೇ ವೆಬ್ಸೈಟ್ ಗಳ ಲಿಂಕನ್ನು ನೀವು ಅನುಸರಿಸಿದರೆ, ಈ ವೆಬ್ಸೈಟ್ ಗಳು ತಮ್ಮದೇ ಆದ ಗೌಪ್ಯತಾ ನೀತಿಗಳನ್ನು ಹೊಂದಿವೆ ಮತ್ತು ಈ ನೀತಿಗಳಿಗೆ ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಬೇಕು. ಈ ವೆಬ್ಸೈಟ್ಗಳಿಗೆ ಯಾವುದೇ ಮಾಹಿತಿಯನ್ನು ನೀವು ಸಲ್ಲಿಸುವ ಮೊದಲು ದಯವಿಟ್ಟು ನೀತಿಗಳನ್ನು ಪರಿಶೀಲಿಸಿ.

ಮೊದಲ ಬಾರಿಗೆ ನೀವು ಪ್ಲಾಟ್ ಫಾರ್ಮ್ ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದರೆ, ನೀವು ಸಾರ್ವಜನಿಕ ಪ್ಲಾಟ್ ಫಾರ್ಮ್ ನಲ್ಲಿರುವ ಖಾತೆಯನ್ನು ಬಳಸುತ್ತಿರುವಿರಿ ಎಂದು ನಿಮಗೆ ಸೂಚಿಸಲಾಗುತ್ತದೆ, ಅಂದರೆ ನೀವು ವೀಡಿಯೊವನ್ನು ಪೋಸ್ಟ್ ಮಾಡಿದರೆ ಪ್ಲಾಟ್ ಫಾರ್ಮ್ ನಲ್ಲಿ ನಿಮ್ಮ ಸಂಪರ್ಕದಲ್ಲಿ ಇರದ ಪ್ರತಿ ಬಳಕೆದಾರನು ಕೂಡ ಅದನ್ನು ವೀಕ್ಷಿಸಬಹುದು ಎಂಬುದಾಗಿದೆ. ಮಾಹಿತಿ ವಿಂಡೋದಲ್ಲಿ ನಿರ್ದಿಷ್ಟಪಡಿಸಿದ ನಿಮ್ಮ ಗೌಪ್ಯತೆಯ ಸೆಟ್ಟಿಂಗ್ ಬದಲಿಸುವ ಮೂಲಕ ಪ್ಲಾಟ್ ಫಾರ್ಮ್ ನಲ್ಲಿ ನೀವು ಪೋಸ್ಟ್ ಮಾಡಿದ ವಿಡಿಯೋದ ಮಾಹಿತಿಯನ್ನು ಪ್ರೇಕ್ಷಕರಿಂದ ನೀವು ನಿರ್ಬಂಧಿಸಬಹುದು. ಪ್ಲಾಟ್ ಫಾರ್ಮ್ ನಲ್ಲಿನ ಗೌಪ್ಯತಾ ಸೆಟ್ಟಿಂಗ್ ಬದಲಾವಣೆಗಳು ನೀವು ಹಿಂದೆ ಪ್ರಕಟಿಸಿದ ಮಾಹಿತಿಗೆ ಕೂಡ ತಕ್ಷಣ ಅನ್ವಯಿಸುತ್ತದೆ ಮತ್ತು ಪರಿಣಾಮಕ್ಕೆ ಒಳಗಾಗುತ್ತವೆ. ನಿಮ್ಮ UGV ಅಥವಾ ಪ್ರಸಾರ ವಿಷಯ ಹಾಗೂ ನಿಮ್ಮ ಪ್ರೊಫೈಲ್ ನಲ್ಲಿ ನೀವು ಒದಗಿಸಿದ ಇತರ ಮಾಹಿತಿಯನ್ನು ತೆಗೆದುಹಾಕಲುನೀವು ನಿರ್ಧರಿಸಿದ ನಂತರ ನಿಮ್ಮ ಪ್ಲಾಟ್ ಪಾರ್ಮ್ ಬಳಕೆಯ ಮಾಹಿತಿಯನ್ನು ನಾವು ಅಳಿಸಿ ಹಾಕುತ್ತೇವೆ.

