ಸುರಕ್ಷತಾ ಕೇಂದ್ರ

ಆನ್ ಲೈನ್ ಕಿರುಕುಳವು ಅನೇಕ ರೀತಿಯದ್ದಾಗಿರುತ್ತದೆ. ಇದು ಟ್ರೋಲ್ ನಿಂದ ಹಿಡಿದು ಅನಗತ್ಯ ಕಮೆಂಟ್ ವರೆಗೂ ವ್ಯಾಪಿಸಿರುತ್ತದೆ. ಗ್ಲೋಬಲ್ ಕಮ್ಯೂನಿಟಿಯಾಗಿದ್ದು ಸೃಜನಾತ್ಮಕ ಪ್ರತಿಕ್ರಿಯೆಯನ್ನು ಉದ್ದೇಶವಾಗಿರಿಸಿಕೊಂಡಿರುವ ಟಿಕ್ ಟಾಕ್ ಕಮ್ಯೂನಿಟಿಯ ಒಳಗೆ ಬಳಕೆದಾರರು ತಾವು ಸುರಕ್ಷಿತ ಮತ್ತು ಆರಾಮದಾಯಕ ಎನಿಸುವಂತಿರಬೇಕು.

ನಿಮ್ಮ ಟಿಕ್ ಟಾಕ್ ಅನುಭವವನ್ನು ನಿಯಂತ್ರಿಸಲು ಕೆಲವು ಆಪ್ ಸೆಟ್ಟಿಂಗ್ ಗಳನ್ನು ನೀಡಲಾಗಿದೆ ಈ ನಿಯಂತ್ರಕಗಳನ್ನು ನಿಮ್ಮ ಕಂಟೆಂಟ್ ಗಳಲ್ಲಿ ಅಳವಡಿಸುವ ಮೂಲಕ ಅಥವಾ ಅನಗತ್ಯ ಕಮ್ಯೂನಿಟಿ ಸಂವಹನವನ್ನು ನಿರ್ವಹಿಸಲು ಇದನ್ನು ಬಳಸಬಹುದಾಗಿದೆ :

  • ನಿಮ್ಮ ಖಾತೆಯನ್ನು ಖಾಸಗಿಯನ್ನಾಗಿ ಮಾಡಲು ಆಯ್ಕೆ ಮಾಡುವುದರಿಂದ ಫಾಲೋವರ್ ಗಳಿಗೆ ಅನುಮೋದಿಸಲು ಅಥವಾ ನಿರಾಕರಿಸಲು ಮತ್ತು ಅಪ್ಲೋಡ್ ಮಾಡಿದ ನಿಮ್ಮ ವಿಷಯವನ್ನು ಕೇವಲ ಫಾಲೋ ಮಾಡುವವರು ಮಾತ್ರ ನೋಡಲು ಅನುಮೋದಿಸಬಹುದು.
  • ನಿಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಡ್ಯೂಯೆಟ್ಸ್ ಒಂದು ಮೋಜಿನ ಮಾರ್ಗವಾಗಿದ್ದರೂ, ನಿಮ್ಮೊಂದಿಗೆ ಯಾರು ಡ್ಯೂಯೆಟ್ಸ್ ಮಾಡಬಹುದುಎಂಬುದನ್ನು ನೀವು ನಿರ್ಧರಿಸುತ್ತೀರಿ. ನಿಮ್ಮ ಎಲ್ಲ ವೀಡಿಯೊಗಳಿಗಾಗಿ ನೀವು ಒಂದು ಸೆಟ್ಟಿಂಗ್ ಅನ್ನು ಆಯ್ಕೆ ಮಾಡಬಹುದು, ಅಥವಾ ಪ್ರತಿ ವೀಡಿಯೊಗೆ ಪ್ರತ್ಯೇಕವಾಗಿ ಆ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಿಮ್ಮ ವೀಡಿಯೊಗಳಿಗೆ ಯಾರು ಪ್ರತಿಕ್ರಿಯಿಸಬಹುದು ಎಂಬುದರ ಮೇಲೆ ನೀವು ನಿಯಂತ್ರಣ ಹೊಂದಿರುತ್ತೀರಿ!
  • ನಿಮ್ಮ ವೀಡಿಯೊಗಳಲ್ಲಿ ಪೋಸ್ಟ್ ಮಾಡಿದ ಯಾವುದೇ ಕಾಮೆಂಟ್ ಅನ್ನು ಅಳಿಸಲು ನೀವು ಸಾಮರ್ಥ್ಯವನ್ನು ಹೊಂದಿರುತ್ತೀರಿ - ಕಾಮೆಂಟ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ, ನಂತರ "ಅಳಿಸಿ" ಆಯ್ಕೆಮಾಡಿ.
  • ಯಾರಾದರೂ ನಿಮಗೆ ಕಿರುಕುಳ ನೀಡುತ್ತಿದ್ದಾರೆ ಅಥವಾ ಸೂಕ್ತವಲ್ಲ ಎಂದು ಭಾವಿಸಿದರೆ, ದಯವಿಟ್ಟು ನಮಗೆ ವರದಿ ಮಾಡಿ. ನಮ್ಮ ಮೊಡರೇಷನ್ ತಂಡ ಅದನ್ನು ಪರಿಶೀಲಿಸಲು ಅವಕಾಶ ನೀಡಿ ಮತ್ತು ಟಿಕ್ ಟಾಕ್ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಸರಿಯಾದ ಕ್ರಮ ತೆಗೆದುಕೊಳ್ಳಬಹುದು.
  • ಹೆಚ್ಚಿನ ಆಯ್ಕೆಗಳಿಗಾಗಿ, ದಯವಿಟ್ಟು ನಮ್ಮ ಟೂಲ್ಸ್ ಪುಟಕ್ಕೆ ಭೇಟಿ ನೀಡಿ.

ಇತರರು ಕಿರುಕುಳಕ್ಕೆ ಒಳಗಾಗುತ್ತಿದ್ದಲ್ಲಿ, ನೀವು ಈ ಕೆಳಗಿನ ಸರಿಯಾದ ರೀತಿಯಲ್ಲಿ ಅವರಿಗೆ ಸಹಾಯ ಮಾಡಬಹುದು!

  • ನಿಮ್ಮ ಸ್ನೇಹಿತರಿಗೆ ಭಾವನಾತ್ಮಕವಾದ ಬೆಂಬಲವನ್ನು ನೀಡಿ
  • ಪೋಷಕರಾಗಿ, ನೀವು ನಿಮ್ಮ ಹದಿವಯಸ್ಸಿನ ಮಕ್ಕಳ ಜೊತೆ ಕುಳಿತುಕೊಂಡು ಅವರ ಖಾತೆಯ ಸೆಟ್ಟಿಂಗ್ ಅನ್ನು ನಿರ್ವಹಿಸಲು ಸಹಾಯ ಮಾಡಿ ಮತ್ತು ಅವರ ಆನ್ ಲೈನ್ ಅನುಭವವನ್ನು ಉತ್ತಮವಾಗಿಸಿ.
  • ನೆನಪಿಡಿ : ಒಂದು ವೇಳೆ ಯಾರಾದರೂ ನಿಮಗೆ ಅಥವಾ ಇನ್ನೊಬ್ಬರಿಗೆ ಬೆದರಿಕೆ ಒಡ್ಡುತ್ತಿದ್ದರೆ, ನೀವು ತಕ್ಷಣ ಪೋಲಿಸ್ ಅಥವಾ ಸ್ಥಳಿಯ ಕಾನೂನು ಸಹಾಯಕರಿಗೆ ತಕ್ಷಣ ಕರೆ ಮಾಡಿ.