ಸಮುದಾಯ ಮಾರ್ಗಸೂಚಿಗಳು

ಕೊನೆಯದಾಗಿ ನವೀಕರಿಸಿರುವುದು: ಜನವರಿ, 2020

TikTok ನ ಗುರಿಯು ಸೃಜನಶೀಲತೆಯನ್ನು ಪ್ರೇರೇಪಿಸುವುದು ಮತ್ತು ಸಂತೋಷವನ್ನು ತರುವುದಾಗಿದೆ. ನಾವು ಜಾಗತಿಕ ಸಮುದಾಯವನ್ನು ನಿರ್ಮಿಸುತ್ತಿದ್ದು ಅಲ್ಲಿ ಬಳಕೆದಾರರು ವಿಶ್ವಾಸಾರ್ಹವಾಗಿ ರಚಿಸಬಹುದು ಮತ್ತು ಹಂಚಿಕೊಳ್ಳಬಹುದು, ಅವರ ಸುತ್ತಲಿನ ಪ್ರಪಂಚವನ್ನು ಅನ್ವೇಷಿಸಬಹುದು ಮತ್ತು ಜಗತ್ತಿನಾದ್ಯಂತ ಇತರರ ಜೊತೆಗೆ ಸಂಪರ್ಕಗೊಳ್ಳಬಹುದು. ಈ ಸಮುದಾಯವನ್ನು ಸುರಕ್ಷಿತವಾಗಿಡಲು ಸಹ ನಾವು ಬದ್ಧರಾಗಿದ್ದೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳು ನಮ್ಮ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಮತ್ತು ನಮ್ಮ ವೇದಿಕೆಯಲ್ಲಿ ಸಾಮಾನ್ಯ ನಡವಳಿಕೆಯ ನಿಯಮಾವಳಿಯನ್ನು ನಿರೂಪಿಸುತ್ತವೆ. ಈ ಮಾರ್ಗಸೂಚಿಗಳು ನಮ್ಮ ಸಮುದಾಯಕ್ಕೆ ಸುರಕ್ಷಿತವಾದ ಹಂಚಿಕೊಂಡ ಸ್ಥಳಾವಕಾಶವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತವೆ.

TikTokಎನ್ನುವುದು ಜವಾಬ್ದಾರಿಯುತ ಮುಕ್ತ ಅಭಿವ್ಯಕ್ತಿಯ ತಳಹದಿಯಲ್ಲಿ ನಿರ್ಮಾಣಗೊಂಡ ಒಳಗೊಳ್ಳುವಿಕೆಯ ವೇದಿಕೆಯಾಗಿದೆ. ಬಳಕೆದಾರರರಿಗೆ ಅವರನ್ನುಯಾವುದು ಅನನ್ಯವಾಗಿರುವಂತೆ ಮಾಡುತ್ತದೆಯೋ ಅದನ್ನು ಸಂಭ್ರಮಾಚರಿಸುವಂತೆ ನಾವು ಉತ್ತೇಜಿಸುತ್ತೇವೆ, ಅದೇ ಸಮಯದಲ್ಲಿ ಸಮುದಾಯವು ಸಹ ಅದನ್ನೇ ಮಾಡುವುದನ್ನು ಅವರು ಕಾಣಬಹುದು. ನಮ್ಮ ಬಳಕೆದಾರರು ವ್ಯಾಪಕವಾದ ರಾಷ್ಟ್ರೀಯತೆಗಳು ಮತ್ತು ಸಂಸ್ಕೃತಿಗಳ ನೆಲಗಟ್ಟಿನಿಂದ ಬಂದಿರುತ್ತಾರೆ ಎಂಬುದನ್ನು ನಾವು ಅತೀವವಾಗಿ ಗೌರವಿಸುತ್ತೇವೆ ಮತ್ತು ನಾವು ಕಾರ್ಯನಿರ್ವಹಿಸುವ ದೇಶಗಳ ಸಾಂಸ್ಕೃತಿಕ ನಿಯಮಗಳು ಮತ್ತು ಸ್ಥಳೀಯ ನಿಬಂಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ.

ಸುರಕ್ಷಿತವಾದ ಮತ್ತು ಬೆಂಬಲಿತ ಪರಿಸರವನ್ನು ನೀಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಸುರಕ್ಷಿತವಾದ ಭಾವನೆ ಎಂದರೆ ಮೂಲಭೂತವಾಗಿ ಜನರಿಗೆ ಮುಕ್ತವಾಗಿ ಮತ್ತು ಸೃಜನಶೀಲವಾಗಿ ಸ್ವತಃ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಾಮದಾಯಕವಾಗಿ ಭಾವಿಸುವಂತೆ ಸಹಾಯ ಮಾಡುವುದಾಗಿದೆ ಎಂಬುದಾಗಿ ನಾವು ಭಾವಿಸುತ್ತೇವೆ. ಮೋಸಗೊಳಿಸುವ ವಿಷಯವನ್ನು ಮತ್ತು ಖಾತೆಗಳನ್ನು ವೇದಿಕೆಯಿಂದ ಹೊರಗಿಡುವ ಮೂಲಕ ವಿಶ್ವಾಸಾರ್ಹವಾದ ಸಂವಹನಗಳಿಗಾಗಿ ಪರಿಸರವನ್ನು ನಿರ್ಮಾಣ ಮಾಡುವ ಗುರಿಯನ್ನು ಸಹ ನಾವು ಹಾಕಿಕೊಂಡಿದ್ದೇವೆ.

ನಮ್ಮ ಮೌಲ್ಯಗಳು ನಮ್ಮ ಸಮುದಾಯ ಮಾರ್ಗಸೂಚಿಗಳ ತಳಹದಿಯನ್ನು ನಿರ್ಮಿಸುತ್ತವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವೀಡಿಯೋ, ಆಡಿಯೋ, ಚಿತ್ರ ಮತ್ತು ಪಠ್ಯವನ್ನು ಒಳಗೊಂಡಂತಹ ವಿಷಯವನ್ನು ನಾವು ತೆಗೆದುಹಾಕುತ್ತೇವೆ ಮತ್ತು ತೀವ್ರ ಅಥವಾ ಪುನರಾವರ್ತಿತ ಉಲ್ಲಂಘನೆಗಳಲ್ಲಿ ತೊಡಗಿಸಿಕೊಂಡಿರುವ ಖಾತೆಗಳನ್ನು ಅಮಾನತು ಮಾಡುತ್ತೇವೆ ಅಥವಾ ನಿಷೇಧಿಸುತ್ತೇವೆ. ಕೆಲವು ಸನ್ನಿವೇಶಗಳಲ್ಲಿ, ನಾವು ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡುವುದಕ್ಕಾಗಿ ಖಾತೆಗಳನ್ನು ಸಂಬಂಧಿತ ಕಾನೂನು ಅಧಿಕಾರಿಗಳಿಗೆ ವರದಿ ಮಾಡುತ್ತೇವೆ.

ನಮ್ಮ ಸಮುದಾಯ ಮಾರ್ಗಸೂಚಿಗಳು ಪ್ರತಿಯೊಬ್ಬರಿಗೂ ಮತ್ತು TikTok ನಲ್ಲಿ ಹಂಚಿಕೊಂಡ ಪ್ರತಿಯೊಂದಕ್ಕೂ ಅನ್ವಯಿಸುತ್ತವೆ. ವೇದಿಕೆಯಲ್ಲಿ ಏನನ್ನು ಅನುಮತಿಸಲಾಗುತ್ತದೆ ಮತ್ತು ಏನನ್ನು ಅನುಮತಿಸಲಾಗುವುದಿಲ್ಲ ಎಂಬ ಕುರಿತು ಸಾಮಾನ್ಯ ಮಾರ್ಗದರ್ಶಿಯನ್ನು ಅವು ಒದಗಿಸುತ್ತವೆ. ನಮ್ಮ ಮಾರ್ಗಸೂಚಿಗಳ ಪ್ರಕಾರ ಸಾಮಾನ್ಯವಾಗಿ ತೆಗೆದುಹಾಕಲಾಗುವ ಕೆಲವು ವಿಷಯವು ಸಾರ್ವಜನಿಕರಿಗೆ ಮೌಲ್ಯಯುತವಾಗಿರಬಹುದು ಎಂಬುದನ್ನು ಸಹ ನಾವು ಗುರುತಿಸುತ್ತೇವೆ. ಆದ್ದರಿಂದ, ಕೆಳಗಿನ ವಿಭಾಗಗಳಲ್ಲಿ ವಿವರಿಸಲಾಗಿರುವಂತೆ ಕೆಲವು ಸಂದರ್ಭಗಳ ಅಡಿಯಲ್ಲಿ ವಿನಾಯಿತಿಗಳನ್ನು ನಾವು ಅನುಮತಿಸಬಹುದು.

ಸಮುದಾಯದ ನಡವಳಿಕೆಯೊಂದಿಗೆ ವಿಕಸನಗೊಳ್ಳಲು, ತುರ್ತು ಅಪಾಯಗಳನ್ನು ಉಪಶಮನಗೊಳಿಸಲು ಮತ್ತು ಸೃಜನಶೀಲತೆ ಮತ್ತು ಆನಂದಕ್ಕಾಗಿ TikTok ಅನ್ನು ಸುರಕ್ಷಿತ ಸ್ಥಳವಾಗಿರಿಸಲು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ನಾವು ನವೀಕರಿಸುತ್ತೇವೆ.


ಅಪಾಯಕಾರಿವ್ಯಕ್ತಿಗಳು ಮತ್ತುಸಂಸ್ಥೆಗಳು

ಭಯೋತ್ಪಾದನೆ, ಅಪರಾಧ ಅಥವಾ ಹಾನಿಗೆ ಕಾರಣವಾಗಬಹುದಾದ ಇತರ ಪ್ರಕಾರಗಳ ನಡವಳಿಕೆಯನ್ನು ಪ್ರಚಾರ ಮಾಡಲು ನಮ್ಮ ವೇದಿಕೆಯನ್ನು ಬಳಸುವುದಕ್ಕಾಗಿ ಅಪಾಯಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ನಾವು ಅನುಮತಿಸುವುದಿಲ್ಲ. ಸಾರ್ವಜನಿಕ ಸುರಕ್ಷತೆಗೆ ವಿಶ್ವಾಸಾರ್ಹ ಬೆದರಿಕೆ ಇರುವಾಗ, ಖಾತೆಯನ್ನು ನಿಷೇಧಿಸುವ ಮೂಲಕ ಮತ್ತು ಸಂಬಂಧಿತ ಕಾನೂನು ಅಧಿಕಾರಗಳ ಜೊತೆಗೆ ಸಹಕಾರ ನೀಡುವ ಮೂಲಕ ಸಮಸ್ಯೆಯನ್ನು ನಾವು ನಿಭಾಯಿಸುತ್ತೇವೆ.

ಭಯೋತ್ಪಾದಕರು ಮತ್ತು ಭಯೋತ್ಪಾದನೆ ಸಂಸ್ಥೆಗಳು

ಭಯೋತ್ಪಾದಕರು ಮತ್ತು ಭಯೋತ್ಪಾದನೆ ಸಂಸ್ಥೆಗಳು ಯಾವುದೇ ರಾಜ್ಯಕ್ಕೆ ಸೇರಿರದ ವ್ಯಕ್ತಿ ಅಥವಾ ಸಂಸ್ಥೆಗಳಾಗಿದ್ದು, ಅವು ರಾಜಕೀಯ, ಧಾರ್ಮಿಕ, ಜನಾಂಗೀಯ ಅಥವಾ ಸೈದ್ಧಾಂತಿಕ ಉದ್ದೇಶಗಳ ಈಡೇರಿಕೆಗಾಗಿ ಜನಸಂಖ್ಯೆ, ಸರ್ಕಾರ ಅಥವಾ ಅಂತರಾಷ್ಟ್ರೀಯ ಸಂಸ್ಥೆಗೆ ಬೆದರಿಕೆ ಒಡ್ಡಲು ಅಥವಾ ಹೆದರಿಸಲು ಹೋರಾಟ-ರಹಿತ ವ್ಯಕ್ತಿಗಳಿಗೆ ಹಾನಿಯನ್ನು ಉಂಟು ಮಾಡುವುದಕ್ಕಾಗಿ ಪೂರ್ವನಿಯೋಜಿತ ಹಾನಿ ಅಥವಾ ಹಿಂಸೆಯ ಬೆದರಿಕೆಗಳನ್ನು ಬಳಸುತ್ತವೆ. 