7. ನಿಮ್ಮ ಮಾಹಿತಿಯನ್ನು ನಾವು ಎಲ್ಲಿಯವರೆಗೆ ಇರಿಸಿಕೊಳ್ಳುತ್ತೇವೆ

ನಾವು ನಿಮ್ಮ ಮಾಹಿತಿಯನ್ನು ಇಟ್ಟುಕೊಳ್ಳುವ ಅವಧಿಯನ್ನು ನಿರ್ಧರಿಸಲು ಕೆಳಗಿನ ಮಾನದಂಡಗಳನ್ನು ನಾವು ಬಳಸುತ್ತೇವೆ:

 • ಇಲ್ಲಿರುವ ಮಾಹಿತಿಗೆ ಸಂಬಂಧಿಸಿದಂತೆ ನಮ್ಮ ಒಪ್ಪಂದದ ಕರಾರುಗಳು ಮತ್ತು ಹಕ್ಕುಗಳು;
 • ಒಂದು ನಿರ್ದಿಷ್ಟ ಅವಧಿಗೆ ಡೇಟಾವನ್ನು ಉಳಿಸಿಕೊಳ್ಳಲು ಇರುವ ನಿಗದಿತ ಕಾನೂನು (ಗಳು) ಮತ್ತು ನಿಬಂಧನೆಗಳ ಅಡಿಯಲ್ಲಿನ ಕಾನೂನು ಬಾಧ್ಯತೆ (ಗಳು);
 • ಅನ್ವಯವಾಗುವ ಕಾನೂನಿನ (ಗಳು) ಅಡಿಯಲ್ಲಿನ ಮಿತಿ;
 • ನಮ್ಮ ಕಾನೂನುಬದ್ಧ ವ್ಯವಹಾರ ಉದ್ದೇಶಗಳು; ಮತ್ತು
 • ವಿವಾದಗಳು ಅಥವಾ ಸಂಭಾವ್ಯ ವಿವಾದಗಳು.

ನಮ್ಮ ಸೇವೆಗಳ ಬಳಕೆಯನ್ನು ನೀವು ಕೊನೆಗೊಳಿಸಿದ ನಂತರ, ನಾವು ನಿಮ್ಮ ಮಾಹಿತಿಯನ್ನು ಒಟ್ಟುಗೂಡಿಸಿದ ಮತ್ತು ಅನಾಮಧೇಯಗೊಳಿಸಿದ ಸ್ವರೂಪದಲ್ಲಿ ಸಂಗ್ರಹಿಸಬಹುದು. ಯಾವುದೇ ಅವಶ್ಯಕತೆ ಇಲ್ಲದಿದ್ದರೂ, ನಮ್ಮ ಕಾನೂನುಬದ್ಧ ಜವಾಬ್ದಾರಿಗಳಿಗೆ ಅನುಸಾರವಾಗಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವುಅಗತ್ಯವಾಗಿ ಉಳಿಸಿಕೊಳ್ಳಬಹುದು, ವಿವಾದಗಳನ್ನು ಪರಿಹರಿಸಲು ಮತ್ತು ದಾವೆ ಹೂಡುವುದಕ್ಕೆ ಹಾಗೆಯೆ ನಮ್ಮ ಒಪ್ಪಂದಗಳನ್ನು ಜಾರಿಗೊಳಿಸಲು ನಮಗೆ ಇದು ಅವಕಾಶ ಮಾಡಿಕೊಡಬಹುದು.

