ಸುರಕ್ಷತಾ ಕೇಂದ್ರ

  • ಡ್ಯುಯೆಟ್‍ಗಳು ಎಂಬುದು ಬೇರೊಬ್ಬ ಬಳಕೆದಾರರ ಜೊತೆಗೆ ವೀಡಿಯೊಗಳನ್ನು ರಚಿಸಲು ಇರುವ ಮೋಜಿನ ವಿಧಾನವಾಗಿದೆ, ಆದರೆ ನೀವು ನಿಯಂತ್ರಣವನ್ನು ಹೊಂದಿರುತ್ತೀರಿ: ನಿಮ್ಮ ಜೊತೆ ಯಾರೆಲ್ಲಾ ಡ್ಯುಯೆಟ್ ಮಾಡಬಹುದು (ಪ್ರತಿಯೊಬ್ಬರೂ, ಯಾರೂ ಇಲ್ಲ ಅಥವಾ ಸ್ನೇಹಿತರು ಮಾತ್ರ) ಎಂಬುದನ್ನು ಆರಿಸಿಕೊಳ್ಳಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಹೇಗೆಂದು ತಿಳಿದುಕೊಳ್ಳಿ

  • ನಿಮ್ಮ ವೀಡಿಯೊಗಳಲ್ಲಿ ಕಾಮೆಂಟ್ ಮಾಡಲು ನೀವು ಯಾರಿಗೆಲ್ಲಾ ಅವಕಾಶ ನೀಡುವಿರಿ? ನೀವೇ ನಿರ್ಧರಿಸಿ! ಹೇಗೆಂದು ತಿಳಿದುಕೊಳ್ಳಿ

  • ನಿಮ್ಮ ವೀಡಿಯೊಗಳಲ್ಲಿ ಪೋಸ್ಟ್ ಮಾಡಿರುವ ಯಾವುದೇ ಕಾಮೆಂಟ್ ಅನ್ನು ಅಳಿಸಲು ಸಹ ನಿಮಗೆ ಸಾಧ್ಯವಾಗುತ್ತದೆ - ಕಾಮೆಂಟ್ ಅನ್ನು ಟ್ಯಾಪ್ ಮಾಡಿ ಹಾಗೂ ಹಿಡಿದಿಟ್ಟುಕೊಳ್ಳಿ, ನಂತರ 'ಅಳಿಸಿ' ಅನ್ನು ಆರಿಸಿ
  • ನೀವೊಂದು ವೀಡಿಯೊ ನೋಡಿದಾಗ ಅದರಲ್ಲಿನ ಯಾವುದೋ ವಿಷಯವು ಇಷ್ಟವಾಗದಿದ್ದರೆ, ನಿಮ್ಮ ಆದ್ಯತೆಯನ್ನು ತೋರಿಸುವುದಕ್ಕಾಗಿ ಆ ವೀಡಿಯೊ ಮೇಲೆ ದೀರ್ಘ ಸಮಯದವರೆಗೆ ಒತ್ತಿಹಿಡಿಯುವ ಮೂಲಕ ಭವಿಷ್ಯದಲ್ಲಿ ಅಂತಹ ವೀಡಿಯೊಗಳು ಕಡಿಮೆ ಕಾಣುವಂತೆ ಮಾಡಬಹುದು. ಹೇಗೆಂದು ತಿಳಿದುಕೊಳ್ಳಿ

  • ಖಾಸಗಿ ಖಾತೆಯ ಮೂಲಕ, ನೀವು ಅನುಸರಿಸುವವರಾಗಿ ಅನುಮೋದಿಸಿದ ಬಳಕೆದಾರರು ಮಾತ್ರ ನಿಮ್ಮ ವಿಷಯವನ್ನು ನೋಡಬಹುದು, ಆದರೆ ನೀವು ನಿರ್ದಿಷ್ಟ ವೀಡಿಯೋವನ್ನು ಖಾಸಗಿ ಎಂಬುದಾಗಿ ಮಾಡಲು ಸಹ ಆರಿಸಿಕೊಳ್ಳಬಹುದು.ಖಾಸಗಿ ವೀಡಿಯೋಗಳು ನಿಮಗೆ ಮಾತ್ರ ಕಂಡುಬರುತ್ತವೆ ಮತ್ತು ನೀವು ಮೂಲತಃ ವೀಡಿಯೋವನ್ನು ಅಪ್‌ಲೋಡ್ ಮಾಡಿದಾಗ ಅಥವಾ ನಂತರದ ಸಮಯದಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೋವನ್ನು ಖಾಸಗಿ ಎಂಬುದಾಗಿ ಮಾಡುವ ಮೂಲಕ ಈ ಸೆಟ್ಟಿಂಗ್ ಅನ್ನು ಆಯ್ಕೆಮಾಡಬಹುದು. ಹೇಗೆಂದು ತಿಳಿದುಕೊಳ್ಳಿ

  • ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಬಹುದಾದ ಯಾವುದೇ ವಿಷಯವು ನಿಮಗೆ ಕಾಣಿಸಿದರೆ, ದಯವಿಟ್ಟು ಅದನ್ನು ವರದಿ ಮಾಡಿ. ಹೀಗೆ ವರದಿ ಮಾಡಿದಾಗ ನಮ್ಮ ಮಾಡರೇಶನ್ ತಂಡವು ಅದನ್ನು ಪರಿಶೀಲಿಸಬಹುದು ಹಾಗೂ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನೀವು ನಿರ್ದಿಷ್ಟ ವೀಡಿಯೊ, ಲೈವ್‍ಸ್ಟ್ರೀಮ್, ಬಳಕೆದಾರರು ಅಥವಾ ಕಾಮೆಂಟ್ ಅನ್ನು ಆಪ್‍ನೊಳಗಿನಿಂದಲೇ ವರದಿ ಮಾಡಬಹುದು. ಹೇಗೆಂದು ತಿಳಿದುಕೊಳ್ಳಿ