ಇತರೆ ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳು

ಅಪರಾಧಗಳನ್ನು ಮಾಡುವ ಅಥವಾ ಇತರ ಪ್ರಕಾರದ ತೀವ್ರ ಹಾನಿಯನ್ನು ಉಂಟು ಮಾಡುವವರನ್ನು ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಎಂದು ನಾವು ವ್ಯಾಖ್ಯಾನಿಸುತ್ತೇವೆ. ಗುಂಪುಗಳು ಮತ್ತು ಅಪರಾಧಗಳ ಪ್ರಕಾರಗಳು ಇವುಗಳನ್ನು ಒಳಗೊಂಡಿರುತ್ತವೆ ಆದರೆ ಇವುಗಳಿಗೆ ಸೀಮಿತವಾಗಿರುವುದಿಲ್ಲ:

 • ದ್ವೇಷಯುತ ಗುಂಪುಗಳು
 • ಹಿಂಸಾತ್ಮಕ ತೀವ್ರಗಾಮಿ ಸಂಸ್ಥೆಗಳು
 • ನರಘಾತಕ
 • ಮಾನವ ಕಳ್ಳಸಾಗಣೆ
 • ಮಾನವ ಅಂಗಗಳ ಕಳ್ಳಸಾಗಣೆ
 • ಶಸ್ತ್ರಾಸ್ತ್ರಗಳ ಕಳ್ಳಸಾಗಣೆ
 • ಮಾದಕ ಪದಾರ್ಥಗಳ ಕಳ್ಳಸಾಗಣೆ
 • ಅಪಹರಣ
 • ಬೆದರಿಕೆಯ ಮೂಲಕ ವಸೂಲಿ
 • ಒತ್ತಾಯದ ಹಣ ಸುಲಿಗೆ
 • ಅನಧಿಕೃತ ಹಣದ ವ್ಯವಹಾರ
 • ವಂಚನೆ 
 • ಸೈಬರ್‌ ಅಪರಾಧ

ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಅಪಾಯಕಾರಿ ವ್ಯಕ್ತಿಗಳು ಮತ್ತು/ಅಥವಾ ಸಂಸ್ಥೆಗಳನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿರುವ ಹೆಸರುಗಳು, ಸಂಕೇತಗಳು, ಲೋಗೋಗಳು, ಫ್ಲ್ಯಾಗ್‌ಗಳು, ಸ್ಲೋಗನ್‌ಗಳು, ಯೂನಿಫಾರ್ಮ್‌ಗಳು, ಸನ್ನೆಗಳು, ಪೋರ್ಟ್ರೇಟ್‌ಗಳು ಅಥವಾ ಇತರ ವಸ್ತುಗಳು
 • ಅಪಾಯಕಾರಿ ವ್ಯಕ್ತಿಗಳು ಮತ್ತು/ಅಥವಾ ಸಂಸ್ಥೆಗಳನ್ನು ಶ್ಲಾಘಿಸುವ, ವೈಭವೀಕರಿಸುವ ಅಥವಾ ಬೆಂಬಲಿಸುವ ವಿಷಯ
 • ವಿನಾಯಿತಿಗಳು: ನೇರ ಪ್ರತಿಕ್ರಿಯೆ ಅಥವಾ ಅಪಾಯಕಾರಿ ವ್ಯಕ್ತಿಗಳು ಮತ್ತು/ಅಥವಾ ಸಂಸ್ಥೆಗಳು ಉಂಟು ಮಾಡುವ ಹಾನಿಯ ಕುರಿತಾದ ಜಾಗೃತಿಯನ್ನು ಮೂಡಿಸುವ ಗುರಿಹೊಂದಿರುವುದು ಎಂಬುದಾಗಿ ಸ್ಪಷ್ಟವಾಗಿ ಗುರುತಿಸಬಹುದಾದ ಶೈಕ್ಷಣಿಕ, ಐತಿಹಾಸಿಕ, ವಿಡಂಬನಾತ್ಮಕ, ಕಲಾತ್ಮಕ ಮತ್ತು ಇತರೆ ವಿಷಯ


ಕಾನೂನುಬಾಹಿರ ಚಟುವಟಿಕೆಗಳು ಮತ್ತು ನಿರ್ಬಂಧಿತ ಸರಕುಗಳು

ಕೆಲವು ನಿರ್ಬಂಧಿತ ಸರಕುಗಳ ಮಾರಾಟ, ಪ್ರಚಾರ ಮತ್ತು ಬಳಕೆ, ಜೊತೆಗೆ ಕ್ರಿಮಿನಲ್ ಚಟುವಟಿಕೆಗಳ ಚಿತ್ರಣ ಅಥವಾ ಪ್ರಚಾರವನ್ನು ನಾವು ನಿಷೇಧಿಸಿದ್ದೇವೆ. ಪ್ರಶ್ನಾರ್ಹವಾಗಿರುವ ಚಟುವಟಿಕೆಗಳು ಅಥವಾ ಸರಕುಗಳು ಪೋಸ್ಟಿಂಗ್‌ನ ನ್ಯಾಯವ್ಯಾಪ್ತಿಯಲ್ಲಿ ಕಾನೂನುಬದ್ಧವಾಗಿದ್ದರೂ, ಬಹುಪಾಲು ಪ್ರಾಂತ್ಯ ಅಥವಾ ಪ್ರಪಂಚದಲ್ಲಿ ಕಾನೂನುಬಾಹಿರವಾಗಿರುವ ಅಥವಾ ನಿರ್ಬಂಧಿತವಾಗಿರುವ ಚಟುವಟಿಕೆಗಳು ಅಥವಾ ಸರಕುಗಳಿಗೆ ಸಂಬಂಧಿಸಿದ್ದರೆ ಕೆಲವು ವಿಷಯವನ್ನು ತೆಗೆದುಹಾಕಬಹುದು. ಶೈಕ್ಷಣಿಕ, ವೈಜ್ಞಾನಿಕ, ಕಲಾತ್ಮಕ ಮತ್ತು ಸುದ್ದಿಗೆ ಅರ್ಹವಾಗಿರುವ ವಿಷಯದಂತಹ, ಸಾರ್ವಜನಿಕರಿಗೆ ಮೌಲ್ಯವನ್ನು ಒದಗಿಸುವ ವಿಷಯಕ್ಕಾಗಿ ನಾವು ವಿನಾಯಿತಿಗಳನ್ನು ಅನುಮತಿಸುತ್ತೇವೆ.

ಕ್ರಿಮಿನಲ್ ಚಟುವಟಿಕೆಗಳ ಪ್ರಚಾರ

ಕಳ್ಳತನ, ಆಕ್ರಮಣ, ಮಾನವರ ಶೋಷಣೆ ಮತ್ತು ಇತರ ಹಾನಿಕಾರಕ ನಡವಳಿಕೆಯನ್ನು ಒಳಗೊಂಡಂತೆ ಕಾನೂನಿನಿಂದ ಶಿಕ್ಷೆಗೆ ಈಡಾಗುವ ವ್ಯಾಪಕ ವ್ಯಾಪ್ತಿಯ ಕ್ರಿಯೆಗಳನ್ನು ಒಳಗೊಂಡಿರುವ ಕ್ರಿಮಿನಲ್ ಚಟುವಟಿಕೆಗಳು. ಅಂತಹ ನಡವಳಿಕೆಯನ್ನು ಸಾಮಾನ್ಯಗೊಳಿಸುವುದನ್ನು ಅಥವಾ ಅನುಕರಿಸುವುದನ್ನು ನಾವು ಬಯಸದೇ ಇರುವುದರಿಂದ, ಕ್ರಿಮಿನಲ್ ಚಟುವಟಿಕೆಗಳನ್ನು ಪ್ರಚಾರ ಮಾಡುವ ವಿಷಯವನ್ನು ನಾವು ತೆಗೆದುಹಾಕುತ್ತೇವೆ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಆಕ್ರಮಣ ಮಾಡುವ ಅಥವಾ ಅಪಹರಣ ಮಾಡುವಂತಹ, ದೈಹಿಕ ಹಾನಿಯ ಕ್ರಿಯೆಗಳನ್ನು ಪ್ರಚಾರ ಮಾಡುವ ವಿಷಯ
 • ತುರ್ತು ಸೇವೆಗಳಿಗೆ ಹುಸಿ ಕರೆಯನ್ನು ಮಾಡುವಂತಹ ತಮಾಷೆಗಳನ್ನು ಒಳಗೊಂಡಂತೆ, ಇತರರ ಸುರಕ್ಷತೆಗೆ ಅಪಾಯ ಒಡ್ಡುವ ವಿಷಯ
 • ಮಾನವನ ಶೋಷಣೆ ಅಥವಾ ವನ್ಯಜೀವಿಯ ಕಳ್ಳಸಾಗಾಣಿಕೆಯನ್ನು ಪ್ರಚಾರ ಮಾಡುವ ವಿಷಯ
 • ಕಾನೂನುಬಾಹಿರವಾಗಿ ಪಡೆದುಕೊಂಡ ಸರಕುಗಳ ಖರೀದಿ, ಮಾರಾಟ ಅಥವಾ ವ್ಯಾಪಾರದ ಕುರಿತು ಪ್ರಸ್ತಾಪಿಸುವ ವಿಷಯ
 • ಕ್ರಿಮಿನಲ್ ಚಟುವಟಿಕೆಗಳನ್ನು ಹೇಗೆ ನಡೆಸುವುದು ಎಂಬ ಕುರಿತು ಸೂಚನೆಗಳನ್ನು ಒದಗಿಸುವ ವಿಷಯ

ಶಸ್ತ್ರಾಸ್ತ್ರಗಳ ಮಾರಾಟ ಅಥವಾ ಬಳಕೆ

ನಮ್ಮ ಸಮುದಾಯವನ್ನು ರಕ್ಷಿಸುವುದಕ್ಕಾಗಿ, ನಾವು ಸಾಮಾನ್ಯವಾಗಿ ಬಂದೂಕುಗಳು, ಮದ್ದುಗುಂಡುಗಳು, ಬಂದೂಕಿನ ಉಪಕರಣಗಳು ಅಥವಾ ಸ್ಫೋಟಕ ಶಸ್ತ್ರಾಸ್ತ್ರಗಳ ಚಿತ್ರಣ, ವ್ಯವಹಾರ ಅಥವಾ ಪ್ರಚಾರವನ್ನು ಅನುಮತಿಸುವುದಿಲ್ಲ. ಆ ಶಸ್ತ್ರಾಸ್ತ್ರಗಳನ್ನು ಹೇಗೆ ತಯಾರಿಸುವುದು ಎಂಬ ಕುರಿತಾಗಿನ ಸೂಚನೆಗಳನ್ನು ಸಹ ನಾವು ನಿಷೇಧಿಸಿದ್ದೇವೆ. ಮುಂದಿನ ಸನ್ನಿವೇಶಗಳಲ್ಲಿ ಬಂದೂಕುಗಳು ಅಥವಾ ಇತರ ಪ್ರಕಾರದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ವಿಷಯಕ್ಕೆ ನಾವು ವಿನಾಯಿತಿಯನ್ನು ನೀಡಬಹುದು: ಕಾಲ್ಪನಿಕ ಪರಿಸ್ಥಿತಿಯಲ್ಲಿ, ಮ್ಯೂಸಿಯಂನ ಸಂಗ್ರಹದ ಭಾಗವಾಗಿ, ಪೋಲೀಸ್ ಅಧಿಕಾರಿಯು ಒಯ್ಯುವ ಸಂದರ್ಭದಲ್ಲಿ, ಮಿಲಿಟರಿ ಪರೇಡ್‌ನಲ್ಲಿ ಅಥವಾ ಚಿತ್ರೀಕರಣದ ವ್ಯಾಪ್ತಿಯಂತಹ ಸುರಕ್ಷಿತ ಮತ್ತು ನಿಯಂತ್ರಿತ ಪರಿಸರದಲ್ಲಿ ಬಳಸುವ ಸಮಯದಲ್ಲಿ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಬಂದೂಕುಗಳು, ಬಂದೂಕಿನ ಉಪಕರಣಗಳು, ಮದ್ದುಗುಂಡುಗಳು ಅಥವಾ ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ವಿಷಯ
 • ಬಂದೂಕುಗಳು, ಉಪಕರಣಗಳು, ಮದ್ದುಗುಂಡುಗಳು, ಸ್ಫೋಟಕ ಶಸ್ತ್ರಾಸ್ತ್ರಗಳನ್ನು ನೀಡುವ, ಮಾರಾಟ ಮಾಡುವ, ವ್ಯಾಪಾರ ಮಾಡುವ ಅಥವಾ ಕೋರುವ ಅಥವಾ ಅವುಗಳನ್ನು ಹೇಗೆ ತಯಾರಿಸುವುದು ಎಂಬುದರ ಸೂಚನೆಗಳನ್ನು ನೀಡುವ ವಿಷಯ 