8. ಮಕ್ಕಳಿಗೆ ಸಂಬಂಧಿಸಿದ ಮಾಹಿತಿ

ಪ್ಲಾಟ್ ಫಾರ್ಮ್ 13 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ನಿರ್ಬಂಧಿದಲಾಗಿದೆ. 13 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಗೊತ್ತಾದಲ್ಲಿ ನಾವು ಆ ಮಾಹಿತಿಯನ್ನು ಅಳಿಸಿ ಹಾಕುತ್ತೇವೆ ಮತ್ತು ಆ ಖಾತೆಯನ್ನು ತೆಗೆದುಹಾಕುತ್ತೇವೆ. 13 ವರ್ಷದೊಳಗಿನ ಮಗುವಿನಿಂದ ನಾವು ಮಾಹಿತಿಯನ್ನು ಸಂಗ್ರಹಿಸಿದ್ದೇವೆ ಎಂಬುದು ನಿಮ್ಮ ಗ್ರಹಿಕೆಗೆ ಬಂದರೆ, ದಯವಿಟ್ಟು ನಮ್ಮನ್ನು privacy@tiktok.com ನಲ್ಲಿ ಸಂಪರ್ಕಿಸಿ.

9. ಬದಲಾವಣೆಗಳು

ಈ ನೀತಿಯ ಇತ್ತೀಚಿನ ಆವೃತ್ತಿಯು ನಿಮ್ಮ ಡೇಟಾವನ್ನು ನಮ್ಮ ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಅನ್ವಯವಾಗುತ್ತದೆ. ನವೀಕರಿಸಲಾದ ನೀತಿಯ ದಿನಾಂಕದ ನಂತರ ನಿಮ್ಮ ಮುಂದುವರಿದ ಅವಕಾಶ ಅಥವಾ ಸೇವೆಗಳನ್ನು ಬಳಸುವುದರಿಂದ ನವೀಕರಿಸಲಾದ ನೀತಿಯು ನಿಮಗೆ ಒಪ್ಪಿಗೆಯಿದೆ ಎಂಬ ಮೂಲಕ ನಿಮಗೆ ಅನ್ವಯಿಸಲ್ಪಡುತ್ತದೆ. ನವೀಕರಿಸಿದ ನೀತಿಯನ್ನು ನೀವು ಒಪ್ಪಿಕೊಳ್ಳದಿದ್ದರೆ, ನೀವು ಸೇವೆಯ ಅವಕಾಶ ಅಥವಾ ಬಳಕೆಯನ್ನು ನಿಲ್ಲಿಸಬೇಕು. ನಮ್ಮ ನೀತಿಯಲ್ಲಿ ಏನಾದರೂ ಹೊಸ ಬದಲಾವಣೆಗಳಾದಾಗ ಪ್ಲಾಟ್ ಫಾರ್ಮ್ ನಲ್ಲಿ ಸಾಮಾನ್ಯವಾಗಿ ನೋಟಿಫಿಕೇಶನ್ ಮೂಲಕ ತಿಳಿಸುತ್ತೇವೆ. ಆದಾಗ್ಯೂ, ನೀತಿಯಲ್ಲಿ ಯಾವುದಾದರೂ ಬದಲಾವಣೆಯಾಗಿದೆಯೆ ಎಂದು ತಿಳಿದುಕೊಳ್ಳಲು ನೀವು ನಿಯಮಿತವಾಗಿ ಈ ನೀತಿಯನ್ನು ಪರಿಶೀಲಿಸುತ್ತಿರಬೇಕು. ನಾವು ಕೂಡ ಈ ನೀತಿಯ ಮೇಲಿನ "ಕೊನೆಯ ನವೀಕರಿಸಿದ" ದಿನಾಂಕವನ್ನು ನಮೂದಿಸುತ್ತೇವೆ. ಇದು ನೀತಿ ಬದಲಾವಣೆಯ ಪ್ರಮುಖ ದಿನಾಂಕವನ್ನು ತಿಳಿಸುತ್ತದೆ.