ಸುರಕ್ಷತಾ ಕೇಂದ್ರ

ನಮಸ್ಕಾರ, ಪೋಷಕರೇ! ಈ ಪುಟದಲ್ಲಿ TikTok ಅನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಹಾಗೂ ಆಪ್ ಮತ್ತು ಸಮುದಾಯದಲ್ಲಿ ನಿಮ್ಮ ಹದಿಹರೆಯದ ಮಕ್ಕಳು ಉತ್ತಮ ಅನುಭವವನ್ನು ಪಡೆಯಲು ನೀವು ಹೇಗೆ ನೆರವಾಗಬಹುದು ಎಂಬುದನ್ನು ತಿಳಿಸುವ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಕಾಣಬಹುದಾಗಿದೆ.

ಸಾಮಾನ್ಯವಾಗಿ ಹೇಳಬೇಕೆಂದರೆ, ಒಟ್ಟಾರೆಯಾಗಿ ನಿಮ್ಮ ಹದಿಹರೆಯದ ಮಕ್ಕಳ ಆನ್‍ಲೈನ್ ಅನುಭವದ ವಿಷಯದಲ್ಲಿ ನೀವೊಂದು ಸಕ್ರಿಯ ಪಾತ್ರವನ್ನು ವಹಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇಂಟರ್ನೆಟ್ ಸುರಕ್ಷತೆ, ಆನ್‍ಲೈನ್ ಗೌಪ್ಯತೆ ಮತ್ತು ಅವರಿಗಾಗಿ ಲಭ್ಯವಿರುವ ಆಯ್ಕೆಗಳ ಕುರಿತು ಮುಂಚಿತವಾಗಿಯೇ ಅವರೊಂದಿಗೆ ಚರ್ಚಿಸಿ. ನಿಮ್ಮ ಮಾರ್ಗದರ್ಶನವು ಅಮೂಲ್ಯವಾದದ್ದು!

TikTok ಎಂದರೇನು?

TikTok ಎಂಬುದು ಕಿರು ಮೊಬೈಲ್ ವೀಡಿಯೊಗಳಿಗಾಗಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಒಂದು ಅಂತರ್ಜಾಲದ ಸ್ಥಳವಾಗಿದೆ. ಜಗತ್ತಿನಲ್ಲಿರುವ ಸೃಜನಶೀಲತೆ, ತಿಳುವಳಿಕೆ ಹಾಗೂ ಪ್ರತಿನಿತ್ಯದ ಜೀವನದಲ್ಲಿ ಮಹತ್ವವನ್ನು ಪಡೆದಿರುವ ಕ್ಷಣಗಳನ್ನು ಸೆರೆಹಿಡಿಯುವುದು ಮತ್ತು ಅವುಗಳನ್ನು ಈ ವೇದಿಕೆಯಲ್ಲಿ ಪ್ರಸಾರ ಪಡಿಸುವುದು ನಮ್ಮ ಧ್ಯೇಯವಾಗಿದೆ. ತಮ್ಮದೇ ಸ್ಮಾರ್ಟ್‍ಫೋನ್‍ಗಳನ್ನು ಬಳಸಿಕೊಂಡು ಸೃಜನಶೀಲ ರಚನೆಕಾರರಾಗುವ ಅವಕಾಶವನ್ನು TikTok ಒದಗಿಸುತ್ತದೆ ಮತ್ತು ತಮ್ಮ ಉತ್ಸಾಹ ಹಾಗೂ ಸೃಜನಶೀಲ ಅಭಿವ್ಯಕ್ತಿಯನ್ನು ತಮ್ಮದೇ ವೀಡಿಯೊಗಳ ಮೂಲಕ ಹಂಚಿಕೊಳ್ಳಲು ಪ್ರೋತ್ಸಾಹಿಸುವಂತಹ ಒಂದು ಸಮುದಾಯವನ್ನು ನಿರ್ಮಿಸಲು ಇದು ಬದ್ಧವಾಗಿದೆ.

TikTok ಅನ್ನು ಯಾರಿಗಾಗಿ ಉದ್ದೇಶಿಸಲಾಗಿದೆ?