ಔಷಧಗಳು ಮತ್ತು ನಿಯಂತ್ರಿತ ವಸ್ತುಗಳು

ನಮ್ಮ ಸಮುದಾಯವನ್ನು ರಕ್ಷಿಸುವುದಕ್ಕಾಗಿ, ನಾವು ಮಾದಕ ಪದಾರ್ಥಗಳು ಅಥವಾ ಇತರೆ ನಿಯಂತ್ರಿತ ವಸ್ತುಗಳನ್ನು ಪ್ರತಿಬಿಂಬಿಸುವ ವಿಷಯವನ್ನು ಅನುಮತಿಸುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಮಾದಕ ಪದಾರ್ಥಗಳು, ಮಾದಕ ಪದಾರ್ಥಗಳ ಸೇವನೆ ಮಾಡುವುದು ಅಥವಾ ಮಾದಕ ಪದಾರ್ಥಗಳು ಅಥವಾ ಇತರೆ ನಿಯಂತ್ರಿತ ವಸ್ತುಗಳ ತಯಾರಿ, ಬಳಕೆ ಅಥವಾ ವ್ಯಾಪಾರ ಮಾಡುವಂತೆ ಇತರರನ್ನು ಉತ್ತೇಜಿಸುವ ವಿಷಯ
 • ಮಾದಕ ಪದಾರ್ಥಗಳು ಅಥವಾ ಇತರೆ ನಿಯಂತ್ರಿತ ವಸ್ತುಗಳ ಮಾರಾಟ ಮಾಡುವ, ನೀಡುವ, ವ್ಯಾಪಾರ ಮಾಡುವ ಅಥವಾ ಕೋರುವ ವಿಷಯ
 • ಕಾನೂನುಬಾಹಿರ ಅಥವಾ ನಿಯಂತ್ರಿತ ವಸ್ತುಗಳನ್ನು ಹೇಗೆ ಖರೀದಿಸುವುದು ಎಂಬ ಕುರಿತು ಮಾಹಿತಿಯನ್ನು ಒದಗಿಸುವ ವಿಷಯ

ವಂಚನೆಗಳು ಮತ್ತು ಹಗರಣಗಳು

ಇತರರಿಗೆ ಹಾನಿ ಉಂಟುಮಾಡುವುದಕ್ಕಾಗಿ ನಮ್ಮ ವೇದಿಕೆಯನ್ನು ಹಾಳುಗೆಡವುವುದನ್ನು ನಾವು ಅನುಮತಿಸುವುದಿಲ್ಲ, ಇವುಗಳಲ್ಲಿ ವ್ಯಕ್ತಿಗೆ ವಂಚನೆ ಮಾಡುವ ಅಥವಾ ಸ್ವತ್ತುಗಳನ್ನು ಕಳವು ಮಾಡುವ ಯೋಜನೆಗಳು ಒಳಗೊಂಡಿರುತ್ತವೆ. ಕಾನೂನುಬಾಹಿರ ಹಣಕಾಸು ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಾಗಿ ಉದ್ದೇಶಪೂರ್ವಕವಾಗಿ ಜನರನ್ನು ಮೋಸಗೊಳಿಸುವ ವಿಷಯವನ್ನು ನಾವು ತೆಗೆದುಹಾಕುತ್ತೇವೆ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಫಿಶಿಂಗ್ ಅನ್ನು ಪ್ರಚಾರ ಮಾಡುವ ವಿಷಯ
 • ಪೋಂಜಿ ಅಥವಾ ಪಿರಮಿಡ್ ಯೋಜನೆಗಳನ್ನು ಪ್ರಚಾರ ಮಾಡುವ ವಿಷಯ
 • ಸ್ಥಿರ ಬೆಟ್ಟಿಂಗ್ ಪ್ರಚಾರ ಮಾಡುವ, ಶೀಘ್ರವೇ ಶ್ರೀಮಂತರನ್ನಾಗಿ ಮಾಡುವ ಯೋಜನೆಗಳು ಅಥವಾ ಇತರ ಯಾವುದೇ ಪ್ರಕಾರಗಳ ಯೋಜನೆಗಳನ್ನು ಪ್ರಚಾರ ಮಾಡುವ ವಿಷಯ


ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯ

ತೀವ್ರತರವಾಗಿ ಭೀಭತ್ಸವಾಗಿರುವ ಅಥವಾ ಆಘಾತಕಾರಿಯಾಗಿರುವ, ಅದರಲ್ಲೂ ಪ್ರಮುಖವಾಗಿ ಅಸಹ್ಯವಾದ ಹಿಂಸೆ ಅಥವಾ ಅನುಭವಿಸುವಿಕೆಯನ್ನು ಪ್ರಚಾರ ಮಾಡುವ ಅಥವಾ ವೈಭವೀಕರಿಸುವ ವಿಷಯವನ್ನು ನಾವು ಅನುಮತಿಸುವುದಿಲ್ಲ. ನಾವು ಕೆಲವು ಸಂದರ್ಭಗಳಿಗೆ ವಿನಾಯಿತಿಗಳನ್ನು ಅನುಮತಿಸುತ್ತೇವೆ, ಉದಾಹರಣೆಗೆ, ಸುದ್ದಿಗೆ ಅರ್ಹವಾಗಿರುವ ವಿಷಯ ಅಥವಾ ಸಮಸ್ಯೆಗಳ ಕುರಿತು ಜಾಗೃತಿಯನ್ನು ಮೂಡಿಸುವುದಕ್ಕಾಗಿ ಇರುವ ವಿಷಯ. ಹಿಂಸೆಯ ನೈಜವಾದ ಅಪಾಯ ಅಥವಾ ಬೆದರಿಕೆಯನ್ನು ನಾವು ಗುರುತಿಸಿದಾಗ, ನಾವು ಖಾತೆಯನ್ನು ನಿಷೇಧಿಸುತ್ತೇವೆ ಮತ್ತು ಅಗತ್ಯವಾದ ರೀತಿಯಲ್ಲಿ ಮತ್ತು ಸೂಕ್ತವಾದಾಗ ಸಂಬಂಧಿತ ಕಾನೂನು ಅಧಿಕಾರಗಳ ಜೊತೆಗೆ ಕಾರ್ಯನಿರ್ವಹಿಸುತ್ತೇವೆ.

ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯ: ಮಾನವ

ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಇವುಗಳನ್ನು ಒಳಗೊಂಡಂತೆ ಆದರೆ ಇವುಗಳಿಗೆ ಸೀಮಿತವಾಗಿರದಂತೆ, ಅನಪೇಕ್ಷಿತವಾಗಿ ಆಘಾತಕಾರಿಯಾಗಿರುವ, ದುಃಖಕರವಾಗಿರುವ ಅಥವಾ ಅತಿಯಾಗಿ ಗ್ರಾಫಿಕ್ ಆಗಿರುವ ವಿಷಯ:
  • ನೈಜ ಜನರನ್ನು ಒಳಗೊಂಡಿರುವ ಹಿಂಸಾತ್ಮಕ ಅಥವಾ ಅಪಘಾತದ ಸಾವುಗಳ ಚಿತ್ರಣಗಳು
  • ಚೂರಾಗಿರುವ, ವಿರೂಪಗೊಳಿಸಿರುವ, ಸುಟ್ಟಿರುವ ಅಥವಾ ಉರಿದಿರುವ ಮಾನವ ಅವಶೇಷಗಳ ಚಿತ್ರಣಗಳು
  • ತೆರೆದ ಗಾಯ ಅಥವಾ ಹಾನಿಯು ಮುಖ್ಯ ಕೇಂದ್ರಬಿಂದುವಾಗಿರುವಲ್ಲಿ ಹೆಪ್ಪುಗಟ್ಟಿದ ರಕ್ತದ ಚಿತ್ರಣ
  • ತೀವ್ರ ದೈಹಿಕ ಹಿಂಸೆಯ ಚಿತ್ರಣಗಳು. 
  • ವಿನಾಯಿತಿಗಳು: ಪ್ರಸ್ತುತಪಡಿಸಿದ ಅಥವಾ ವೃತ್ತಿಪರ ಹೋರಾಟ, ಸಾಂಪ್ರದಾಯಿಕ ಸಮರ ಕಲೆಗಳು ಅಥವಾ ಕಾಲ್ಪನಿಕ ವ್ಯವಸ್ಥೆಯಲ್ಲಿ ಹೋರಾಟ ಮಾಡುವಿಕೆ

ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯ: ಪ್ರಾಣಿಗಳು

ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಇವುಗಳನ್ನು ಒಳಗೊಂಡಂತೆ ಆದರೆ ಇವುಗಳಿಗೆ ಸೀಮಿತವಾಗಿರದಂತೆ, ಅನಪೇಕ್ಷಿತವಾಗಿ ಆಘಾತಕಾರಿಯಾಗಿರುವ, ದುಃಖಕರವಾಗಿರುವ ಅಥವಾ ಅತಿಯಾಗಿ ಗ್ರಾಫಿಕ್ ಆಗಿರುವ ವಿಷಯ:
  • ನೈಜ ಪ್ರಾಣಿಗಳ ವಧೆಯ ಚಿತ್ರಣಗಳು
  • ಚೂರಾಗಿರುವ, ವಿರೂಪಗೊಳಿಸಿರುವ, ಸುಟ್ಟಿರುವ ಅಥವಾ ಉರಿದಿರುವ ಪ್ರಾಣಿಯ ಅವಶೇಷಗಳ ಚಿತ್ರಣಗಳು
  • ಪ್ರಾಣಿಯ ಕ್ರೌರ್ಯದ ಚಿತ್ರಣಗಳು


ಆತ್ಮಹತ್ಯೆ, ಸ್ವಯಂ-ಹಾನಿ ಮತ್ತು ಅಪಾಯಕಾರಿ ಕ್ರಿಯೆಗಳು

ಹಾನಿಗೆ ಕಾರಣವಾಗುವ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ನಾವು ಉತ್ತೇಜಿಸುವುದಿಲ್ಲ. ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಇತರರನ್ನು ಉತ್ತೇಜಿಸಲು ಬಳಕೆದಾರರಿಗೆ ನಾವು ಅನುಮತಿಸುವುದಿಲ್ಲ. ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯನ್ನು ಪ್ರಚಾರ ಮಾಡುವ ವಿಷಯವನ್ನು ನಾವು ಅನುಮತಿಸುವುದಿಲ್ಲ, ಆದರೆ ಈ ಸಮಸ್ಯೆಗಳ ಕುರಿತು ಜಾಗೃತಿಯನ್ನು ಮೂಡಿಸುವುದಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಮ್ಮ ಬಳಕೆದಾರರಿಗೆ ನಾವು ಅನುಮತಿಸುತ್ತೇವೆ.

ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯ ಆಲೋಚನೆಗಳ ಜೊತೆಗೆ ಕಷ್ಟಪಡುತ್ತಿರುವ ಅಥವಾ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಬಳಕೆದಾರರು ತಕ್ಷಣವೇ ಕಾನೂನು ಅಧಿಕಾರಿಗಳನ್ನು ಅಥವಾ ಆತ್ಮಹತ್ಯೆ ತಡೆಗಟ್ಟುವಿಕೆ ಹಾಟ್‌ಲೈನ್ಸಂಪರ್ಕಿಸುವಂತೆ ನಾವು ಉತ್ತೇಜಿಸುತ್ತೇವೆ. 

ಆತ್ಮಹತ್ಯೆ

ಆತ್ಮಹತ್ಯೆ, ಆತ್ಮಹತ್ಯೆಯ ಪ್ರವೃತ್ತಿಗಳನ್ನು ಪ್ರದರ್ಶಿಸುವ ವಿಷಯವನ್ನು ಅಥವಾ ಅಂತಹುದೇ ಕ್ರಿಯೆಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಬಹುದಾದ ವಿಷಯವನ್ನು ನಾವು ತೆಗೆದುಹಾಕುತ್ತೇವೆ. ಇದರಲ್ಲಿ ಆತ್ಮಹತ್ಯೆಯ ಪ್ರಯತ್ನ ಅಥವಾ ಸ್ವಯಂ  ಸಾವು ತಂದುಕೊಳ್ಳುವುದಕ್ಕೆ ಕಾರಣವಾಗುವ ಸಾಧ್ಯತೆ ಇರುವ ಕ್ರಿಯೆಗಳನ್ನು ಮಾಡಲು ಉದ್ದೇಶಿತವಾಗಿರುವ ಅಥವಾ ಹಾಗೆ ಮಾಡುವ ವ್ಯಕ್ತಿಯನ್ನು ಒಳಗೊಂಡಿರುವ ವಿಷಯ ಒಳಗೊಂಡಿರುತ್ತದೆ. ಆತ್ಮಹತ್ಯೆಯನ್ನು ಶ್ಲಾಘಿಸುವ, ವೈಭವೀಕರಿಸುವ ಅಥವಾ ಪ್ರಚಾರ ಮಾಡುವ ಅಥವಾ ಆತ್ಮಹತ್ಯೆಯನ್ನು ಹೇಗೆ ಮಾಡಿಕೊಳ್ಳಬೇಕೆಂದು ಇತರರಿಗೆ ಸೂಚಿಸುವ ಯಾವುದೇ ಪ್ರಕಾರದ ವಿಷಯವನ್ನು ನಾವು ನಿಷೇಧಿಸುತ್ತೇವೆ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಆತ್ಮಹತ್ಯೆಯನ್ನು ಹೇಗೆ ಮಾಡಿಕೊಳ್ಳಬೇಕೆಂಬ ಕುರಿತು ಸೂಚನೆಗಳನ್ನು ನೀಡುವ ವಿಷಯ
 • ಆತ್ಮಹತ್ಯೆಯನ್ನು ಶ್ಲಾಘಿಸುವ, ಪ್ರಚಾರ ಮಾಡುವ ಅಥವಾ ವೈಭವೀಕರಿಸುವ ವಿಷಯ
 • ಆತ್ಮಹತ್ಯೆಯ ಸವಾಲುಗಳು
 • ವಿನಾಯಿತಿಗಳು: ಆತ್ಮಹತ್ಯೆಯ ಆಲೋಚನೆಗಳಿಗೆ ಒಳಗಾಗಿರುವವರಿಗೆ ಬೆಂಬಲವನ್ನು, ಸಂಪನ್ಮೂಲಗಳನ್ನು ನೀಡುವ ಅಥವಾ ನಿಭಾಯಿಸುವ ವ್ಯವಸ್ಥೆಗಳನ್ನು ಒದಗಿಸುವ ವಿಷಯ

ಸ್ವಯಂ-ಹಾನಿ

ಸ್ವಯಂ-ಹಾನಿ ನಡವಳಿಕೆಯನ್ನು ಸಾಮಾನ್ಯಗೊಳಿಸುವ, ಉತ್ತೇಜಿಸುವ ಅಥವಾ ಪ್ರಚೋದನೆಗೊಳಿಸುವುದನ್ನು ತಪ್ಪಿಸುವುದಕ್ಕಾಗಿ, ಅಂತಹ ನಡವಳಿಕೆಯನ್ನು ಪ್ರತಿಬಿಂಬಿಸುವ ಚಿತ್ರವನ್ನು, ಒಂದು ವೇಳೆ ಅದನ್ನು ಪೋಸ್ಟ್ ಮಾಡುವ ಬಳಕೆದಾರರ ಉದ್ದೇಶವು ಏನೇ ಆಗಿದ್ದರೂ ಅದನ್ನು ಅನುಮತಿಸುವುದಿಲ್ಲ. ದೈಹಿಕ ಸ್ವಯಂ-ಗಾಯವನ್ನು ಉಂಟುಮಾಡಿಕೊಳ್ಳುವುದಕ್ಕೆ ಕಾರಣವಾಗುವ ಸಾಧ್ಯತೆ ಇರುವ ಕ್ರಿಯೆಗಳನ್ನು ಉತ್ತೇಜಿಸುವ ಅಥವಾ ಉತ್ತೇಜಿಸಬಹುದಾದ ವಿಷಯವನ್ನು ನಾವು ತೆಗೆದುಹಾಕುತ್ತೇವೆ. ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುವ ಆಹಾರ ಸೇವನೆ ಹವ್ಯಾಸಗಳನ್ನು ಪ್ರಚಾರ ಮಾಡುವ ವಿಷಯವನ್ನು ಸಹ ವೇದಿಕೆಯಲ್ಲಿ ಅನುಮತಿಸಲಾಗುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಸ್ವಯಂ-ಗಾಯಮಾಡಿಕೊಂಡಿರುವುದನ್ನು ತೋರಿಸುವ ವಿಷಯ
 • ಸ್ವಯಂ-ಹಾನಿಯನ್ನು ಹೇಗೆ ಮಾಡಿಕೊಳ್ಳುವುದು ಎಂಬ ಕುರಿತು ಸೂಚನೆಗಳನ್ನು ಒದಗಿಸುವ ವಿಷಯ
 • ತೂಕವನ್ನು ಕಳೆದುಕೊಳ್ಳುವುದಕ್ಕಾಗಿ ಆಹಾರ ಸೇವನೆಯ ಅಸ್ವಸ್ಥತೆಗಳು ಅಥವಾ ಇತರೆ ಅಪಾಯಕಾರಿ ನಡವಳಿಕೆಯನ್ನು ಬೆಂಬಲಿಸುವ ವಿಷಯ
 • ವಿನಾಯಿತಿಗಳು: ಆಹಾರ ಸೇವನೆಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಅಥವಾ ಸ್ವಯಂ-ಹಾನಿಯಲ್ಲಿ ಭಾಗವಹಿಸುತ್ತಿರುವವರಿಗಾಗಿ ಬೆಂಬಲವನ್ನು, ಸಂಪನ್ಮೂಲವನ್ನು ಅಥವಾ ನಿಭಾಯಿಸುವ ವ್ಯವಸ್ಥೆಗಳನ್ನು ಒದಗಿಸುವ ವಿಷಯ

ಅಪಾಯಕಾರಿ ಕ್ರಿಯೆಗಳು

ವೃತ್ತಿಪರವಲ್ಲದ ಸಂದರ್ಭದಲ್ಲಿ ಅಥವಾ ಅಗತ್ಯ ಕೌಶಲಗಳಿಲ್ಲದೇ ಮಾಡಿದ ಅಪಾಯಕಾರಿ ಚಟುವಟಿಕೆಗಳು ಅಥವಾ ಇತರ ಅಪಾಯಕಾರಿ ನಡವಳಿಕೆಯು ಬಳಕೆದಾರರು ಅಥವಾ ಸಾರ್ವಜನಿಕರಿಗೆ ಗಂಭೀರ ಗಾಯ ಅಥವಾ ಸಾವಿಗೆ ಕಾರಣವಾಗಬಹುದು. ಹವ್ಯಾಸಿ ಸ್ಟಂಟ್‌ಗಳು ಅಥವಾ ಅಪಾಯಕಾರಿ ಸವಾಲುಗಳನ್ನು ಒಳಗೊಂಡಂತೆ, ಅಂತಹ ನಡವಳಿಕೆಯನ್ನು ಉತ್ತೇಜಿಸುವ, ಪ್ರಚಾರ ಮಾಡುವ ಅಥವಾ ವೈಭವೀಕರಿಸುವ ವಿಷಯವನ್ನು ಅನುಮತಿಸುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಅಪಾಯಕಾರಿ ಪರಿಕರಗಳ ಸೂಕ್ತವಲ್ಲದ ಬಳಕೆಯನ್ನು ತೋರಿಸುವ ವಿಷಯ
 • ಬಳಕೆಗಾಗಿ ಉದ್ದೇಶಿತವಾಗಿಲ್ಲದ ದ್ರವಗಳ ಕುಡಿಯುವಿಕೆ ಅಥವಾ ವಸ್ತುಗಳ ಸೇವನೆಯ ಚಿತ್ರಣವನ್ನು ನೀಡುವ ವಿಷಯ 
 • ಗಾಯಕ್ಕೆ ಕಾರಣವಾಗಬಹುದಾದ ಅಪಾಯಕಾರಿ ಸವಾಲುಗಳು
 • ಕಾನೂನುಬದ್ಧ ವಯಸ್ಸಿಗಿಂತ ಕಡಿಮೆ ಇರುವ ಅಪ್ರಾಪ್ತರು ಮೋಟಾರು ವಾಹನಗಳ ಚಾಲನೆ ಮಾಡುವ ಚಿತ್ರಣವನ್ನು ನೀಡುವ ವಿಷಯ

ದ್ವೇಷಯುತ ಮಾತು 

ಸಂರಕ್ಷಿತ ಗುಣಲಕ್ಷಣಗಳ ಆಧಾರದಲ್ಲಿ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ವಿರುದ್ಧ ಆಕ್ರಮಣ ಮಾಡುವ ಅಥವಾ ಹಿಂಸೆಯನ್ನು ಪ್ರಚೋದಿಸುವ ವಿಷಯವನ್ನು ನಾವು ಸಹಿಸುವುದಿಲ್ಲ. ದ್ವೇಷಯುತ ಮಾತನ್ನು ಒಳಗೊಂಡಿರುವ ವಿಷಯವನ್ನು ನಾವು ಅನುಮತಿಸುವುದಿಲ್ಲ ಮತ್ತು ನಮ್ಮ ವೇದಿಕೆಯಿಂದ ಅದನ್ನು ನಾವು ತೆಗೆದುಹಾಕುತ್ತೇವೆ. ಅನೇಕ ದ್ವೇಷಯುತ ಮಾತಿನ ಉಲ್ಲಂಘನೆಗಳನ್ನು ಹೊಂದಿರುವ ಖಾತೆಗಳನ್ನು ನಾವು ಅಮಾನತು ಮಾಡುತ್ತೇವೆ ಅಥವಾ ನಿಷೇಧಿಸುತ್ತೇವೆ. 


