TikTok ಕುರಿತು

TikTok ಇದು ಕಿರು ಮೊಬೈಲ್ ವೀಡಿಯೊಗಳಿಗಾಗಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಗಮ್ಯಸ್ಥಾನವಾಗಿದೆ. ಜಗತ್ತಿನಲ್ಲಿರುವ ಸೃಜನಶೀಲತೆ, ತಿಳುವಳಿಕೆ ಹಾಗೂ ದಿನನಿತ್ಯದ ಜೀವನದಲ್ಲಿ ಅಗತ್ಯವಾಗಿರುವ ಕ್ಷಣಗಳನ್ನು ಸೆರೆಹಿಡಿಯುವುದು ಮತ್ತು ಪ್ರಸ್ತುತ ಪಡಿಸುವುದು ನಮ್ಮ ಧ್ಯೇಯವಾಗಿದೆ. ತಮ್ಮದೇ ಸ್ವಂತ ಸ್ಮಾರ್ಟ್‍ಫೋನ್‍ಗಳನ್ನು ಬಳಸಿಕೊಂಡು ರಚನೆಕಾರರಾಗುವ ಅವಕಾಶವನ್ನು TikTok ಪ್ರತಿಯೊಬ್ಬರಿಗೂ ಒದಗಿಸುತ್ತಿದೆ ಹಾಗೂ ತಮ್ಮ ಉತ್ಸಾಹ ಮತ್ತು ಸೃಜನಶೀಲ ಅಭಿವ್ಯಕ್ತಿಯನ್ನು ತಮ್ಮದೇ ವೀಡಿಯೊಗಳ ಮೂಲಕ ಹಂಚಿಕೊಳ್ಳಲು ಬಳಕೆದಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಒಂದು ಸಮುದಾಯವನ್ನು ನಿರ್ಮಿಸಲು ನಾವು ಬದ್ಧವಾಗಿದ್ದೇವೆ. TikTok ಇದೀಗ ಬೀಜಿಂಗ್, ಬರ್ಲಿನ್, ಜಕಾರ್ತಾ, ಲಂಡನ್, ಲಾಸ್ ಏಂಜಲೀಸ್, ಮಾಸ್ಕೋ, ಮುಂಬೈ, ಸಾವೋ ಪಾಲೋ, ಸಿಯೋಲ್, ಶಾಂಘೈ, ಸಿಂಗಾಪುರ ಮತ್ತು ಟೋಕ್ಯೊನಲ್ಲಿ ತನ್ನದೇ ಕಚೇರಿಗಳನ್ನು ಹೊಂದಿದೆ. 2018 ರಲ್ಲಿ, ಜಗತ್ತಿನಲ್ಲೇ ಅತಿ ಹೆಚ್ಚು ಬಾರಿ ಡೌನ್‍ಲೋಡ್ ಮಾಡಿದ ಆಪ್‍ಗಳ ಪೈಕಿ TikTok ಸಹ ಒಂದಾಗಿದೆ. iOS ಮತ್ತು Android ಗಾಗಿ ವಿಶ್ವಾದ್ಯಂತ TikTok ಲಭ್ಯವಿದೆ.