TikTok ಅನ್ನು 13 ಮತ್ತು ಇದಕ್ಕಿಂತ ಹೆಚ್ಚಿನ ಬಳಕೆದಾರರರನ್ನು ದೃಷ್ಟಿಯಲ್ಲಿರಿಸಿಕೊಂಡು ನಿರ್ಮಿಸಲಾಗಿದೆ. ಈ ಆಪ್ ಅನ್ನು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬಳಸುವುದಕ್ಕೆ ದಯವಿಟ್ಟು ಅವಕಾಶ ನೀಡಬೇಡಿ.

13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು TikTok ಖಾತೆಗಾಗಿ ನೋಂದಾಯಿಸಿರುವುದು ತಿಳಿದುಬಂದರೆ, privacy@tiktok.com ಎಂಬಲ್ಲಿ ನೀವು ನಮಗೆ ತಿಳಿಸಬಹುದು. ನಾವು ತಕ್ಷಣವೇ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ.

ಸೂಕ್ತ ಬಳಕೆಯ ಕುರಿತು ಹೆಚ್ಚು ಮಾಹಿತಿಗಾಗಿ, ದಯವಿಟ್ಟು ನಮ್ಮ ಸೇವಾ ನಿಯಮಗಳು ಹಾಗೂ ಸಮುದಾಯ ಮಾರ್ಗಸೂಚಿಗಳನ್ನು ನೋಡಿ.

TikTok ಅನ್ನು ನನ್ನ ಹದಿಹರೆಯದ ಮಗು ಡೌನ್‍ಲೋಡ್ ಮಾಡದ ಹಾಗೆ ಮಾಡುವುದು ಹೇಗೆ?

ನಿಮ್ಮ ಹದಿಹರೆಯದ ಮಗು ಡೌನ್‍ಲೋಡ್ ಮಾಡಬಹುದಾದ ಯಾವುದೇ ಆಪ್‍ಗಳು ಸೇರಿದಂತೆ ಅವರ ಇಂಟರ್ನೆಟ್ ಬಳಕೆಯತ್ತ ಗಮನಹರಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. iOS ಮತ್ತು Android ಇವೆರಡೂ ಸಹ ಪೇರೆಂಟಲ್ ಕಂಟ್ರೋಲ್‍ಗಳನ್ನು ಒದಗಿಸುತ್ತದೆ, ಇದರ ಮೂಲಕ ನಿರ್ದಿಷ್ಟ ಆಪ್‍ಗಳನ್ನು, ಸೌಲಭ್ಯಗಳನ್ನು, ಚಲನಚಿತ್ರಗಳನ್ನು, ಸಂಗೀತ ಹಾಗೂ ಇನ್ನೂ ಹೆಚ್ಚಿನವುಗಳನ್ನು ಪ್ರಾರಂಭದಲ್ಲಿಯೇ ನೀವು ನಿರ್ಬಂಧಿಸಬಹುದು ಅಥವಾ ಸೀಮಿತಗೊಳಿಸಬಹುದು.

TikTok, 13 ಮತ್ತು ಮೇಲ್ಪಟ್ಟ ವಯಸ್ಕರಿಗಾಗಿ ಇರುವ ಆಪ್ ಆದ ಕಾರಣ, ನಾವು ಕಟ್ಟುನಿಟ್ಟಾದ 12+ ಆಪ್ ಸ್ಟೋರ್ ರೇಟಿಂಗ್ ಅನ್ನು ನೀಡಿದ್ದೇವೆ. ನಿಮ್ಮ ಅಪ್ರಾಪ್ತ ವಯಸ್ಕ ಮಗುವಿನ ಫೋನ್‍ನಿಂದ ಆಪ್ ಅನ್ನು ನಿರ್ಬಂಧಿಸಲು ಸಾಧನ-ಆಧಾರಿತ ಪೇರೆಂಟಲ್ ಕಂಟ್ರೋಲ್‍ಗಳನ್ನು ಬಳಸಲು ಇದು ನಿಮಗೆ ಅವಕಾಶ ನೀಡುತ್ತದೆ.