ಸಂರಕ್ಷಿತ ಗುಂಪಿನ ಮೇಲೆ ಆಕ್ರಮಣಗಳು

ನಾವು ದ್ವೇಷಯುತ ಮಾತನ್ನು ಸಂರಕ್ಷಿತ ಗುಣಲಕ್ಷಣಗಳ ಆಧಾರದಲ್ಲಿ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪನ್ನು ಅಮಾನವೀಯಗೊಳಿಸುವ ಅಥವಾ ಅವುಗಳ ವಿರುದ್ಧ ಆಕ್ರಮಣ ಮಾಡುವ, ಬೆದರಿಸುವ, ಅವುಗಳ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಅಥವಾ ಹಾಗೆ ಮಾಡಲು ಉದ್ದೇಶಿತವಾಗಿರುವ ವಿಷಯ ಎಂಬುದಾಗಿ ವ್ಯಾಖ್ಯಾನಿಸುತ್ತೇವೆ. ಈ ಕೆಳಗಿನ ಯಾವುದೇ ಸಂರಕ್ಷಿತ ಗುಣಲಕ್ಷಣಗಳ ಆಧಾರದಲ್ಲಿ ವ್ಯಕ್ತಿ ಅಥವಾ ಗುಂಪಿಗೆ ಮೌಖಿಕವಾಗಿ ಅಥವಾ ದೈಹಿಕವಾಗಿ ಹಿಂಸೆಯ ಬೆದರಿಕೆ ಒಡ್ಡುವ ಅಥವಾ ಹಾನಿಯ ಚಿತ್ರಣ ನೀಡುವ ವಿಷಯವನ್ನು ನಾವು ಅನುಮತಿಸುವುದಿಲ್ಲ:

 • ಕುಲ 
 • ಜನಾಂಗೀಯತೆ
 • ರಾಷ್ಟ್ರೀಯ ಮೂಲ 
 • ಧರ್ಮ
 • ಜಾತಿ 
 • ಲೈಂಗಿಕ ಪ್ರವೃತ್ತಿ
 • ಲೈಂಗಿಕತೆ
 • ಲಿಂಗ
 • ಲಿಂಗದ ಗುರುತು
 • ಗಂಭೀರ ರೋಗ ಅಥವಾ ವೈಕಲ್ಯತೆ
 • ವಲಸೆ ಸ್ಥಿತಿ

ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಇವುಗಳನ್ನು ಒಳಗೊಂಡು ಆದರೆ ಇವುಗಳಿಗೆ ಸೀಮಿತವಾಗಿಲ್ಲದಂತೆ, ಮೇಲೆ ಪಟ್ಟಿ ಮಾಡಲಾದ ಗುಣಲಕ್ಷಣಗಳ ಆಧಾರದಲ್ಲಿ ವ್ಯಕ್ತಿಗಳು ಅಥವಾ ಗುಂಪನ್ನು ಅಮಾನವೀಯಗೊಳಿಸುವ ಅಥವಾ ಅವುಗಳ ವಿರುದ್ಧ ಹಿಂಸೆ ಅಥವಾ ದ್ವೇಷವನ್ನು ಪ್ರಚೋದಿಸುವ ವಿಷಯ: 
  • ಅವರು ದೈಹಿಕವಾಗಿ ಅಥವಾ ನೈತಿಕವಾಗಿ ಕೆಳಮಟ್ಟದವರು ಎಂಬುದಾಗಿ ಹಕ್ಕು ಸಾಧಿಸುವುದು
  • ಅವುಗಳ ವಿರುದ್ಧ ಹಿಂಸೆಗಾಗಿ ತಿಳಿಸುವುದು ಅಥವಾ ಹಿಂಸೆಯನ್ನು ಸಮರ್ಥಿಸುವುದು
  • ಅವರು ಅಪರಾಧಿಗಳು ಎಂಬುದಾಗಿ ಹಕ್ಕು ಸಾಧಿಸುವುದು 
  • ಅವರನ್ನು ಪ್ರಾಣಿಗಳು, ನಿರ್ಜೀವ ವಸ್ತುಗಳು ಅಥವಾ ಇತರ ಮಾನವ-ರಹಿತ ಸಂಗತಿಗಳು ಎಂಬುದಾಗಿ ಋಣಾತ್ಮಕವಾಗಿ ಉಲ್ಲೇಖಿಸುವುದು
  • ಅವರ ವಿರುದ್ಧ ಹೊರತುಪಡಿಸುವಿಕೆ, ವಿಭಾಗಿಸುವಿಕೆ ಅಥವಾ ತಾರತಮ್ಯವನ್ನು ಪ್ರಚಾರ ಮಾಡುವುದು ಅಥವಾ ಸಮರ್ಥಿಸುವುದು

ಕಳಂಕಗಳು

ನಿಂದನೆಗಳನ್ನು ಅವಹೇಳನಕಾರಿ ಪದಗಳು ಎಂಬುದಾಗಿ ವ್ಯಾಖ್ಯಾನಿಸಲಾಗಿದ್ದು, ಅವುಗಳು ಜನಾಂಗೀಯತೆ, ಕುಲ ಅಥವಾ ಮೇಲೆ ಪಟ್ಟಿ ಮಾಡಲಾದ ಇತರ ಯಾವುದೇ ಸಂರಕ್ಷಿತ ಗುಣಲಕ್ಷಣಗಳಿಗೆ ಅಗೌರವ ತರಲು ಉದ್ದೇಶಿತವಾಗಿವೆ. ಅವುಗಳನ್ನು ನಮ್ಮ ವೇದಿಕೆಯಲ್ಲಿ ಸಹಿಸಲಾಗುವುದಿಲ್ಲ ಏಕೆಂದರೆ ಅತಿಯಾಗಿ ಮನ ನೋಯಿಸುವ ಪದಗಳ ಹರಡುವಿಕೆಗೆ ಕೊಡುಗೆಯನ್ನು ನೀಡಲು ನಾವು ಬಯಸುವುದಿಲ್ಲ. ಆದರೆ, ನಿಂದನೆಗಳನ್ನು ಸ್ವಯಂ-ಉಲ್ಲೇಖವಾಗಿ ಬಳಸಬಹುದು ಅಥವಾ ಅವುಗಳನ್ನು ಮೂಲ ಉದ್ದೇಶದಿಂದ ವಿಭಿನ್ನ ಉದ್ದೇಶಕ್ಕೆ ಬಳಸಬಹುದು ಮತ್ತು ನಿಂದನೆಗಳನ್ನು ಹಾಡಿನಲ್ಲಿ ಅಥವಾ ಸ್ವಯಂ-ಉಲ್ಲೇಖದ ವಿಡಂಬನಾತ್ಮಕ ಸಂದರ್ಭದ ಇತರ ಸನ್ನಿವೇಶಗಳಲ್ಲಿ ಮತ್ತು/ಅಥವಾ ಬೇರೆ ಉದ್ದೇಶಕ್ಕೆ ಬಳಸಿದಾಗ ನಾವು ವಿನಾಯಿತಿಯನ್ನು ನೀಡಬಹುದು. 
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಸಮ್ಮತವಲ್ಲದ ನಿಂದನೆಗಳನ್ನು ಉಂಟುಮಾಡುವ ವಿಷಯ

ದ್ವೇಷಯುತ ಸಿದ್ಧಾಂತ

ನಮ್ಮ ವೇದಿಕೆಯು ಒದಗಿಸುವ ಅಂತರ್ಗತ ಮತ್ತು ಬೆಂಬಲಿತ ಸಮುದಾಯದೊಂದಿಗೆ ದ್ವೇಷಯುತ ಸಿದ್ಧಾಂತವು ಹೊಂದಾಣಿಕೆಯಾಗುವುದಿಲ್ಲ. ದ್ವೇಷಯುತ ಸಿದ್ಧಾಂತಗಳನ್ನು ಪ್ರಚಾರ ಮಾಡುವ ವಿಷಯವನ್ನು ನಾವು ತೆಗೆದುಹಾಕುತ್ತೇವೆ. 
ಇವುಗಳನ್ನು ಪೋಸ್ಟ್ ಮಾಡಬೇಡಿ

 • ದ್ವೇಷಯುತ ಸಿದ್ಧಾಂತಗಳ ಕುರಿತು ಧನಾತ್ಮಕವಾಗಿ ಮಾತನಾಡುವ ಮೂಲಕ ಅಥವಾ ಈ ಸಿದ್ಧಾಂತಗಳಿಗೆ ಸಂಬಂಧಿಸಿದ ಲೋಗೋಗಳು, ಸಂಕೇತಗಳು, ಫ್ಲ್ಯಾಗ್‌ಗಳು, ಸ್ಲೋಗನ್‌ಗಳು, ಯೂನಿಫಾರ್ಮ್‌ಗಳು, ಸನ್ನೆಗಳು, ಪೋರ್ಟ್ರೇಟ್‌ಗಳು, ನಿದರ್ಶನಗಳು ಅಥವಾ ವ್ಯಕ್ತಿಗಳ ಹೆಸರುಗಳನ್ನು ಪ್ರದರ್ಶಿಸುವ ಮೂಲಕ ಯಾವುದೇ ದ್ವೇಷಯುತ ಸಿದ್ಧಾಂತಗಳನ್ನು ಪ್ರಚಾರ ಮಾಡುವ ವಿಷಯ 
 • ಚೆನ್ನಾಗಿ-ದಾಖಲಿಸಿರುವ ಮತ್ತು ಹಿಂಸಾತ್ಮಕ ಘಟನೆಗಳು ನಡೆದಿವೆ ಎಂಬುದನ್ನು ನಿರಾಕರಿಸುವ ವಿಷಯ
 • ದ್ವೇಷಯುತ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಸಂಗೀತ ಅಥವಾ ಸಾಹಿತ್ಯ 


ಕಿರುಕುಳ ಮತ್ತು ಬೆದರಿಸುವಿಕೆ

ಅವಮಾನದ, ಅಗೌರವದ, ಬೆದರಿಕೆಯ ಅಥವಾ ಕಿರುಕುಳದ ಭಯವಿಲ್ಲದೆಯೇ ಬಳಕೆದಾರರು ಸ್ವತಃ ಅಭಿಪ್ರಾಯ ವ್ಯಕ್ತಿಪಡಿಸಲು ಸುರಕ್ಷಿತವಾದ ಭಾವನೆ ಹೊಂದಿರಬೇಕು. ವ್ಯಕ್ತಿಗಳ ಮೇಲೆ ನಿಂದನೀಯ ವಿಷಯವು ಹೊಂದಿರಬಹುದಾದ ಮಾನಸಿಕ ಯಾತನೆಯನ್ನು ನಾವು ಆಳವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಮ್ಮ ವೇದಿಕೆಯಲ್ಲಿ ನಾವು ನಿಂದನೀಯ ವಿಷಯವನ್ನಾಗಲೀ ಅಥವಾ ನಡವಳಿಕೆಯನ್ನಾಗಲೀ ಸಹಿಸುವುದಿಲ್ಲ. 

ನಿಂದನೀಯ ನಡವಳಿಕೆ

ಹಿಂಸಾತ್ಮಕ ಬೆದರಿಕೆಗಳು, ಲೈಂಗಿಕ ಕಿರುಕುಳ, ನೋಟ, ಬುದ್ಧಿಮತ್ತೆ, ವ್ಯಕ್ತಿತ್ವದ ಲಕ್ಷಣಗಳು ಮತ್ತು ನೈರ್ಮಲ್ಯದ ಕುರಿತಾಗಿನ ಅವಮಾನಕರ ಹೇಳಿಕೆಗಳನ್ನು ಒಳಗೊಂಡಂತೆ ಆದರೆ ಇವುಗಳಿಗೆ ಸೀಮಿತವಾಗಿರದಂತೆ ನಿಂದನೆಯ ಎಲ್ಲಾ ಅಭಿವ್ಯಕ್ತಿಗಳನ್ನು ನಾವು ತೆಗೆದುಹಾಕುತ್ತೇವೆ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಹಿಂಸೆಯ ಮೂಲಕ ವ್ಯಕ್ತಿಯನ್ನು ಬೆದರಿಸುವ ವಿಷಯ
 • ವ್ಯಕ್ತಿಯ ಸಾವು, ಗಂಭೀರ ರೋಗ, ದೈಹಿಕ ಅಥವಾ ಇತರ ಹಾನಿಗಾಗಿ ಬಯಸುವ ವಿಷಯ
 • ಹಿಂಸೆ ಅಥವಾ ಸಂಯೋಜಿತ ಕಿರುಕುಳವನ್ನು ಪ್ರಚೋದಿಸುವ ವಿಷಯ
 • ಬಳಕೆದಾರರ ಲೈಂಗಿಕ ಚಟುವಟಿಕೆಗಳನ್ನು ಅವಹೇಳನ ಮಾಡುವ ಮೂಲಕ ಅಥವಾ ಅನಪೇಕ್ಷಿತ ಲೈಂಗಿಕ ಸಂಪರ್ಕಕ್ಕೆ ಪ್ರಯತ್ನಿಸುವ ಮೂಲಕ ಅವರಿಗೆ ಲೈಂಗಿಕವಾಗಿ ಕಿರುಕುಳಗಳನ್ನು ನೀಡುವ ವಿಷಯ
 • ಬುದ್ಧಿಮತ್ತೆ, ನೋಟ, ವ್ಯಕ್ತಿತ್ವ, ಲಕ್ಷಣಗಳು ಅಥವಾ ನೈರ್ಮಲ್ಯದಂತಹ ಗುಣಲಕ್ಷಣಗಳ ಆಧಾರದಲ್ಲಿ ಖಾಸಗಿ ವ್ಯಕ್ತಿಯನ್ನು ಅವಹೇಳನ ಮಾಡುವ ವಿಷಯ
 • ಹಿಂಸಾತ್ಮಕ ದುರಂತಗಳನ್ನು ಶ್ಲಾಘಿಸುವ ಮತ್ತು ಅವುಗಳಿಗೆ ತುತ್ತಾದವರನ್ನು ಅವಹೇಳನ ಮಾಡುವ ವಿಷಯ
 • ಇತರ ಬಳಕೆದಾರರನ್ನು ಗುರಿಯಾಗಿಸಿ ನಿಂದನೀಯ ವಿಷಯವನ್ನು ರಚಿಸಲು TikTok ನ ಡ್ಯೂಯೆಟ್, ರಿಯಾಕ್ಟ್ ಅಥವಾ ಎಫೆಕ್ಟ್‌ಗಳನ್ನು ಬಳಸುವ ವಿಷಯ

ಇತರರ ಗೌಪ್ಯತೆಯನ್ನು ಉಲ್ಲಂಘಿಸುವುದು

ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಬಹಿರಂಗಪಡಿಸುವುದು ಅಥವಾ ಬಹಿರಂಗಪಡಿಸುವ ಬೆದರಿಕೆಯನ್ನು ಒಡ್ಡುವುದು ಗಂಭೀರವಾದ ಭಾವನಾತ್ಮಕ ಯಾತನೆಯನ್ನು ಉಂಟುಮಾಡಬಹುದು ಮತ್ತು ನೈಜ-ಜಗತ್ತಿನ ಹಾನಿಗೆ ಕಾರಣವಾಗಬಹುದು. ನಾವು ಇದನ್ನು ನಿಂದನೆಯ ರೂಪವೆಂದು ಪರಿಗಣಿಸುತ್ತೇವೆ ಮತ್ತು TikTok ನಲ್ಲಿ ಅದನ್ನು ಅನುಮತಿಸುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ವಾಸಸ್ಥಳದ ವಿಳಾಸ, ಖಾಸಗಿ ಇಮೇಲ್ ವಿಳಾಸ, ಖಾಸಗಿ ಫೋನ್ ಸಂಖ್ಯೆ, ಬ್ಯಾಂಕ್ ಸ್ಟೇಟ್‌ಮೆಂಟ್, ಸಾಮಾಜಿಕ ಭದ್ರತೆ ಸಂಖ್ಯೆ ಅಥವಾ ಪಾಸ್‌ಪೋರ್ಟ್ ಸಂಖ್ಯೆಯನ್ನು ಒಳಗೊಂಡು ಆದರೆ ಇವುಗಳಿಗೆ ಸೀಮಿತವಾಗಿರದಂತೆ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಬಹಿರಂಗಪಡಿಸುವ ಅಥವಾ ಬಹಿರಂಗಪಡಿಸುವ ಬೆದರಿಕೆ ಒಡ್ಡುವ ವಿಷಯ
 • ಲೈಂಗಿಕ ಚಿತ್ರ ಅಥವಾ ಸಮ್ಮತವಲ್ಲದ ಸಲಿಗೆಯ ಚಿತ್ರವನ್ನು ಬಹಿರಂಗಪಡಿಸುವ ಬೆದರಿಕೆಗಳು


ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಗಳು

ಲೈಂಗಿಕವಾಗಿ ಸುಸ್ಪಷ್ಟ ಅಥವಾ ಆಹ್ಲಾದದ ವಿಷಯವನ್ನು, ಈ ಸ್ವರೂಪದ ಆನಿಮೇಟೆಡ್ ವಿಷಯವನ್ನು ಒಳಗೊಂಡಂತೆ TikTok ನಲ್ಲಿ ನಾವು ಅನುಮತಿಸುವುದಿಲ್ಲ. ಲೈಂಗಿಕತೆಯ ವಿಷಯವು ಹಲವು ಅಪಾಯಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಕೆಲವು ನ್ಯಾಯವ್ಯಾಪ್ತಿಗಳಲ್ಲಿ ಕಾನೂನು ದಂಡಗಳಿಗೆ ಕಾರಣವಾಗುವುದು ಮತ್ತು ಸಮ್ಮತವಲ್ಲದ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ನಮ್ಮ ಬಳಕೆದಾರರಿಗೆ ಹಾನಿಯನ್ನು ಉಂಟುಮಾಡುವುದು (ಉದಾಹರಣೆಗೆ, ಸೇಡಿನ ಅಶ್ಲೀಲತೆ). ಹಾಗೆಯೇ, ಬಹಿರಂಗವಾದ ಲೈಂಗಿಕ ವಿಷಯವು ಕೆಲವು ಸಂಸ್ಕೃತಿಗಳಲ್ಲಿ ನಿಂದನೀಯವಾಗಿರಬಹುದು. ಶೈಕ್ಷಣಿಕ ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಉದ್ದೇಶಗಳಿಗಾಗಿ ನಗ್ನತೆ ಮತ್ತು ಲೈಂಗಿಕ ಸುಸ್ಪಷ್ಟ ವಿಷಯದ ಕುರಿತು ನಾವು ವಿನಾಯಿತಿಯನ್ನು ನೀಡುತ್ತೇವೆ. ಉದಾಹರಣೆಗೆ, ಸ್ತನಛೇದನದ ಗಾಯದ ಗುರುತಿನ ಕುರಿತಾದ ಚರ್ಚೆಯನ್ನು ಅಥವಾ ಅದನ್ನು ತೋರಿಸುವ ವಿಷಯವನ್ನು ಅನುಮತಿಸಲಾಗುತ್ತದೆ.

ಲೈಂಗಿಕ ಶೋಷಣೆ

ಲೈಂಗಿಕ ಶೋಷಣೆಯು ತುತ್ತಾಗುವ ಸ್ಥಿತಿಯ, ಸ್ಥಾನಮಾನದ ಅಥವಾ ಲೈಂಗಿಕ ಉದ್ದೇಶಗಳಿಗಾಗಿನ ನಂಬಿಕೆಯ ಯಾವುದೇ ನೈಜವಾದ ಅಥವಾ ಪ್ರಯತ್ನಿಸಿದ ನಿಂದನೆಯಾಗಿದ್ದು, ಇದರಲ್ಲಿ ಮತ್ತೊಬ್ಬರು ಲೈಂಗಿಕ ಶೋಷಣೆಯಿಂದ ಹಣಕಾಸು, ಸಾಮಾಜಿಕ ಅಥವಾ ರಾಜಕೀಯವಾಗಿ ಲಾಭ ಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ : 

 • ಸಮ್ಮತವಲ್ಲದ ಲೈಂಗಿಕ ಕ್ರಿಯೆಗಳನ್ನು ವರ್ಣಿಸುವ, ಉಂಟಾಗುವ ಅಥವಾ ಪ್ರಚೋದಿಸುವ ವಿಷಯ
 • ಲೈಂಗಿಕ ಕೋರಿಕೆ ಅಥವಾ ಲೈಂಗಿಕ ವಿಷಯೀಕರಣವನ್ನು ಉಂಟುಮಾಡುವ, ಪ್ರಚಾರ ಮಾಡುವ ಅಥವಾ ವೈಭವೀಕರಿಸುವ ವಿಷಯ

ವಯಸ್ಕರನ್ನು ಒಳಗೊಂಡಿರುವ ಅಶ್ಲೀಲತೆ ಮತ್ತು ನಗ್ನತೆ

ಲೈಂಗಿಕ ಸಂತೃಪ್ತಿಯ ಉದ್ದೇಶಕ್ಕಾಗಿ ಲೈಂಗಿಕ ಅಂಗಗಳು ಮತ್ತು/ಅಥವಾ ಚಟುವಟಿಕೆಗಳನ್ನು ಸುಸ್ಪಷ್ಟವಾಗಿ ವರ್ಣಿಸುವ ಅಶ್ಲೀಲತೆ. 
ಇವುಗಳನ್ನು ಪೋಸ್ಟ್ ಮಾಡಬೇಡಿ : 

 • ಸಂಭೋಗ, ಸಂಭೋಗ ರಹಿತ ಲೈಂಗಿಕತೆ ಅಥವಾ ಮುಖ ರತಿಯಂತಹ ಲೈಂಗಿಕ ಚಟುವಟಿಕೆಗಳನ್ನು ವರ್ಣಿಸುವ ವಿಷಯ
 • ಮಾನವನ ಜನನಾಂಗಗಳು, ಮಹಿಳೆಯರ ಮೊಲೆತೊಟ್ಟುಗಳು ಅಥವಾ ಪೃಷ್ಠವನ್ನು ತೋರಿಸುವ ವಿಷಯ
 • ಲೈಂಗಿಕ ಉದ್ರೇಕವನ್ನು ವರ್ಣಿಸುವ ವಿಷಯ
 • ಲೈಂಗಿಕ ಕಾಮನೆಯನ್ನು ವರ್ಣಿಸುವ ವಿಷಯ 


ಅಪ್ರಾಪ್ತರ ಸುರಕ್ಷತೆ

ಮಕ್ಕಳ ಸುರಕ್ಷತೆಯ ಕುರಿತು ನಾವು ತೀವ್ರವಾಗಿ ಬದ್ಧರಾಗಿದ್ದೇವೆ ಮತ್ತು ಅಪ್ರಾಪ್ತರನ್ನು ನಂಬಿಸುವಂತೆ ಮಾಡುವ ಅಥವಾ ಅವರೊಂದಿಗೆ ಸಂಬಂಧ ಬೆಳೆಸುವ ನಡವಳಿಕೆಗಾಗಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ಡಿಜಿಟಲ್ ಮತ್ತು ನೈಜ ಜಗತ್ತಿನ ಸ್ವರೂಪ ಹೀಗೆ ಎರಡರಲ್ಲೂ ಮಕ್ಕಳ ನಿಂದನೆ, ಮಕ್ಕಳ ನಗ್ನತೆ ಅಥವಾ ಲೈಂಗಿಕ ಶೋಷಣೆಯನ್ನು ವರ್ಣಿಸುವ ಅಥವಾ ಪ್ರಸಾರ ಮಾಡುವ ವಿಷಯವನ್ನು ನಾವು ಅನುಮತಿಸುವುದಿಲ್ಲ ಮತ್ತು ಅಂತಹ ವಿಷಯವನ್ನು ನಾವು ಸಂಬಂಧಿತ ಕಾನೂನು ಅಧಿಕಾರಿಗಳಿಗೆ ವರದಿ ಮಾಡುತ್ತೇವೆ. ಹಾಗೆಯೇ ಅಪರಾಧದ ನಡವಳಿಕೆಯಲ್ಲಿ ತೊಡಗಿಕೊಂಡಿರುವ ಅಪ್ರಾಪ್ತರನ್ನು ವರ್ಣಿಸುವ ವಿಷಯವನ್ನು ಸಹ ನಾವು ಅನುಮತಿಸುವುದಿಲ್ಲ. 