ಪೇರೆಂಟಲ್ ಕಂಟ್ರೋಲ್‍ಗಳು (ಅಥವಾ \"ನಿರ್ಬಂಧಗಳು') ಮತ್ತು ಅವುಗಳನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ Apple App Store ಅಥವಾ Google Play Store ಸೂಚನೆಗಳನ್ನು ನೋಡಿ.

ನನ್ನ ಹದಿಹರೆಯದ ಮಗುವಿನ ವೀಡಿಯೊಗಳನ್ನು ಯಾರೆಲ್ಲಾ ನೋಡಬಹುದು ಮತ್ತು ಯಾರೆಲ್ಲಾ ಅವರಿಗೆ ಸಂದೇಶಗಳನ್ನು ಕಳುಹಿಸಬಹುದು ಎಂಬುದನ್ನು ಅವರು ಹೇಗೆ ನಿರ್ವಹಿಸಬಹುದು?

ತಾವು ಅಪ್‍ಲೋಡ್ ಮಾಡಿರುವ ವಿಷಯವನ್ನು ಯಾರೆಲ್ಲಾ ನೋಡಬಹುದು, ಯಾರೆಲ್ಲಾ ತಮ್ಮನ್ನು ಅನುಸರಿಸಬಹುದು ಹಾಗೂ ಸಂದೇಶಗಳನ್ನು ಕಳುಹಿಸಬಹುದು ಎಂಬುದನ್ನು ಖಾತೆಯನ್ನು ಖಾಸಗಿಯಾಗಿ ಮಾಡುವ ಮೂಲಕ ನಿಯಂತ್ರಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ. ಖಾಸಗಿ ಖಾತೆಯ ಮೂಲಕ, ಬಳಕೆದಾರರು ತಮ್ಮನ್ನು ಅನುಸರಿಸುವವರನ್ನು ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು ಹಾಗೂ ತಾವು ಅಪ್‍ಲೋಡ್ ಮಾಡಿರುವ ವಿಷಯ ಹಾಗೂ ಒಳಬರುವ ಸಂದೇಶಗಳು ಅನುಸರಿಸುವರಿಗೆ ಮಾತ್ರ ಕಾಣಿಸುವ ಹಾಗೆ ಮಾಡಬಹುದು.

ಬಳಕೆದಾರರು ಸಾರ್ವಜನಿಕ ಪ್ರೊಫೈಲ್ ಅನ್ನು ಹೊಂದಿದ್ದರೆ, TikTok ಆಪ್‍ಗೆ ಸೈನ್ ಇನ್ ಮಾಡಿರುವ ಯಾರು ಬೇಕಾದರೂ ಆ ಬಳಕೆದಾರರ ಸಾರ್ವಜನಿಕ ವೀಡಿಯೊಗಳನ್ನು ವೀಕ್ಷಿಸಬಹುದು. ಆದರೂ, ಅನುಮೋದನೆ ಪಡೆದಿರುವ ಅನುಸರಿಸುವವರು ಮಾತ್ರ ಆ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಬಹುದು.

ಬಳಕೆದಾರರು ಸಾರ್ವಜನಿಕ ಅಥವಾ ಖಾಸಗಿ ಖಾತೆಯನ್ನು ಹೊಂದುವ ಆಯ್ಕೆಯನ್ನು ಮಾಡಿರಲಿ ಅಥವಾ ಇಲ್ಲದಿರಲಿ, ನೀವು ಯಾವಾಗಲೂ ಇದನ್ನು ಮಾಡಬಹುದು:

  • ಬೇರೊಬ್ಬ ಬಳಕೆದಾರರನ್ನು ಸಂಪರ್ಕಿಸದ ಹಾಗೆ ಮಾಡಲು ಅವರನ್ನು ಯಾವುದೇ ಸಮಯದಲ್ಲಿ ನಿರ್ಬಂಧಿಸಬಹುದು
  • ಒಂದು ವೀಡಿಯೊವನ್ನು ಖಾಸಗಿಯಾಗಿ ಉಳಿಸಬಹುದು, ಈ ಮೂಲಕ ಇದರ ವಿಷಯವನ್ನು ವೀಕ್ಷಿಸಲು ಬೇರೊಬ್ಬ ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ
  • ಕಾಮೆಂಟ್‍ಗಳು, ಡ್ಯೂಯೆಟ್‍ಗಳು ಅಥವಾ ಸಂದೇಶಗಳ ಮೇಲೆ ನಿರ್ಬಂಧಗಳನ್ನು ಸಕ್ರಿಯಗೊಳಿಸಬಹುದು

ನಿಮ್ಮ ಹದಿಹರೆಯದ ಮಗು ತಮ್ಮ TikTok ಅನುಭವವನ್ನು ನಿಯಂತ್ರಿಸಲು ಸಹಾಯ ಮಾಡಬಹುದಾದ ಹೆಚ್ಚಿನ ಸೆಟ್ಟಿಂಗ್‍ಗಳಿಗಾಗಿ, ನಮ್ಮ ಟೂಲ್‍ಗಳು ಎಂಬ ಪುಟಕ್ಕೆ ಭೇಟಿ ನೀಡಿ.

ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ: ನೀವು ಖಾಸಗಿ ಖಾತೆಯನ್ನು ಹೊಂದಿದ್ದರೂ ಸಹ ಪ್ರೊಫೈಲ್ ಫೋಟೋ, ಬಳಕೆದಾರ-ಹೆಸರು ಮತ್ತು ಜೀವನಚರಿತ್ರೆ ಸೇರಿದಂತೆ ಪ್ರೊಫೈಲ್ ಮಾಹಿತಿಯು ಎಲ್ಲಾ ಬಳಕೆದಾರರಿಗೆ ಕಾಣಿಸುತ್ತದೆ. ನಿಮ್ಮ ಹದಿಹರೆಯದ ಮಗುವಿನ ಜೊತೆಗೆ ಮಾತನಾಡಿ ಹಾಗೂ ವಯಸ್ಸು, ವಿಳಾಸ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ತಮ್ಮ ಪ್ರೊಫೈಲ್‍ನಲ್ಲಿ ಬಹಿರಂಗಪಡಿಸಬಾರದೆಂದು ಅವರಿಗೆ ಹೇಳಿ.

ನನ್ನ ಹದಿಹರೆಯದ ಮಗು ಅನುಚಿತ ವಿಷಯ ಅಥವಾ ವರ್ತನೆಯನ್ನು ಹೇಗೆ ವರದಿ ಮಾಡಬಹುದು?

ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಬಹುದಾದ ಯಾವುದೇ ವಿಷಯವು ನಿಮಗೆ ಅಥವಾ ನಿಮ್ಮ ಹದಿಹರೆಯದ ಮಕ್ಕಳಿಗೆ ಕಾಣಿಸಿದರೆ, ದಯವಿಟ್ಟು ಅದನ್ನು ವರದಿ ಮಾಡಿ. ಹೀಗೆ ವರದಿ ಮಾಡಿದಾಗ ನಮ್ಮ ಮಾಡರೇಶನ್ ತಂಡವು ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ. ಬಳಕೆದಾರರು ನಿರ್ದಿಷ್ಟ ವೀಡಿಯೊ, ಬಳಕೆದಾರರು ಅಥವಾ ಕಾಮೆಂಟ್ ಅನ್ನು ಆಪ್‍ನಿಂದಲೇ ವರದಿ ಮಾಡಬಹುದು.

ಇಷ್ಟೇ ಅಲ್ಲದೆ, ನಿಮ್ಮ ಹದಿಹರೆಯದ ಮಕ್ಕಳು ಬೇರೊಬ್ಬ ಬಳಕೆದಾರರನ್ನು ನಿರ್ಬಂಧಿಸಬಹುದು, ಹೀಗೆ ಮಾಡುವುದರಿಂದ ನಿರ್ಬಂಧಿಸಿರುವ ಬಳಕೆದಾರರು ನಿಮ್ಮ ಮಕ್ಕಳಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಅವರ ವಿಷಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.