TikTok ಬಳಸುವುದಕ್ಕಾಗಿ ಬಳಕೆದಾರರು ಕನಿಷ್ಠ ವಯಸ್ಸಿನ ಅಗತ್ಯತೆಗಳನ್ನು ಪೂರೈಸಬೇಕು (ನಮ್ಮ ಸೇವೆಗಳ ನಿಯಮಗಳು ಎಂಬಲ್ಲಿ ತಿಳಿಸಿರುವಂತೆ). ಅಪ್ರಾಪ್ತ ಖಾತೆದಾರರನ್ನು ಗುರುತಿಸಿದಾಗ, ಅವರ ಖಾತೆಗಳನ್ನು ನಮ್ಮ ವೇದಿಕೆಯಿಂದ ನಾವು ತೆಗೆದುಹಾಕುತ್ತೇವೆ ಮತ್ತು ಒಂದು ವೇಳೆ ಅವರ ಪ್ರದೇಶದಲ್ಲಿ ಲಭ್ಯವಿದ್ದರೆ ಹೆಚ್ಚು ಸೂಕ್ತವಾದ ಆ್ಯಪ್ ಅನುಭವಕ್ಕೆ ಅವರನ್ನು ನಿರ್ದೇಶಿಸುತ್ತೇವೆ.

ಅಪ್ರಾಪ್ತರನ್ನು ಒಳಗೊಂಡಿರುವ ನಗ್ನತೆ ಮತ್ತು ಲೈಂಗಿಕ ಶೋಷಣೆ 

ಖಾಸಗಿ ಭಾಗಗಳನ್ನು ಕಾಣಿಸುವಂತೆತೋರಿಸುವ ವಿಷಯವನ್ನು ನಗ್ನತೆಯು ಒಳಗೊಂಡಿರುತ್ತದೆ. ಲೈಂಗಿಕ ಶೋಷಣೆಯು ತುತ್ತಾಗುವ ಸ್ಥಿತಿಯ, ಸ್ಥಾನಮಾನದ ಅಥವಾ ಲೈಂಗಿಕ ಉದ್ದೇಶಗಳಿಗಾಗಿನ ನಂಬಿಕೆಯ ಯಾವುದೇ ನೈಜವಾದ ಅಥವಾ ಪ್ರಯತ್ನಿಸಿದ ನಿಂದನೆಯಾಗಿದ್ದು, ಇದು ಮತ್ತೊಬ್ಬರು ಲೈಂಗಿಕ ಶೋಷಣೆಯಿಂದ ಹಣಕಾಸು, ಸಾಮಾಜಿಕ ಅಥವಾ ರಾಜಕೀಯವಾಗಿ ಲಾಭ ಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಅಪ್ರಾಪ್ತರ ಖಾಸಗಿ ಭಾಗಗಳನ್ನು ತೋರಿಸುವ ವಿಷಯ
 • ಅಪ್ರಾಪ್ತರ ಲೈಂಗಿಕ ಶೋಷಣೆಯನ್ನು ವರ್ಣಿಸುವ ವಿಷಯ
 • ಅಪ್ರಾಪ್ತರನ್ನು ಒಳಗೊಂಡಿರುವ ಸಂಭೋಗ, ಸಂಭೋಗ ರಹಿತ ಲೈಂಗಿಕತೆ ಅಥವಾ ಮುಖ ರತಿಯಂತಹ ಲೈಂಗಿಕ ಚಟುವಟಿಕೆಗಳನ್ನು ವರ್ಣಿಸುವ ವಿಷಯ
 • ಅಪ್ರಾಪ್ತರನ್ನು ಒಳಗೊಂಡಿರುವ ಲೈಂಗಿಕ ಉದ್ರೇಕವನ್ನು ವರ್ಣಿಸುವ ವಿಷಯ
 • ಅಪ್ರಾಪ್ತರನ್ನು ಒಳಗೊಂಡಿರುವ ಲೈಂಗಿಕ ಕಾಮನೆಯನ್ನು ವರ್ಣಿಸುವ ವಿಷಯ

ಅಪ್ರಾಪ್ತರ ಅಪರಾಧದ ನಡವಳಿಕೆ 

ಅಪರಾಧದ ನಡವಳಿಕೆಯಲ್ಲಿ ಮಾದಕ ಪದಾರ್ಥಗಳು, ಮದ್ಯಪಾನ ಮತ್ತು ತಂಬಾಕಿನ ಸೇವನೆ ಅಥವಾ ಬಳಕೆಯನ್ನು ಒಳಗೊಂಡಿರುತ್ತದೆ ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ.  
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಮದ್ಯ ಪಾನೀಯಗಳು, ಮಾದಕ ಪದಾರ್ಥಗಳು ಅಥವಾ ತಂಬಾಕನ್ನು ಅಪ್ರಾಪ್ತರು ಸೇವಿಸುವುದನ್ನು, ಹೊಂದಿರುವುದನ್ನು ಅಥವಾ ಅವುಗಳನ್ನು ಸೇವನೆಯ ಶಂಕೆಯನ್ನು ವರ್ಣಿಸುವ ವಿಷಯ

ಮಗುವಿನ ಶೋಷಣೆ

ಅಧಿಕಾರವನ್ನು ಹೊಂದಿರುವ ವ್ಯಕ್ತಿಯು ಅಪ್ರಾಪ್ತರ ಮೇಲೆ ದೈಹಿಕ ಮತ್ತು/ಅಥವಾ ಮಾನಸಿಕ ಆಘಾತವನ್ನು ಪ್ರಚೋದಿಸುವುದನ್ನು ಮಗುವಿನ ಶೋಷಣೆ ಎಂದು ವಿವರಿಸಲಾಗುತ್ತದೆ. ದೈಹಿಕ ಹಾನಿಯು ಮಗುವಿನ ದೇಹದ ಮೇಲೆ ಉದ್ದೇಶಪೂರ್ವಕವಾಗಿ ಗಾಯವನ್ನು ಪ್ರಚೋದಿಸುವ ಕ್ರಿಯೆಯಾಗಿದೆ. ಮಾನಸಿಕ ನಿಂದನೆಯು ದೈಹಿಕ ಅಥವಾ ಲೈಂಗಿಕ ಹಿಂಸೆ ಅಥವಾ ಹೆದರಿಕೆಯ ತಂತ್ರಗಳ ಬೆದರಿಕೆಗಳ ಮೂಲಕ ಮಗುವನ್ನು ತೆಗಳುವ ನಿಂದನೆಯಾಗಿದೆ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಅಪ್ರಾಪ್ತರವನ್ನು ಒಳಗೊಂಡಿರುವ ದೈಹಿಕ ಅಥವಾ ಮಾನಸಿಕ ನಿಂದನೆಯನ್ನು ವರ್ಣಿಸುವ ವಿಷಯ

ಅನೈತಿಕ ಸಂಬಂಧ ಬೆಳೆಸುವ ನಡವಳಿಕೆ

ಸಂಬಂಧ ಬೆಳೆಸುವ ನಡವಳಿಕೆಯು ವಯಸ್ಕರು ಲೈಂಗಿಕ ನಿಂದನೆ, ಲೈಂಗಿಕ ಶೋಷಣೆ ಅಥವಾ ಲೈಂಗಿಕ ದುರ್ಬಳಕೆಯ ಉದ್ದೇಶಗಳಿಗಾಗಿ ಅಪ್ರಾಪ್ತರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಲು ಅವರ ನಂಬಿಕೆಯನ್ನು ಗಳಿಸಿಕೊಳ್ಳುವುದಾಗಿದೆ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಅನೈತಿಕ ಸಂಬಂಧ ಬೆಳೆಸುವ ನಡವಳಿಕೆಯನ್ನು ಉತ್ತೇಜಿಸುವ, ಸೂಚಿಸುವ ಅಥವಾ ಸಮರ್ಥಿಸುವ ವಿಷಯ 
 • ಅಪ್ರಾಪ್ತರನ್ನು ಲೈಂಗಿಕ ಶೋಷಣೆ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವ ವಿಷಯ
 • ಲೈಂಗಿಕವಾಗಿ ಸುಸ್ಪಷ್ಟವಾದ ವಿಷಯವಸ್ತುವನ್ನು ಹಂಚಿಕೊಳ್ಳುವಂತೆ ಮಗುವನ್ನು ಪ್ರೋತ್ಸಾಹಿಸುವ ಅಥವಾ ವಂಚನೆಯಿಂದ ಬೆದರಿಕೆ ಒಡ್ಡುವ ವಿಷಯ

ಅಪ್ರಾಪ್ತರ ಲೈಂಗಿಕತೆ

ಲೈಂಗಿಕತೆಯನ್ನು ಹೇರುವ ಅಥವಾ ಅಪ್ರಾಪ್ತರನ್ನು ಲೈಂಗಿಕವಾಗಿ ವಿಷಯೀಕರಿಸುವ ವಿಷಯವನ್ನು ನಾವು ಅನುಮತಿಸುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಅಪ್ರಾಪ್ತರನ್ನು ಒಳಗೊಂಡಿರುವ ಕಾಮಪ್ರಚೋದಕ ನೃತ್ಯಗಳನ್ನು ವರ್ಣಿಸುವ ವಿಷಯ
 • ಅಪ್ರಾಪ್ತರನ್ನು ಒಳಗೊಂಡಿರುವ ಲೈಂಗಿಕ ಅಥವಾ ಕಾಮಪ್ರಚೋದಕ ಭಾಷೆಯ ವಿಷಯ


ಸಮಗ್ರತೆ ಮತ್ತು ನೈಜವಾಗಿರುವಿಕೆ

ನಮ್ಮ ಯಾವುದೇ ಸಮುದಾಯ ಸದಸ್ಯರನ್ನು ವಂಚನೆಗೊಳಿಸಲು ಅಥವಾ ಹಾದಿತಪ್ಪಿಸಲು ಉದ್ದೇಶಿತವಾಗಿರುವ ವಿಷಯವು ನಮ್ಮ ನಂಬಿಕೆ-ಆಧಾರಿತ ಸಮುದಾಯಕ್ಕೆ ಅಪಾಯವನ್ನು ತರುತ್ತದೆ. ನಮ್ಮ ವೇದಿಕೆಯಲ್ಲಿ ಅಂತಹ ವಿಷಯವನ್ನು ನಾವು ಅನುಮತಿಸುವುದಿಲ್ಲ. ಇದು ಸ್ಪ್ಯಾಮಿಂಗ್, ಸೋಗು ಹಾಕುವಿಕೆ ಮತ್ತು ತಪ್ಪು ಮಾಹಿತಿಯ ಪ್ರಚಾರಗಳಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

ಸ್ಪ್ಯಾಮ್

ವೇದಿಕೆಯಲ್ಲಿ ಕೃತಕವಾಗಿ ಜನಪ್ರಿಯತೆಯನ್ನು ಹೆಚ್ಚಿಸಲು ಕೋರುವ ವಿಷಯ ಅಥವಾ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಸಂವಹನ ಮೆಟ್ರಿಕ್ಸ್ ಅನ್ನು ಹೆಚ್ಚಿಸಲು ವೇದಿಕೆಯ ವ್ಯವಸ್ಥೆಗಳನ್ನು ದುರುಪಯೋಗ ಮಾಡುವ ಯಾವುದೇ ಪ್ರಯತ್ನಗಳನ್ನು ಸಹ ನಾವು ನಿಷೇಧಿಸುತ್ತೇವೆ. 
ಇವುಗಳನ್ನು ಮಾಡಬೇಡಿ:

 • ಕೃತಕವಾಗಿ ಹೇಗೆ ವೀಕ್ಷಣೆಗಳು, ಇಷ್ಟಗಳು, ಅನುಯಾಯಿಗಳು, ಹಂಚಿಕೆಗಳು ಅಥವಾ ಕಾಮೆಂಟ್‌ಗಳನ್ನು ಹೆಚ್ಚಿಸುವುದು ಎಂಬ ಕುರಿತು ಸೂಚನೆಗಳನ್ನು ಹಂಚಿಕೊಳ್ಳುವುದು
 • ವೀಕ್ಷಣೆಗಳು, ಇಷ್ಟಗಳು, ಅನುಯಾಯಿಗಳು, ಹಂಚಿಕೆಗಳು ಅಥವಾ ಕಾಮೆಂಟ್‌ಗಳನ್ನು ಮಾರಾಟ ಮಾಡುವ ಅಥವಾ ಖರೀದಿಸುವ ಪ್ರಯತ್ನ ಅಥವಾ ಅವುಗಳಲ್ಲಿ ತೊಡಗಿಸಿಕೊಂಡಿರುವುದು
 • ಕೃತಕ ಟ್ರಾಫಿಕ್ ನಿರ್ಮಿಸುವ ಸೇವೆಗಳನ್ನು ಪ್ರಚಾರ ಮಾಡುವುದು
 • ಅನಧಿಕೃತ ಚಟುವಟಿಕೆಯನ್ನು ನಿರ್ಮಿಸುವುದು, ವಾಣಿಜ್ಯಿಕ ಸ್ಪ್ಯಾಮ್ ವಿತರಿಸುವುದನ್ನು ಒಳಗೊಂಡಂತೆ ಸಹಯೋಗ ಮಾಡಲಾದ ಪ್ರಯತ್ನಗಳು ಅಥವಾ ಇಲ್ಲವೇ TikTok ನೀತಿಗಳಿಗೆ ಅನುಗಣವಾದ ಉಲ್ಲಂಘನೆಯನ್ನು ಸಹಯೋಗ ಮಾಡುವುದನ್ನು ಒಳಗೊಂಡಂತೆ ತಪ್ಪಾದ ಅಥವಾ ವಂಚನೆಯ ಸುಳ್ಳುನೆಪದ ಅಡಿಯಲ್ಲಿ ಬಹು TikTok ನೀತಿಗಳನ್ನು ನಿರ್ವಹಣೆ ಮಾಡುವುದು

ಸೋಗು ಹಾಕುವಿಕೆ

ಸಾರ್ವಜನಿಕರನ್ನು ವಂಚನೆ ಮಾಡುವುದಕ್ಕಾಗಿ ಇತರ ವ್ಯಕ್ತಿಗಳು ಅಥವಾ ಸಂಸ್ಥೆಗಳಂತೆಯೇ ಸುಳ್ಳುನಟನೆ ಮಾಡಲು ಬಳಕೆದಾರರಿಗೆ ನಾವು ಅನುಮತಿಸುವುದಿಲ್ಲ. ಸೋಗು ಹಾಕುವಿಕೆಯ ವರದಿಗಳನ್ನು ನಾವು ದೃಢಪಡಿಸಿದಾಗ, ಉಲ್ಲಂಘನೆಯ ಖಾತೆಗಳನ್ನು ನಾವು ತೆಗೆದುಹಾಕುತ್ತೇವೆ. ಖಾತೆಗಳು TikTok ನಲ್ಲಿ ಅವುಗಳ ಗುರುತು ಅಥವಾ ಉದ್ದೇಶಕ್ಕೆ ಸಂಬಂಧಿಸಿದಂತೆ ಇತರರ ಹಾದಿ ತಪ್ಪಿಸದೇ ಇರುವ ತನಕ, ವಿಡಂಬನೆ, ಕಾಮೆಂಟರಿ ಅಥವಾ ಅಭಿಮಾನಿ ಖಾತೆಗಳಿಗೆ ನಾವು ವಿನಾಯಿತಿಯನ್ನು ಅನುಮತಿಸುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ: 

 • ಮತ್ತೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಾಗಿ ಬೇರೊಬ್ಬರ ಹೆಸರು, ಜೀವನಚರಿತ್ರೆಯ ವಿವರಗಳು ಅಥವಾ ಪ್ರೊಫೈಲ್ ಚಿತ್ರವನ್ನು ಹಾದಿ ತಪ್ಪಿಸುವ ರೀತಿಯಲ್ಲಿ ಬಳಸುವ ಮೂಲಕ

ಹಾದಿ ತಪ್ಪಿಸುವ ಮಾಹಿತಿ

ನಮ್ಮ ಸಮುದಾಯಕ್ಕೆ ಅಥವಾ ಸಾರ್ವಜನಿಕರ ದೊಡ್ಡ ಸಮುದಾಯಕ್ಕೆ ಹಾನಿಯನ್ನು ಉಂಟು ಮಾಡಬಹುದಾದ ತಪ್ಪಾದ ಮಾಹಿತಿಯನ್ನು ನಾವು ಅನುಮತಿಸುವುದಿಲ್ಲ. ನಮ್ಮ ಬಳಕೆದಾರರಿಗೆ ಅವರಿಗೆ ಪ್ರಮುಖವಾಗಿರುವ ವಿಷಯಗಳ ಕುರಿತು ಗೌರವಪೂರ್ಣವಾಗಿ ಸಂಭಾಷಣೆಗಳನ್ನು ಮಾಡುವಂತೆ ನಾವು ಉತ್ತೇಜಿಸುವುದಾದರೂ, ವ್ಯಕ್ತಿಯ ಆರೋಗ್ಯ ಅಥವಾ ದೊಡ್ಡ ಪ್ರಮಾಣದ ಸಾರ್ವಜನಿಕರ ಸುರಕ್ಷತೆಗೆ ಹಾನಿಯನ್ನು ಉಂಟುಮಾಡಬಹುದಾದ ತಪ್ಪಾದ ಮಾಹಿತಿಯನ್ನು ನಾವು ತೆಗೆದುಹಾಕುತ್ತೇವೆ. ತಪ್ಪು ಮಾಹಿತಿ ಪ್ರಚಾರಗಳಿಂದ ವಿತರಿಸಲಾದ ವಿಷಯವನ್ನು ಸಹ ನಾವು ತೆಗೆದು ಹಾಕುತ್ತೇವೆ. 
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ತಪ್ಪಾದ ಮಾಹಿತಿಯು ಭಯವನ್ನು, ದ್ವೇಷವನ್ನು ಅಥವಾ ಪೂರ್ವಾಗ್ರಹವನ್ನು ಪ್ರಚೋದಿಸಲು ಉದ್ದೇಶಿತವಾಗಿದೆ
 • ವೈದ್ಯಕೀಯ ಚಿಕಿತ್ಸೆಗಳ ಕುರಿತು ಹಾದಿ ತಪ್ಪಿಸುವ ಮಾಹಿತಿಯಂತಹ ವ್ಯಕ್ತಿಯ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದಾದ ತಪ್ಪು ಮಾಹಿತಿ
 • ಹಾನಿಯನ್ನು ಉಂಟುಮಾಡುವುದಕ್ಕಾಗಿ ಇರುವ ಚೇಷ್ಟೆಗಳು, ಫಿಶಿಂಗ್ ಪ್ರಯತ್ನಗಳು ಅಥವಾ ದುರುಪಯೋಗಪಡಿಸಿಕೊಂಡ ವಿಷಯ
 • ಚುನಾವಣೆಗಳು ಅಥವಾ ಇತರ ನಾಗರಿಕ ಪ್ರಕ್ರಿಯೆಗಳ ಕುರಿತು ಸಮುದಾಯ ಸದಸ್ಯರನ್ನು ಹಾದಿ ತಪ್ಪಿಸುವ ವಿಷಯ 

ಬೌದ್ಧಿಕ ಆಸ್ತಿ

ಮೂಲ ವಿಷಯವನ್ನು ರಚಿಸುವಂತೆ ಮತ್ತು ಹಂಚಿಕೊಳ್ಳುವಂತೆ ಪ್ರತಿಯೊಬ್ಬರನ್ನು ನಾವು ಉತ್ತೇಜಿಸುತ್ತೇವೆ. ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ವಿಷಯವನ್ನು ಪ್ರಕಟಿಸಲು ಅಥವಾ ವಿತರಿಸಲು ಬಳಕೆದಾರರಿಗೆ ನಾವು ಅನುಮತಿಸುವುದಿಲ್ಲ.
ಇವುಗಳನ್ನು ಪೋಸ್ಟ್ ಮಾಡಬೇಡಿ:

 • ಬೇರೊಬ್ಬರ ಕೃತಿಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಅಥವಾ ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಅತಿಕ್ರಮಿಸುವ ವಿಷಯ


ವೇದಿಕೆಯ ಸುರಕ್ಷತೆಗೆ ಬೆದರಿಕೆಗಳು

ಮೇಲೆ ವಿವರಿಸಲಾದ ವಿಷಯ ಮತ್ತು ನಡವಳಿಕೆಯ ಜೊತೆಗೆ, TikTok ಸೇವೆಯನ್ನು ದುರ್ಬಲಗೊಳಿಸುವ ಚಟುವಟಿಕೆಗಳನ್ನು ನಮ್ಮ ನೀತಿಗಳು ನಿಷೇಧಿಸುತ್ತವೆ:

 • TikTokವೆಬ್‌ಸೈಟ್, ಆಪ್ ಅಥವಾ ಸಂಬಂಧಿತ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡಬೇಡಿ ಅಥವಾ ಬಳಕೆದಾರರ ಪ್ರವೇಶವನ್ನು ನಿರ್ಬಂಧಿಸಲು ಅದರ ಕ್ರಮಗಳನ್ನು ಮೀರಿ ನಡೆಯಬೇಡಿ
 • ವೈರಸ್‌ಗಳು, ಟ್ರೋಜಾನ್ ಹಾರ್ಸ್‌ಗಳು, ವರ್ಮ್‌ಗಳು, ಲಾಜಿಕ್ ಬಾಂಬ್‌ಗಳು ಅಥವಾ ದುರುದ್ದೇಶಪೂರಿತ ಅಥವಾ ಹಾನಿಕರವಾಗಿರುವ ಇತರ ವಿಷಯಗಳನ್ನು ಒಳಗೊಂಡಿರುವ ಫೈಲ್‌ಗಳನ್ನು ವಿತರಣೆ ಮಾಡಬೇಡಿ
 • ಯಾವುದೇ ಫೈಲ್‌ಗಳು, ಕೋಷ್ಟಕಗಳು ಅಥವಾ ಡಾಕ್ಯುಮೆಂಟೇಶನ್ ಒಳಗೊಂಡಂತೆ TikTok ಆಧರಿಸಿ ಯಾವುದೇ ಉತ್ಪನ್ನದ ಉತ್ಪನ್ನಗಳನ್ನು ಮಾರ್ಪಡಿಸಬೇಡಿ, ಅಳವಡಿಸಿಕೊಳ್ಳಬೇಡಿ, ಅನುವಾದಿಸಬೇಡಿ, ರಿವರ್ಸ್ ಎಂಜಿನಿಯರ್ ಮಾಡಬೇಡಿ, ಡಿಸ್ಅಸೆಂಬಲ್ ಮಾಡಬೇಡಿ, ಡೀಕಂಪೈಲ್ ಮಾಡಬೇಡಿ ಅಥವಾ ರಚಿಸಬೇಡಿ ಇಲ್ಲವೇ ಯಾವುದೇ ಸೋರ್ಸ್ ಕೋಡ್, ಅಲ್ಗಾರಿದಮ್‌ಗಳು, ವಿಧಾನಗಳು ಅಥವಾ TikTok ನಲ್ಲಿ ಅಂತರ್ಗತವಾಗಿರುವ ಕೌಶಲಗಳನ್ನು ಮರುರಚಿಸಲು ಪ್ರಯತ್ನಿಸಬೇಡಿ
 • TikTok ನಿಂದ ಮಾಹಿತಿಯನ್ನು ಸಂಗ್ರಹಿಸಲು ಆಟೋಮೇಟೆಡ್ ಸ್ಕ್ರಿಪ್ಟ್‌ಗಳನ್ನು ಬಳಸಬೇಡಿ

ನಮ್ಮ ರೋಮಾಂಜಕ ಜಾಗತಿಕ ಸಮುದಾಯದ ಭಾಗವಾಗಿರುವುದಕ್ಕೆ ಮತ್ತು ಎಲ್ಲಾ ಬಳಕೆದಾರರಿಗೆ ಸುರಕ್ಷಿತ ಸ್ಥಳವನ್ನು ಕಾಪಾಡಿಕೊಳ್ಳಲು ನಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು. ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂಬುದಾಗಿ ನೀವು ಭಾವಿಸುವ ವಿಷಯ ಅಥವಾ ಖಾತೆಗಳು ನಿಮಗೆ ಕಂಡುಬಂದರೆ, ನಾವು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವಂತೆ ದಯವಿಟ್ಟು ನಮಗೆ ತಿಳಿಸಿ.